News Karnataka Kannada
Sunday, April 28 2024
ಮೈಸೂರು

ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಲವ್ವಿ ಡವ್ವಿ: ಪ್ರಾಂಶುಪಾಲರ ವಿರುದ್ಧ ಸಾರ್ವಜನಿಕರ ಆಕ್ರೋಶ

ಉತ್ತಮ ವಿದ್ಯಾಭ್ಯಾಸ ಪಡೆದು ಸರ್ಕಾರಿ ಕೆಲಸ ಸೇರಿಕೊಳ್ಳಲಿ ಎಂದು ಬೆಟ್ಟದಷ್ಟು ಆಸೆ ಹೊತ್ತು ಹೆತ್ತವರು ಕಾಲೇಜಿಗೆ ಕಳುಹಿಸಿದೆ ಇಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಬಿಟ್ಟು ಮೈ ಮರೆತು ತಮ್ಮ ಅಶ್ಲೀಲ ವರ್ತನೆಯನ್ನು ತೋರುತ್ತಿರುವ ಘಟನೆ ನಂಜನಗೂಡಿನ ಮಿನಿ ವಿಧಾನಸೌಧದ ಹಿಂಬದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ.
Photo Credit : NewsKarnataka

ನಂಜನಗೂಡು : ಉತ್ತಮ ವಿದ್ಯಾಭ್ಯಾಸ ಪಡೆದು ಸರ್ಕಾರಿ ಕೆಲಸ ಸೇರಿಕೊಳ್ಳಲಿ ಎಂದು ಬೆಟ್ಟದಷ್ಟು ಆಸೆ ಹೊತ್ತು ಹೆತ್ತವರು ಕಾಲೇಜಿಗೆ ಕಳುಹಿಸಿದೆ ಇಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನ ಬಿಟ್ಟು ಮೈ ಮರೆತು ತಮ್ಮ ಅಶ್ಲೀಲ ವರ್ತನೆಯನ್ನು ತೋರುತ್ತಿರುವ ಘಟನೆ ನಂಜನಗೂಡಿನ ಮಿನಿ ವಿಧಾನಸೌಧದ ಹಿಂಬದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ.

ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾಠ ಪ್ರವಚನಕ್ಕೆ ಬ್ರೇಕ್ ಹಾಕಿ ಗೆಳೆಯನ ಜೊತೆ ಸೇರಿ ಲವ್ವಿ ಡವ್ವಿ ಎಂದು ತುಟಿಗೆ ತುಟಿ ಕಚ್ಚುತ್ತಾರೆ. ಈ ದೃಶ್ಯವನ್ನು ನೋಡಿದ ಸಾರ್ವಜನಿಕರು ನಮ್ಮ ಮಕ್ಕಳನ್ನಂತೂ ಕಾಲೇಜಿಗೆ ಕಳಿಸುವುದೇ ಬೇಡ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ.

ವಿದ್ಯಾರ್ಥಿಗಳ ಈ ರೀತಿಯ ವರ್ತನೆ ನೋಡಿ ಸಾರ್ವಜನಿಕರೇ ಬೆಚ್ಚಿ ಬಿದ್ದಿದ್ದು, ದಿನನಿತ್ಯ ಸಾವಿರಾರು ಜನರು ಮಿನಿ ವಿಧಾನಸೌಧಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದರು, ಇದನ್ನು ಲೆಕ್ಕಿಸದೆ ಕಾಲೇಜು ವಿದ್ಯಾರ್ಥಿಗಳು ಮೈ ಮರೆತು ತಮ್ಮ ಅಶ್ಲೀಲ ಕೆಲಸದಲ್ಲಿ ಬ್ಯುಸಿಯಾಗಿ ಬಿಟ್ಟಿರುತ್ತಾರೆ.

ಕಾಲೇಜು ಆವರಣದಲ್ಲಿ ಇಂತಹ ಘಟನೆ ನಡೆಯಲು ಪ್ರಾಂಶುಪಾಲರ ಬೇಜವಾಬ್ದಾರಿ ಮುಖ್ಯ ಕಾರಣವಾಗಿದೆ. ಶಾಲಾ ಕಾಲೇಜುಗಳ ಕಡೆ ಬರುವ ಬೀಟ್ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ ಸರ್ಕಾರಿ ಕಾಲೇಜು ವ್ಯವಸ್ಥೆಯನ್ನು ಸರಿಪಡಿಸಲಾಗದ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು