News Karnataka Kannada
Friday, May 03 2024
ಮೈಸೂರು

ಹೆಚ್.ಡಿ.ಕೋಟೆಯಲ್ಲಿ ಮನೆ ಮಾಡಿದ ರಾಮ ಸಂಭ್ರಮ

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣ ಗಣನೆ ಆರಂಭವಾಗಿದೆ,  ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲ್ಲೂಕಿನಲ್ಲೂ ಸಹ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾ ದಿನದಂದು ಎಲ್ಲ ದೇವಾಲಯಗಳಲ್ಲಿ ರಾಮ ಜಪ, ಭಜನೆ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.
Photo Credit : By Author

ಎಚ್.ಡಿ.ಕೋಟೆ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣ ಗಣನೆ ಆರಂಭವಾಗಿದೆ,  ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲ್ಲೂಕಿನಲ್ಲೂ ಸಹ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಅಯೋಧ್ಯೆ ರಾಮಲಲ್ಲಾನ ಪ್ರತಿಷ್ಠಾ ದಿನದಂದು ಎಲ್ಲ ದೇವಾಲಯಗಳಲ್ಲಿ ರಾಮ ಜಪ, ಭಜನೆ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಬಾಲರಾಮನ ಪ್ರತಿಷ್ಠಾಪನೆ ದಿನವನ್ನು ಮತ್ತಷ್ಟು ವೈಭಾವ ಪೂರಕವಾಗಿ ಆಚರಣೆ ತಾಲೂಕಿನ ಜನರು ಸಿದ್ದತೆ ಭರದಿಂದ  ಸಾಗಿದೆ, ಎಚ್.ಡಿ.ಕೋಟೆ ಪಟ್ಟಣದ ಮೊದನೆ ಮುಖ್ಯರಸ್ತೆಯನ್ನು ವಿದ್ಯುತ್ ದೀಪಾಲಂಕಾರ ನೋಡುಗರ ಕಣ್ಮನ ಸೇಳೆಯುತ್ತಿದೆ, ಪಟ್ಟಣದ ಶ್ರೀ ಅಂಜನೇಯಸ್ವಾಮಿ, ಶ್ರೀ ವರದರಾಜಸ್ವಾಮಿ, ಸೋಮೇಶ್ವರ ದೇವಾಲಯ. ಅಶ್ವಥಕಟ್ಟೆ ಈಶ್ವರ ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗಿದೆ, ಇನ್ನೂ ರಾಮ ಭಕ್ತರು ಪಟ್ಟಣದ ಪ್ರಮುಖ ರಸ್ತೆಗಳನ್ನು ಕೇಸರಿ ಧ್ವಜ, ಫ್ಲೆಕ್ಸ್, ತಳಿರು ತೋರಣಗಳಿಂದ ಸಿಂಗಾರ ಮಾಡಿದ್ದಾರೆ.

ಇನ್ನೂ ಅರೋಧ್ಯೆ ರಾಮಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ರಾಮ ಭಕ್ತರು ನೇರ ಪ್ರಸಾರವನ್ನು  ಕಣ್ತುಂಬಿಕೊಳ್ಳಲು ಪಟ್ಟಣದ ಶ್ರೀ ವರದರಾಜಸ್ವಾಮಿ ದೇವಸ್ಥಾನದಲ್ಲಿ ದೊಡ್ಡ ಎಲ್‌ ಇಡಿ ಪರದೆಯನ್ನು ಆಳವಡಿಸಲಾಗಿದೆ. ಇನ್ನೂ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ಅಣಿಗೊಳಿಸುತ್ತಿದ್ದು ದೇವಸ್ಥಾನಕ್ಕೆ ಬರುವ ರಾಮ ಭಕ್ತರಿಗೆ, ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಪ್ರಸಾದ ವಿತರಣೆಗೆ ಸಕಲ ತಯಾರಿ ನಡೆದಿದೆ.

ಒಟ್ಟಾರೆ ಸೋಮವಾರ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆ ರಾಮಂದಿರದ ಬಾಲರಾಮನ  ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕಾಗಿ ವನಸಿರಿ ನಾಡು ಎಚ್.ಡಿ.ಕೋಟೆ ಮ್ತು ಸರಗೂರು ಅವಳಿ ತಾಲೂಕುಗಳ ರಾಮಭಕ್ತರು ಐತಿಹಾಸಿಕ ಕ್ಷಣವನ್ನು ಎಲ್ಲರೂ ಕಣ್ತುಂಬಿಕೊಳ್ಳುವಂತೆ ಸಕಲ ವ್ಯವಸ್ಥೆ ಮಾಡಿದೆ.

ಇನ್ನೂ ಎಚ್.ಡಿ.ಕೋಟೆ ಮತ್ತು ಸರಗೂರು ಪಟ್ಟಣಗಳಲ್ಲಿ ದೇವಸ್ಥಾನ ಇರುವ ಪ್ರಮುಖ ರಸ್ತೆಗಳು, ದೇವಸ್ಥಾನಗಳು ವಿದ್ಯುತ್  ದೀಪಾಲಂಕಾರದಿಂದ ಝಗಮಗಿಸುತ್ತಿವೆ, ರಾಮ ಭಕ್ತರು ನೇರ ಪ್ರಸಾರ ಕಣ್ತುಂಬಿಕೊಳ್ಳುವ ಸಲುವಾಗಿ ಪ್ರಮುಖ ರಸ್ತೆ, ದೇವಾಲಯಗಳಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು