Bengaluru 24°C
Ad

ಡೆಂಗ್ಯೂ ಜ್ವರ: ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಮೃತ್ಯು

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.

ಶಿವಮೊಗ್ಗ : ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ. ಡಯಾಲಿಸಿಸ್ ಸಿಬ್ಬಂದಿ ನಾಗರಾಜ್ (35) ಮೃತಪಟ್ಟವರು. ಈ ಮೂಲಕ ತಾಲೂಕಿನಲ್ಲಿ ಹೊಸ ಡೆಂಗ್ಯೂ ಜ್ವರಗಳ ಪ್ರಕರಣಕ್ಕೆ ಒಂದು ಬಲಿಯಾಗಿದೆ.

ನಾಗರಾಜ್ ಅವರು ಕೆಲವು ದಿನಗಳಿಂದ ಡೆಂಗ್ಯೂನಿಂದ ಬಳಲುತ್ತಿದ್ದರು. ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ನಾಗರಾಜ್ ಅವರು ಸಕ್ಕರೆ ಕಾಯಿಲೆ ಸಮಸ್ಯೆಯೂ ಇತ್ತು. ಜತೆಗೆ ಅವರ ರಕ್ತದಲ್ಲಿನ ಪ್ಲೇಟ್​ಲೆಟ್​ ಸಂಖ್ಯೆ 26,000ಕ್ಕೂ ಕಡಿಮೆಯಾಗಿತ್ತು. ನಾಗರಾಜ್​ ಅವರು ಮೃತಪಟ್ಟ ಸುದ್ದಿಯನ್ನು ಸಾಗರ ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಪ್ಪ ಅವರು ದೃಢಪಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad