News Karnataka Kannada
Saturday, April 27 2024
ಮೈಸೂರು

ಚರಂಡಿ ವಿಚಾರಕ್ಕೆ ಕಿರಿಕ್: ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಗ್ರಾಪಂ ಅಧ್ಯಕ್ಷೆ

ತಮ್ಮ ಅಮೂಲ್ಯವಾದ ಮತ ಹಾಕಿ ಗೆಲ್ಲಿಸಿದ ಮತದಾರ ಮನೆಯ ಮುಂಭಾಗದಲ್ಲಿ ಕೊಳೆತು ಗಬ್ಬೆದ್ದು ನಾರುತ್ತಿರುವ ಒಳ ಚರಂಡಿಯ ಕೊಳಚೆ ತ್ಯಾಜ್ಯ ಶುಚಿಗೊಳಿಸಿ ಎಂದು ಗ್ರಾ.ಪಂ ಅಧ್ಯಕ್ಷೆಯ ಬಳಿ ನ್ಯಾಯ ಕೇಳಿದ ಮಹಿಳೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
Photo Credit : NewsKarnataka

ನಂಜನಗೂಡು: ತಮ್ಮ ಅಮೂಲ್ಯವಾದ ಮತ ಹಾಕಿ ಗೆಲ್ಲಿಸಿದ ಮತದಾರ ಮನೆಯ ಮುಂಭಾಗದಲ್ಲಿ ಕೊಳೆತು ಗಬ್ಬೆದ್ದು ನಾರುತ್ತಿರುವ ಒಳ ಚರಂಡಿಯ ಕೊಳಚೆ ತ್ಯಾಜ್ಯ ಶುಚಿಗೊಳಿಸಿ ಎಂದು ಗ್ರಾ.ಪಂ ಅಧ್ಯಕ್ಷೆಯ ಬಳಿ ನ್ಯಾಯ ಕೇಳಿದ ಮಹಿಳೆಯ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಹುರಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಾಯಮ್ಮ, ಈಕೆಯ ಗಂಡ ಸೋಮಣ್ಣ ಹಾಗೂ ಮಗ ಶಿವರಾಜು ಎಂಬುವರು ಪಕ್ಕದ ಮನೆಯಲ್ಲಿ ವಾಸವಿದ್ದ ಮಮತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಹಲ್ಲೆ ನಡೆಸಲು ಮನೆಗೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ದಾಂಧಲೆ ಮಾಡಿರುವ ವ್ಯಕ್ತಿಗಳ ವಿರುದ್ಧ ಸಂಬಂಧಪಟ್ಟ ಹುಲ್ಲಹಳ್ಳಿ ಪೊಲೀಸರು ಕ್ರಮ ಕೈಗೊಂಡು ಹಲ್ಲೆಗೊಳಗಾದ ಮಹಿಳೆಗೆ ನ್ಯಾಯ ಕಲ್ಪಿಸಿಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು