News Karnataka Kannada
Thursday, May 09 2024
ಮೈಸೂರು

ಮೈಸೂರು: ಸ್ವರ್ಣನೃಸಿಂಹ ದತ್ತ ಸಾಯಿ ಟ್ರಸ್ಟ್ ನಿಂದ ಗುರುಪೂರ್ಣಿಮೆ

Mysuru: Guru Purnima organised by Swarnarisimha Datta Sai Trust
Photo Credit : By Author

ಮೈಸೂರು: ಮೈಸೂರಿನ ಸ್ವರ್ಣನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ಮೈಸೂರು- ಬನ್ನೂರು ರಸ್ತೆಯಲ್ಲಿರುವ ವಾಜಮಂಗಲದ ಆರ್.ಆರ್.ವೆಡ್ಡಿಂಗ್ ಬೆಲ್ಸ್‌ನಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಸಂಭ್ರಮ-ಸಡಗರ ಮತ್ತು ವೈಭವದಿಂದ ಆಚರಿಸಲಾಯಿತು.

ಶ್ರೀವೆಂಕಟಾಚಲ ಅವಧೂತರ ದಿವ್ಯ ಸಾನಿಧ್ಯದಲ್ಲಿ 108 ಕಳಸ ಸ್ಥಾಪನೆ ಮತ್ತು ಭಗವತಿ ಆರಾಧನೆಯೊಂದಿಗೆ  ಆರಂಭವಾದ  ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರು ನಾಮ ಸ್ಮರಣೆ ನಿರಂತರವಾಗಿ ನಡೆಯಿತು. ವ್ಯಾಸ ಪೂಜೆ, ಗಣಪತಿ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ದತ್ತಾತ್ರೇಯ ಹೋಮ, ವೆಂಕಟಾಚಲ ಹೋಮಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹೋಮಗಳನ್ನು ಋತ್ವಿಕರಾದ ಅರುಣ್ ಶರ್ಮಾ ನೇತೃತ್ವದ ತಂಡದವರು ನಡೆಸಿಕೊಟ್ಟರು. ಶ್ರೀ ಅರ್ಜುನ ಅವಧೂತರು ಪೂರ್ಣಾಹುತಿ ನೆರವೇರಿಸಿದರು.

ಶ್ರೀ ಅರ್ಜುನ ಅವಧೂತರು ಪ್ರವಚನದ ಮೂಲಕ ಮಂತ್ರಾಲಯದ ಗುರುರಾಯರ ದರ್ಶನ ಮಾಡಿಸಿ,  ಗುರುವಿನ ಮಹತ್ವ  ತಿಳಿಸಿದರಲ್ಲದೇ ತಂದೆ-ತಾಯಂದಿರೇ ಗುರುಗಳು ಎಂಬುದನ್ನು ವಿವರಿಸಿದರು. ನಂತರ ಗುರುಗಳು ಬಿಕ್ಷಾವಂದನೆ ಸ್ವೀಕರಿಸಿ, ಗುರು ಬಂಧುಗಳಿಗೆ ಆಶೀರ್ವಚನ ನೀಡಿದರು. ಚಲನಚಿತ್ರ ನಟರು, ಕಿರು ತೆರೆ ನಟ-ನಟಿಯರು ಮತ್ತು ಗಣ್ಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗುರುಗಳು ತಮ್ಮ ಮಾತೃಶ್ರೀ ರಂಗಲಕ್ಷ್ಮೀ ಅಮ್ಮನವರಿಗೆ ಪಾದ ಪೂಜೆ ನೆರವೇರಿಸಿದರು. ನಂತರ ಎಲ್ಲರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಭಕ್ತರಿಗೆ ತುಳಸಿ ಗಿಡ ಮತ್ತು ಲಾಡು ಪ್ರಸಾದವನ್ನು ನಿಡಲಾಯಿತಲ್ಲದೆ, ‘ವಿದ್ಯಾನಂದಶ್ರೀ ಫಲಾನುಭವಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ವಿತರಿಸಲಾಯಿತು. ಟ್ರಸ್ಟ್‌ನ ವೆಬ್‌ಸೈಟ್  ಅನಾವರಣಗೊಳಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು