Ad

ಪ್ರತಿಭಟನೆ ವೇಳೆ ಹೃದಯಾಘಾತ: ಬಿಜೆಪಿ ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ನಿಧನ

Bhanuprakashh

ಶಿವಮೊಗ್ಗ: ಬಿಜೆಪಿ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ (69) ನಿಧನರಾಗಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾನುಪ್ರಕಾಶ್ ಅವರು ಭಾಗಿಯಾಗಿದ್ದರು.

Ad
300x250 2

ಪ್ರತಿಭಟನೆ ನಂತರ ಹೃದಯಾಘವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೆ ಬಿಜೆಪಿ ಕಾರ್ಯಕರ್ತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸ್ವಗ್ರಾಮ ಮತ್ತೂರಿಗೆ ಮೃತದೇಹ ರವಾನೆ ಮಾಡಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದ ಎಂ.ಬಿ ಭಾನುಪ್ರಕಾಶ್​ ಅವರು ಗುರುತಿಸಿಕೊಂಡರು. ಬಿಜೆಪಿ ಎಂ.ಬಿ ಭಾನುಪ್ರಕಾಶ್​ ಅವರನ್ನು ವಿಧಾನ್​ ಪರಿಷತ್​ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕ ಮಾಡಿತ್ತು. ಸರಳ, ಸಜ್ಜನರಾಗಿದ್ದ ಎಂ.ಬಿ ಭಾನುಪ್ರಕಾಶ್​ ಅವರು ಉತ್ಮಮ ವಾಗ್ಮಿಯಾಗಿದ್ದರು. ಇವರು 2001 ರಿಂದ 2005ರ ತನಕ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ವಿಧಾನ ಪರಿಷತ್​ ಸದಸ್ಯಾರಾಗಿ ಆಯ್ಕೆಯಾಗಿದ್ದರು.

Ad
Ad
Nk Channel Final 21 09 2023
Ad