News Karnataka Kannada
Friday, May 10 2024
ಮಂಗಳೂರು

ಮಂಗಳೂರು: ಕಸ್ಟಮ್ಸ್ ವಶಕ್ಕೆ ಪಡೆದ ರಕ್ತಚಂದನ 28 ಕೋಟಿಗೆ ಹರಾಜು

Mangaluru: Customs auctions seized red sandalwood for Rs 28 crore
Photo Credit : News Kannada

ಮಂಗಳೂರು: ಮಂಗಳೂರಿನ ಪಣಂಬೂರು ಬಂದರಿನ ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ಬಿಡ್ ನಲ್ಲಿ ಖರೀದಿಸಿದೆ.

2008ರಿಂದ 2023ರವರೆಗೆ 4 ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ವಶಪಡಿಸಿಕೊಂಡಿದ್ದರು. ಇದರಲ್ಲಿ ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು‌. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನ ಇದಾಗಿದ್ದು, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್‌ಲೈನ್ ಮೂಲಕ ಹರಾಜು ಹಾಕಿದೆ‌.

ಒಟ್ಟು 2,094 ದಿಮ್ಮಿಗಳನ್ನು ಒಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನ ಹರಾಜಿನಲ್ಲಿ ಖರೀದಿಯಾಗಿದೆ. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್‌ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಒಟ್ಟು 18 ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ 10 ಲಾಟ್‌ಗೆ 14.5 ಕೋಟಿ ರೂ. ಬಿಡ್ ಹಾಗೂ ಯಮಾ ರಿಬನ್ಸ್ ಏಜೆನ್ಸಿ ಲಾಟ್‌ಗೆ 4.2ಕೋಟಿ ರೂ. ಬಿಡ್ ಜೊತೆಗೆ ಅಕ್ಷಾ 3 ಲಾಟ್‌ ಗೆ 1.6 ಕೋಟಿ ರೂ.ಗೆ ಬಿಡ್ ಗೆ ಖರೀದಿ ಮಾಡಿದೆ.

ಮೂರು ಬಿಡ್‌ಗಳ ಒಟ್ಟು ಮೊತ್ತ ತೆರಿಗೆ ಸೇರಿ 28 ಕೋಟಿ ರೂ. ಆಗಿದೆ. ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪೆನಿ ಅಲ್ಲಿಗೆ ಸಾಗಾಟ ಮಾಡಲಿದೆ.

2014 ಆ.21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2020ರ ಜ.10ರಂದು ಥಾಯ್ಲೆಂಡ್‌ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. 2022ರ ಜೂ.3ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ 4.14 ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು