News Karnataka Kannada
Saturday, May 04 2024
ಮಂಗಳೂರು

ಪುದು ಗ್ರಾಮಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು

Pudu gram panchayat bypoll: Congress-backed candidate wins
Photo Credit : By Author

ಬಂಟ್ವಾಳ: ಪುದು ಗ್ರಾಮ ಪಂಚಾಯಿತಿನ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ್ದಾರೆ.

ಹುಸೈನ್ ಎಂ‌.ಎಂಬವರು ಮೃತಪಟ್ಟ ಹಿನ್ನೆಲೆಯಲ್ಲಿ ಪುದು ಗ್ರಾಮಪಂಚಾಯತ್ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಒಂದು ಸದಸ್ಯ ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಹುಸೈನ್ ಅವರ ಮಗ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದರು.

ಎಸ್‌ಡಿ.ಪಿ.ಬೆಂಬಲಿತ ಅಭ್ಯರ್ಥಿ ಅವರು ಅಬ್ದುಲ್ ಲತೀಫ್ 39 ಮತಗಳನ್ನು ಪಡೆದರೆ,ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಅಶ್ರಫ್ ಮಾರಿಪಳ್ಳ 140 ಮತಗಳನ್ನುಗಳಿಸಿದ್ದಾರೆ. ಉಳಿದಂತೆ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ 385 ಮತಗಳನ್ನು ಪಡೆದಿದ್ದಾರೆ. ಇದರಲ್ಲಿ 8 ಮತಗಳು ತಿರಸ್ಕೃತಗೊಂಡಿದೆ. ಒಟ್ಟು 572 ಮತಗಳು ಚಲಾವಣೆಯಾಗಿತ್ತು.

ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ ಚುನಾವಣೆ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಸಹಾಯಕ ಚುನಾವಣಾಧಿಕಾರಿಯಾಗಿ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ, ಎಣಿಕೆ ಮೇಲ್ವಿಚಾರಕರರಾಗಿ ಉಪತಹಶೀಲ್ದಾರ್ ನವೀನ್ ಬೆಂಜನ ಪದವುಎಣಿಕೆ ಸಹಾಯಕರಾಗಿ ಸೀತಾರಾಮ ಕಮ್ಮಾಜೆ, ಜೆ.ಜನಾರ್ಧನ ಕಂದಾಯ ನಿರೀಕ್ಷಕರು ಶ್ರೀ ಕಲಾ, ಹಾಗೂ ಸುಂದರ, ಕಿರಣ್, ಚಂದು ಕಾರ್ಯನಿರ್ವಹಿಸಿದರು.

ಕಾಂಗ್ರೇಸ್ ವಿಜಯೋತ್ಸವ

ಬಂಟ್ವಾಳ: ಪುದು ಗ್ರಾ.ಪಂ.ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದ ಹುಸೇನ್ ಪಾಡಿ ಅವರು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಪ್ರಸ್ತುತ ಅವರ ಸ್ಥಾನವನ್ನು ಅವರ ಪುತ್ರ ಇಕ್ಬಾಲ್ ಅವರು ತುಂಬಿದ್ದಾರೆ. ಪ್ರಸ್ತುತ ವಿಧಾನಸಭಾ ಸ್ಪೀಕರ್ ಆಗಿರುವ ಶಾಸಕ ಯು.ಟಿ.ಖಾದರ್ ಅವರ ಅಭಿವೃದ್ಧಿ ಕಾರ್ಯ, ಗ್ರಾ.ಪಂ.ನ ಆಡಳಿತವನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಬೆಂಬಲಿಸಿದ್ದಾರೆ ಎಂದರು.

ಪಂಚಾಯತ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಪ್ರತಿ ಚುನಾವಣೆಯ ಸಂದರ್ಭದಲ್ಲೂ ವಿರೋಧ ಪಕ್ಷಗಳಾದ ಬಿಜೆಪಿ, ಎಸ್‌ಡಿಪಿಐಗಳ ಮತಗಳ ಸಂಕ್ಯೆ ಕಡಿಮೆಯಾಗುತ್ತಿದ್ದು, ಈ ಬಾರಿ ಠೇವಣಿಯನ್ನೇ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ ಎಂದರು.

ವಿಜೇತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಅವರು ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಅರ್ಪಿಸಿದರು.

ಪಂಚಾಯತ್ ಅಧ್ಯಕ್ಷೆ ರಶಿದಾ ಬಾನು, ಉಪಾಧ್ಯಕ್ಷ ಇಕ್ಬಾಲ್ ಸಜೀರು, ಸದಸ್ಯೆ ರೆಹನಾ, ವಲಯ ಕಾಂಗ್ರೆಸ್ ಅಧ್ಯಕ್ಷ ದಿಲ್‌ಶಾನ್ ಪೇರಿಮಾರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ತೌಶೀಫ್ ವಳಚ್ಚಿಲ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೆರಿಮಾರ್, ಪ್ರಮುಖರಾದ ಹಕೀಂ ಮಾರಿಪಳ್ಳ, ಕೆರೀಂ ಮಾರಿಪಳ್ಳ, ಫಯಾಜ್ ಮಾರಿಪಳ್ಳ, ಇರ್ಶಾದ್ ಪಾಡಿ, ಇಬ್ರಾಹಿಂ ಮಾರಿಪಳ್ಳ, ಘಣಿ ಮಾರಿಪಳ್ಳ, ಐ.ಎಸ್.ಇಮ್ರಾನ್, ಸಲೀಂ ಮಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು