Ad

ಬಂಗಾರದ ಬೈಕ್‌ನಲ್ಲಿ ಓಡಾಡೋ ಗೋಲ್ಡ್‌ಮ್ಯಾನ್‌; ವಿಡಿಯೋ ನೋಡಿ

Goldman

ಬಿಹಾರ: ಬಿಹಾರದ ಗೋಲ್ಡ್ ಮ್ಯಾನ್ ಎಂದು ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ತಮ್ಮ ಚಿನ್ನದ ಪ್ರೀತಿಯಿಂದ ಗಮನಾರ್ಹ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ದೇಹದ ಮೇಲೆ ಸುಮಾರು ಐದು ಕಿಲೋಗ್ರಾಂಗಳಷ್ಟು ಮತ್ತು 400 ಗ್ರಾಂ ಚಿನ್ನ ಧರಿಸುವುದರ ಜತೆಗೆ ಬೈಕ್​ ಕೂಡಾ ಬಂಗಾರದ್ದೆ ಆಗಿದೆ.

Ad
300x250 2

ಈ ಕುರಿತಾದ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಪ್ರೇಮ್ ಸಿಂಗ್ ಈಗ ತಮ್ಮ ಬೈಕಿಗೂ ಚಿನ್ನ ತೊಡಿಸಿ ಸುದ್ದಿಯಾಗಿದ್ದಾರೆ. ಇವರ ಬೈಕಿನ ಕೆಲ ಭಾಗಗಳು ಚಿನ್ನದ್ದಾಗಿವೆ. ಇದನ್ನು ಬೆಂಗಳೂರಿನಲ್ಲಿ ಮಾಡಿಸಲಾಗಿದೆ ಎನ್ನಲಾಗಿದೆ. ಸುಮಾರು ಏಳರಿಂದ ಎಂಟು ತಿಂಗಳ ಅವಧಿಯಲ್ಲಿ ಈ ಬಂಗಾರದ ಬೈಕ್ ತಯಾರಾಗಿದೆ. ಇದರ ಬೆಲೆ 11ರಿಂದ 12 ಲಕ್ಷ ರೂ. ಎನ್ನಲಾಗಿದೆ.

ಸ್ವರ್ಣದ ಮೇಲಿನ ಮೋಹದಿಂದಾಗಿ ಪ್ರೇಮ್ ಸಿಂಗ್‌ ಬಿಹಾರದ ‘ಬಂಗಾರದ ಮನುಷ್ಯ’ ಎಂದೇ ಖ್ಯಾತರು. ಇವರು ತೊಡುವ ಸರ, ಬಳೆ, ಉಂಗುರಗಳು ಒಟ್ಟು ಐದು ಕೆಜಿ ತೂಗುತ್ತವೆ. ಇವರ ಬೈಕಿನ ಕೆಲ ಭಾಗಗಳು ಚಿನ್ನದ್ದಾಗಿವೆ.

‘ನನ್ನನ್ನು ಜನ ಬಂಗಾರದ ಮನುಷ್ಯ ಎಂದು ಕರೆಯುತ್ತಾರೆ. ಬಿಹಾರದಲ್ಲಿ ಪ್ರಸ್ತುತ ಇರುವ ನಿತೀಶ್ ಕುಮಾರ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಆದ ಕಾರಣ ನನಗೆ ಯಾವುದೇ ಭಯವಿಲ್ಲ. ನನ್ನ ಬೈಕಿನಲ್ಲಿ 150 ರಿಂದ 200 ಗ್ರಾಂ ಚಿನ್ನವಿದೆ’ ಎಂದಿರುವ ಪ್ರೇಮ್ ಸಿಂಗ್ ಇದು ಬಿಹಾರ ಸರ್ಕಾರ ಹಾಗೂ ಬಿಹಾರ ಪೊಲೀಸರ ಪಾಲಿಗೆ ಗೌರವದ ಸಂಗತಿ ಎಂದಿದ್ದಾರೆ.

https://x.com/i/status/1807042556729143523

Ad
Ad
Nk Channel Final 21 09 2023
Ad