News Karnataka Kannada
Sunday, April 28 2024
ಮೈಸೂರು

ಉಪನ್ಯಾಸಕನ ಪರಿಸರ ಪ್ರೇಮ… ಸಸ್ಯಕಾಶಿಯಾದ ಕಾಲೇಜು ಆವರಣ…

The lecturer's love for the environment... The college campus is a botanical garden...
Photo Credit : News Kannada

ನಂಜನಗೂಡು: ವಿಧ್ಯಾರ್ಥಿಗಳ ಪ್ರಗತಿಗೆ ಕಾಲೇಜಿನ ಉತ್ತಮ ವಾತಾವರಣ ಸಹಕಾರಿ ಎಂಬ ಮಾತಿಗೆ ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಕ್ಷಿಯಾಗಿದೆ.

ಬರಡು ಬಯಲಾಗಿದ್ದ ಕಾಲೇಜಿನ ಆವರಣವೀಗ ಸಸ್ಯಕಾಶಿಯಾಗಿದೆ. ಕಾಲೇಜು ಉಪನ್ಯಾಸ ಹಾಗೂ ಎನ್.ಎಸ್.ಎಸ್.ಅಧಿಕಾರಿಯೂ ಆಗಿರುವ ವೆಂಕಟರಮಣ ಮತ್ತು ವಿದ್ಯಾರ್ಥಿಗಳು, ಪ್ರಾಶುಪಾಲರಾದ ಡಾ.ಟಿ.ಆರ್. ಸಿದ್ದರಾಜು ಮತ್ತು ಸಹದ್ಯೋಗಿಗಳ ಸಹಕಾರದಿಂದ ಬರಡು ನೆಲವೀಗ ಕೆಲವೇ ವರ್ಷಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲರ ಪರಿಶ್ರಮದಿಂದಾಗಿ ಕಾಲೇಜಿನ ಆವರಣ ಮಲೆನಾಡಿನ ವಾತಾವರಣವನ್ನ ಸೃಷ್ಟಿಸಿದೆ.

ಕಾಲೇಜಿನ ವಿಧ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬೆಳವಣಿಗೆಗಾಗಿ ಮೀಸಲಾಗಿದ್ದ ಜಾಗ ಬರಡಾಗಿತ್ತು. ಆಟದ ಮೈದಾನ ಹೊರತುಪಡಿಸಿ ಉಳಿದ ಜಾಗವನ್ನ ಹಸಿರೀಕರಣ ಮಾಡಲು ಕನ್ನಡ ಉಪನ್ಯಾಸಕರಾದ ವೆಂಕಟರಮಣ ನಿರ್ಧರಿಸಿ ಕಾರ್ಯೋನ್ಮುಖರಾದರು. ಈ ವಿಚಾರದಲ್ಲಿ ಸಹದ್ಯೋಗಿಗಳು ಅಪಹಾಸ್ಯ ಮಾಡಿದ್ದೂ ಉಂಟು. ಇದ್ಯಾವುದನ್ನ ಲೆಕ್ಕಿಸದ ವೆಂಕಟರಮಣ ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳ ನೆರವು ಹಾಗೂ ಪ್ರಾಂಶುಪಾಲರಾದ ಡಾ.ಟಿ.ಆರ್. ಸಿದ್ದರಾಜು ರವರ ಮಾರ್ಗದರ್ಶನ ಪಡೆದು ಕಾಲೇಜು ಆವರಣವನ್ನ ಹಸಿರುವಲಯವಾಗಿ ಪರಿವರ್ತಿಸಲು ಪಣತೊಟ್ಟರು. ಕೆಲವು ವರ್ಷಗಳ ಕಠಿಣ ಪರಿಶ್ರಮ ಇದೀಗ ಕಾಲೇಜು ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಕನ್ನಡ ಪಾಠದಲ್ಲಿ ವಿದ್ಯಾರ್ಥಿಗಳ ಮನಸ್ಸನ್ನ ಗೆದ್ದ ಉಪನ್ಯಾಸಕ ವೆಂಕಟರಮಣ ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬೆಳವಣಿಗೆಗೆ ತಮ್ಮ ಸ್ವಂತ ಹಣ ವಿನಯೋಗಿಸಿದ್ದಾರೆ. ಕಾಲೇಜಿನಿಂದಾಗಲಿ ದಾನಿಗಳಿಂದಾಗಲಿ ನಯಾಪೈಸೆ ನೆರವು ಪಡೆದಿಲ್ಲ. ಸ್ವಂತ ಖರ್ಚಿನಲ್ಲಿ ಸುಮಾರು ಎರಡು ಎಕ್ರೆ ಬರಡು ನೆಲದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು, ನೀರೆರೆದಿದ್ದಾರೆ. ಪ್ರಾಣಿ, ಪಕ್ಷಿಗಳಿಗೂ ಅನುಕೂಲವಾಗುವಂತೆ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮಾಡಲು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿ, ಸಸ್ಯಕಾಶಿಯನ್ನಾಗಿ ಪರಿವರ್ತಿಸಿದ್ದಾರೆ.

ಸುಮಾರು 6 ವರ್ಷಗಳ ಪರಿಶ್ರಮ ಫಲ ನೀಡಿದೆ. ಹಸಿರುವಲಯವಾಗಿರುವ ಕಾಲೇಜು ಆವರಣವನ್ನ ವಿಧ್ಯಾರ್ಥಿಗಳು ಖುಷಿಯಿಂದ ತಮ್ಮ ಪಠ್ಯೇತರ ಚಟುವಟಿಕೆಗಳಿಗೂ ಬಳಸಿಕೊಳ್ಳುತ್ತಿದ್ದಾರೆ. ಕನ್ನಡ ಉಪನ್ಯಾಸಕ ವೆಂಕಟರಮಣ ರವರ ಪ್ರಕೃತಿ ಪ್ರೇಮಕ್ಕೆ ಇಡೀ ಕಾಲೇಜು ಫಿದಾ ಆಗಿದೆ. ದೊಡ್ಡಕವಲಂದೆ ಜನರೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು