Bengaluru 22°C
Ad

ಉಡುಪಿ ಕೃಷ್ಣಮಠದಲ್ಲಿ ಚಿನ್ನ, ನವರತ್ನ ರಥೋತ್ಸವ ಸಂಪನ್ನ

ವಸಂತ ದ್ವಾದಶಿ ಹಾಗೂ ವಿದ್ಯಮಾನ್ಯತೀರ್ಥರ ಉತ್ತರಾಧನೆ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದಲ್ಲಿ ಚಿನ್ನ ಮತ್ತು ನವರತ್ನ ರಥದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಉಡುಪಿ: ವಸಂತ ದ್ವಾದಶಿ ಹಾಗೂ ವಿದ್ಯಮಾನ್ಯತೀರ್ಥರ ಉತ್ತರಾಧನೆ ಪ್ರಯುಕ್ತ ಉಡುಪಿ ಶ್ರೀಕೃಷ್ಣಮಠದಲ್ಲಿ ಚಿನ್ನ ಮತ್ತು ನವರತ್ನ ರಥದ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಚಿನ್ನದ ರಥದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಮೂರ್ತಿಯನ್ನು ಹಾಗೂ ನವರತ್ನ ರಥದಲ್ಲಿ ವಿದ್ಯಾಮಾನ್ಯತೀರ್ಥರ ಭಾವಚಿತ್ರ ಹಾಗೂ ಅವರು ರಚಿಸಿರುವ ಗ್ರಂಥಗಳನ್ನು ಇಟ್ಟು, ವಿವಿಧ ಬಗೆಯ ವಾದ್ಯ ಸೇವೆಯೊಂದಿಗೆ ರಥೋತ್ಸವವನ್ನು ಅತ್ಯಂತ ವೈಭವದಿಂದ ನಡೆಸಲಾಯಿತು.

ಪುತ್ತಿಗೆ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಈ ರಥೋತ್ಸವವು ಅತ್ಯಂತ ಸಂಭ್ರಮದಿಂದ ನಡೆಯಿತು. ನಂತರ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಗ್ರಿ ರಾಘವೇಂದ್ರ ಉಪಾಧ್ಯಯರಿಂದ ಸಂಪಾದಿತ ವಿಧ್ಯಾಮಾನ್ಯತೀರ್ಥ ಸಂದೇಶ ರತ್ನಮಾಲಾ ಗ್ರಂಥದ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಂತರ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

Ad
Ad
Nk Channel Final 21 09 2023
Ad