Bengaluru 22°C
Ad

ಟಿವಿಎಸ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಪ್ರಾಣಬಿಟ್ಟ ತಾತ, ಮೊಮ್ಮಗ

ತಾಲೂಕಿನ ಬಸವನಪುರ ಗೇಟ್ ಬಳಿ  ಟಿವಿಎಸ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ತಾತಾ ಮೊಮ್ಮಗ ಮೃತಪಟ್ಟಿರುವ ಘಟನೆ ನಡೆದಿದೆ.

ರಾಮನಗರ: ತಾಲೂಕಿನ ಬಸವನಪುರ ಗೇಟ್ ಬಳಿ  ಟಿವಿಎಸ್​ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ತಾತಾ ಮೊಮ್ಮಗ ಮೃತಪಟ್ಟಿರುವ ಘಟನೆ ನಡೆದಿದೆ.

ಕನಕಪುರ ಮೂಲದ ಯಶಸ್ಸ್ (10) ಚಿಕ್ಕಣ್ಣ (55) ಮೃತ ದುರ್ದೈವಿಗಳು.

ರಾಮನಗರದಿಂದ ಬಿಡದಿಯ ಮಗನ ಮನೆಗೆ ಮೊಮ್ಮಗನ ಕರೆದುಕೊಂಡು ಹೋಗುವಾಗ ಟಿಪರ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಿಂದ ತಾತಾ ಕೆಳಗಡೆ ಬಿದಿದ್ದಾರೆ. ಮೊಮ್ಮಗನ ತಲೆ ಮೇಲೆ ಟಿಪರ್ ಲಾರಿ‌ಯ ಚಕ್ರ ಹರಿದಿದೆ. ಹೀಗಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನೆದ್ದಾರೆ.

Ad
Ad
Nk Channel Final 21 09 2023
Ad