Bengaluru 28°C
Ad

ಹಿಮಾಲಯ ಎವರೆಸ್ಟ್ ಬೇಸ್ ಚಾರಣದಲ್ಲಿ ಯಶಸ್ವಿಯಾದ ಮಧುಗಿರಿಯ ವಾಸವಿ ಮೆಡಿಕಲ್ ಸ್ಟೋರ್ ಕಮಲೇಶ್

ಪ್ರಪಂಚದ ಅತಿ ಎತ್ತರದ ಪರ್ವತ ಶ್ರೇಣಿಯಾದ ಹಿಮಾಲಯ ಪರ್ವತದ ಮೌಂಟ್ ಎವರೆಸ್ಟ್ ಶಿಖರವು ಸಮುದ್ರಮಟ್ಟದಿಂದ 8,849 ಮೀಟರ್ ಅಂದರೆ 29 ಸಾವಿರದ ಮೂವತ್ತೊಂದು ಅಡಿ ಎತ್ತರವಿದೆ.

ಮಧುಗಿರಿ: ಪ್ರಪಂಚದ ಅತಿ ಎತ್ತರದ ಪರ್ವತ ಶ್ರೇಣಿಯಾದ ಹಿಮಾಲಯ ಪರ್ವತದ ಮೌಂಟ್ ಎವರೆಸ್ಟ್ ಶಿಖರವು ಸಮುದ್ರಮಟ್ಟದಿಂದ 8,849 ಮೀಟರ್ ಅಂದರೆ 29 ಸಾವಿರದ ಮೂವತ್ತೊಂದು ಅಡಿ ಎತ್ತರವಿದೆ.

ಇದರ ಬೇಸ್ ಕ್ಯಾಂಪ್ ಎತ್ತರವು 5,364 ಮೀಟರ್ ಅಂದರೆ ಸುಮಾರು 18,000 ಅಡಿಗಳು ಆಗಿದ್ದು ಮೌಂಟ್ ಎವರೆಸ್ಟ್ ನ ಶೇಕಡ 60ರಷ್ಟು ಭಾಗವಾಗಿರುತ್ತದೆ. ಈ ಬೇಸ್ ಕ್ಯಾಂಪ್ಗೆ ಹೋಗಿ ಬರುವುದು ತುಂಬಾ ಸಾಹಸದ ವಿಷಯವಾಗಿದ್ದು ಯಾವುದೇ ವ್ಯಕ್ತಿಯು ಇಲ್ಲಿಗೆ ಹೋಗಿ ಬರಲು ತುಂಬಾ ಪೂರ್ವ ತಯಾರಿ ಮಾಡಬೇಕು.

ಸ (1)

ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಹವಾಮಾನ ವೈಪರಿತ್ಯಗಳನ್ನು ಮೆಟ್ಟಿ ನಿಲ್ಲಲು ಶಕ್ತನಾಗಿರಬೇಕು. ಅಲ್ಲಿಯ ನೈಸರ್ಗಿಕ ಹವಾಗುಣಗಳಾದ ಚಳಿ, ಆಮ್ಲಜನಕದ ಕೊರತೆ , ಭೂಕುಸಿತ, ನೀರು ಹಾಗೂ ಆಹಾರದ ಅಭಾವಕ್ಕೆ ಹೊಂದಿಕೊಂಡು ದೈತ್ಯ ಪರ್ವತಗಳ ಚಾರಣ ಮಾಡುವುದು ತುಂಬಾ ಸಾಹಸಮಯ ಕೆಲಸವೇ ಸರಿ.

ಈ ಸಾಹಸವನ್ನು ಇತ್ತೀಚೆಗೆ ಮಧುಗಿರಿ ವಾಸವಿ ಮೆಡಿಕಲ್ಸ್ನ ಸ್ಟೋರ್ ಮಾಲೀಕರಾದ ಎಸ್.ಎ. ಕಮಲೇಶ್ ರವರು ತಮ್ಮ ಸ್ನೇಹಿತರೊಂದಿಗೆ ಯಶಸ್ವಿಯಾಗಿ ಮುಗಿಸಿರುವುದು ತುಂಬಾ ಹೆಮ್ಮೆಯ ಹಾಗೂ ಸಾಹಸದ ಸಂಗತಿಯೇ ಸರಿ. ಈ ಚಾರಣಕ್ಕೆ ಪ್ರಪಂಚದ ಹಲವು ದೇಶಗಳ ಸಾಹಸಿಗಳು ಶ್ರಮವಹಿಸಿ ಯಶಸ್ಸನ್ನು ಕಾಣುತ್ತಾರೆ.

೧

ಎಸ್. ಎ. ಕಮಲೇಶ್ ರವರು ನಮ್ಮ ಭಾರತ ದೇಶವನ್ನು ಪ್ರತಿನಿಧಿಸಿ ಹಿಮಾಲಯ ಪರ್ವತದ 160 ಕಿಲೋಮೀಟರ್ ನ ಚಾರಣವನ್ನು ಯಶಸ್ವಿಯಾಗಿ ಮುಗಿಸಿ ಹಲವಾರು ಜನರ, ಸಂಘ ಸಂಸ್ಥೆಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಸಂಧರ್ಭದಲ್ಲಿ ಮಧುಗಿರಿ ಮೆಡಿಕಲ್ಸ್ ನವರು ಕಮಲೇಶ್ ಅವರನ್ನು ಸನ್ಮಾನಿಸಲಾಯಿತು.

Ad
Ad
Nk Channel Final 21 09 2023
Ad