ರಾಯಚೂರು: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ನಡೆದಿದೆ.
Ad
ದೇವರಭೂಪುರ ಗ್ರಾಮದ ನಿವಾಸಿ ಬಸವರಾಜ್ ಎನ್ನುವರ ಮಗ ಶರಣಪ್ಪ (2) ಮೃತಪಟ್ಟ ಬಾಲಕ. ಗ್ರಾಮ ಪಂಚಾಯತಿಯ ಸಿಬ್ಬಂದಿ ಹಾಗೂ ಪಿಡಿಓ ಬೋರ್ವೆಲ್ ಬಳಿ ಅರ್ಧ ಕೆಲಸ ಮಾಡಿ ವಿದ್ಯುತ್ ಕಾಮಗಾರಿಯನ್ನು ಹಾಗೆ ಬಿಟ್ಟಿದ್ದರು. ಇದನ್ನು ಗಮನಿಸದ ಬಾಲಕ ಬೋರ್ವೆಲ್ ಬಳಿ ಕುಡಿಯುವ ನೀರು ತರಲು ಹೋಗಿದ್ದಾನೆ. ಈ ವೇಳೆ ವಿದ್ಯುತ್ ತಗುಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದನು.
Ad
ತಕ್ಷಣ ಪೋಷಕರು ನೋಡಿ ಮಗನನ್ನು ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ಬಾಲಕ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದನು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾನೆ. ಪಂಚಾಯತಿ ಸಿಬ್ಬಂದಿ ಹಾಗೂ ಪಿಡಿಓ ಯಡವಟ್ಟಿನಿಂದ ಮಗ ಮೃತಪಟ್ಟಿದ್ದಾನೆ ಎಂದು ತಂದೆ, ತಾಯಿ ಹಾಗೂ ಸಂಬಂಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Ad
Ad