News Karnataka Kannada
Sunday, April 28 2024
ಮೈಸೂರು

ಮಹಿಳೆಯರು ಸ್ವಯಂ ಉದ್ಯೋಗಿಗಳಾಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Women should become self-employed: Sri Vishwa Prasanna Theertha
Photo Credit : By Author

ಮೈಸೂರು: ಇಂದಿನ ದುಬಾರಿ ಜೀವನದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಿಂದ ಮಧ್ಯಮ ವರ್ಗದವರ ಕುಟುಂಬ ನಿರ್ವಹಣೆ ಕಷ್ಟವಾಗಿರುವುದರಿಂದ ಮಹಿಳೆಯರು ಸ್ವಯಂ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ಕೈಜೋಡಿಸಬೇಕ ಎಂದು ಉಡುಪಿಯ ಶ್ರೀ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮ ಸಭಾಂಗಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಸಂಜೀವಿನಿ ಫೌಂಡೇಶನ್ ಗುರುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಮಹಿಳೆಯರಿಗೆ ಉಚಿತ ಕಂಪ್ಯೂಟರ್, ಟೈಲರಿಂಗ್, ಮೇಕಪ್, ಹ್ಯಾಂಡ್ ವರ್ಕ್ ತರಬೇತಿಯ ಕಾರ್ಯಗಾರ ಹಾಗೂ ಮಹಿಳಾ ಅಸ್ಮಿತೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ ಹೀಗಾಗಿ ಮಹಿಳೆಯರಿಗೆ ಆಯೋಜಿಸುವ ವಿವಿಧ ತರಬೇತಿ ಸದ್ಬಳಸಿಕೊಂಡು , ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಆರ್ ಎಚ್ ಪವಿತ್ರ ಮಾತನಾಡಿ ನಿರುದ್ಯೋಗಿ ಮಹಿಳೆಯರು ತಾವು ಪಡೆದ ಸ್ವಉದ್ಯೋಗದ ತರಬೇತಿಯನ್ನು ವೃತ್ತಿಗೆ ಪೂರಕವಾಗಿ ಬಳಸಿಕೊಂಡಾಗ ತರಬೇತಿ ಪಡೆದದ್ದಕ್ಕೂ ಸಾರ್ಥಕವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಾತ್ರ ಮಹಿಳೆಯ ರು ಸ್ವಾವಲಂಬಿಗಲಾಗುತ್ತಿದ್ದಾರೆ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಕುಳಿತು ಏನು ಮಾಡೋಣವೆಂದು ಇಂತಹ ತರಬೇತಿ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ಸಮಯ ಕಳೆಯಲು ತರಬೇತಿ ಪಡೆಯದೆ, ಬದುಕಿನ ಉನ್ನತಿಗೆ ಪೂರಕವಾಗಿ ಅದನ್ನು ಬಳಸಿಕೊಳ್ಳ ಬೇಕು. ಆ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಸರಸ್ವತಿಪುರಂನ ಆರಕ್ಷಕ ನಿರೀಕ್ಷಕರಾದ ರವೀಂದ್ರ ಮಾತನಾಡಿ,ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು, ವಿವಿಧ ರೀತಿಯ ಫ್ಯಾಷನ್ ಆಧಾರಿತ ಬಟ್ಟೆಗಳನ್ನು ಹೊಲಿದು ಹಣ ಸಂಪಾದಿಸಿ, ಆರ್ಥಿಕವಾಗಿ ಸಬಲರಾಗಬೇಕು. ಪ್ಲಾಸ್ಟಿಕ್ ಬ್ಯಾಗ್ ಬಳಕೆ ಕಡಿತವಾಗಬೇಕಿದ್ದು, ಮಹಿಳೆಯರಿಗೆ ಬಟ್ಟೆ ಬ್ಯಾಗ್ ತಯಾರಿಕೆ ಮತ್ತು ಮಾರಾಟದ ಬಗ್ಗೆ ತರಬೇತಿ ಪಡೆದುಕೊಂಡು ಸ್ವಾವಲಂಬನೆ ಜೀವನ ನಡೆಸಬೇಕೆಂದು ಹೇಳಿದರು.

ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಾತನಾಡಿ ಕೌಶಲ್ಯ ತರಬೇತಿಗಳು ಜೀವನಕ್ಕೆ ದಾರಿ ದೀಪವಾಗಲಿದ್ದು ಸಂಘ ಸಂಸ್ಥೆ ಹಾಗೂ ಸರ್ಕಾರಗಳು ನೀಡುವ ತರಬೇತಿ ಪಡೆದರೆ ಸ್ವಂತ ಜೀವನ ರೂಪಿಸಿಕೊಳ್ಳಬಹುದು ಎಂದರು.

ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪಾಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಶಿಕ್ಷಕ ತಜ್ಞರಾದ ದೀಪಾದನಸಿಂಗ್, ಕಾರ್ಯಾಧ್ಯಕ್ಷರಾದ ರವಿಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಎಂ ತಂತ್ರಿ, ಶ್ರೀ ಸಂಜೀವಿನಿ ಫೌಂಡೇಶನ್ ಅಧ್ಯಕ್ಷರಾದ ಭರತ್ ಕುಮಾರ್, ಅಶ್ವಿನಿ ಗೌಡ, ಭಾಗ್ಯಶ್ರೀ, ಅಂಬಾಭವಾನಿ ಮಹಿಳಾ ಸಮಾಜದ ಅಧ್ಯಕ್ಷ ಸವಿತಾ ಘಾಟ್ಕೆ ಇನ್ನಿತರರು ಭಾಗವಹಿಸಿದ್ದರು

21 ದಿನಗಳ ಕಾಲ ನಡೆಯುವ ಈ ಕಾರ್ಯಾಗಾರದ ಸದ್ಬಳಕೆಯನ್ನು ಪಡೆಯುವವರು ಮತ್ತು ಉಚಿತ ತರಬೇತಿ ಪಡೆಯಲು ಇಚ್ಚಿಸುವವರು 9742445558ನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು