Bengaluru 23°C
Ad

ಶಿರಾ: ನಗರ ಸಾರಿಗೆ ಆರಂಭಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದ ಶಾಸಕ ಟಿ.ಬಿ.ಜಯಚಂದ್ರ

ನಗರದಲ್ಲಿ ಇಂದಿನಿಂದ ಪ್ರಾಯೋಗಿಕವಾಗಿ ಎರಡು ರೂಟ್ ಗಳಲ್ಲಿ ನಗರ ಸಾರಿಗೆ ಆರಂಭಿಸಿದ್ದು ಇದು ಯಶಸ್ವಿಯಾದರೆ ನಗರ ಸಾರಿಗೆ ಬಲಪಡಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ: ನಗರದಲ್ಲಿ ಇಂದಿನಿಂದ ಪ್ರಾಯೋಗಿಕವಾಗಿ ಎರಡು ರೂಟ್ ಗಳಲ್ಲಿ ನಗರ ಸಾರಿಗೆ ಆರಂಭಿಸಿದ್ದು ಇದು ಯಶಸ್ವಿಯಾದರೆ ನಗರ ಸಾರಿಗೆ ಬಲಪಡಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಅವರು ನಗರದ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹೊಸ ಬಸ್ ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ನಗರದ ಹೊರವಲಯಕ್ಕೆ ಸಂಚರಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಶಿರಾ ನಗರ ಸಾರಿಗೆ ಆರಂಭಕ್ಕೆ ಚಿಂತನೆ ನೆಡಸಿ ಪ್ರಾಯೋಗಿಕವಾಗಿ ಚಾಲನೆ ನೀಡಿದ್ದು ಡಿಸೆಂಬರ್ ವೇಳೆಗೆ 15 ಬಸ್ ಗಳನ್ನು ನಗರ ಸಂಚಾರಕ್ಕೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಚ (1)

ಶಿರಾ ನಗರವು ವೇಗವಾಗಿ ಬೆಳೆಯುತ್ತಿದ್ದು ಸಂಚಾರ ಠಾಣೆ ಆರಂಭಿಸಲು ಗೃಹ ಇಲಾಖೆಗೆ ಮನವಿ ಮಾಡಿದ್ದು ಅಲ್ಲದೇ ಹೊರ ವರ್ತುಲ ರಸ್ತೆಯ ನೀಲನಕ್ಷೆ ಸಿದ್ದವಾಗಿದ್ದು ಶೀಘ್ರವಾಗಿ ಅನುದಾನ ಬಿಡುಗಡೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ನಗರಸಭೆ ಸದಸ್ಯರಾದ ರಾಧಕೃಷ್ಣ, ಜೀಷನ್ ಅಹಮದ್ ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದ, ನಗರಸಭೆ ಅಯುಕ್ತ ರುದ್ರೇಶ್ ಮತ್ತಿತರರು ಇದ್ದರು.

Ad
Ad
Nk Channel Final 21 09 2023
Ad