News Karnataka Kannada
Friday, May 03 2024
ಮೈಸೂರು

ಮೈಸೂರು: ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಗೀತ ಸಂಭ್ರಮ

Puttanna
Photo Credit : By Author

ಮೈಸೂರು: ನಗರದ ಶಾರದಾದೇವಿನಗರದ ಗಾನ ಚಂದನ ಕಲಾಬಳಗದ ವತಿಯಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಗಾಯಕರಾದ ಆರ್.ಸುಧೀಂದ್ರ ಹಾಗೂ ವಿಶ್ವನಾಥ ಶಾಸ್ತ್ರಿಯವರ ಸಾರಥ್ಯದಲ್ಲಿ ಆಯೋಜಿಸಿದ್ದ ಕನ್ನಡದ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಅವರು ನಿರ್ದೇಶಿಸಿದ್ದ ಚಿತ್ರಗಳಿಂದ ಆಯ್ದ ಗೀತೆಗಳನ್ನು ಗೀತ ಸಂಭ್ರಮ ಗಮನಸೆಳೆಯಿತು.

ಕಾರ್ಯಕ್ರಮದಲ್ಲಿ ಮಳೆಯ ಸಿಂಚನದ ನಡುವೆಯೂ ಯಶಸ್ವಿಯಾಗಿ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು. ತಂಡದ ಗಾಯಕರು 70-80ರ ದಶಕದ ಹಳೆಯ, ಉತ್ತಮ ಗೀತರಚನೆ, ಇಂಪಾದ ಸಂಗೀತದಿಂದ ಕೂಡಿದ ಹಾಡುಗಳನ್ನು ಸಭಿಕರಿಗೆ ಪ್ರಸ್ತುತಪಡಿಸಿದರು.

ಧರ್ಮಸೆರೆ ಚಿತ್ರದ ಮೂಕ ಹಕ್ಕಿಯು ಹಾಡುತಿದೆ, ಮಾನಸ ಸರೋವರ ಚಿತ್ರದ ಮಾನಸ ಸರೋವರ, ಪಡುವಾರಹಳ್ಳಿ ಪಾಂಡವರು ಚಿತ್ರದ ತೂಕಳಿಸಿ ತೂಕಳಿಸಿ ಬೀಳದಿರೊ ತಮ್ಮ, ಶರಪಂಜರ ಚಿತ್ರದ ‘ಕೊಡಗಿನ ಕಾವೇರಿ, ರಂಗನಾಯಕಿ ಚಿತ್ರದ ‘ಕನ್ನಡ ನಾಡಿನ ರಸಿಕರ ಮನವ, ಶುಭಮಂಗಳ ಚಿತ್ರದ ಹೂವೊಂದು ಬಳಿಬಂದು, ಸಾಕ್ಷಾತ್ಕಾರ ಚಿತ್ರದ ಜನ್ಮ ಜನ್ಮದ ಅನುಬಂಧ, ನಾಗರಹಾವು ಚಿತ್ರದ ’ಹಾವಿನ ಧ್ವೇಷ, ಅಮೃತ ಘಳಿಗೆ ಚಿತ್ರದ ’ಹಿಂದೂ ಸ್ಥಾನವು ಎಂದೂ ಮರೆಯದ ಹೀಗೆ ಇನ್ನೂ ಅನೇಕ ಚಿತ್ರದ ಹಾಡುಗಳನ್ನು ತಂಡದ ಕಲಾವಿದರಾದ ಆರ್.ಸುಧೀಂದ್ರ, ವಿಶ್ವನಾಥ ಶಾಸ್ತ್ರಿ, ಆರ್.ನಟರಾಜ್, ಶ್ರೀನಿವಾಸ್, ಗೋಪಾಲಕೃಷ್ಣ, ನಾಗರಾಜ್, ಶೀಲಾದರ್, ಸಿಂಚನ ಹಾಗೂ ಶಶಿಕಲಾರವರು ಮೂರು ತಾಸುಗಳಿಗೂ ಅಧಿಕ ಸಮಯ ಸಭಿಕರಿಗೆ ಉಣಬಡಿಸಿದರು.

ಇದೇ ಸಂದರ್ಭದಲ್ಲಿ ಉಪಾಸನೆ ಚಿತ್ರದಲ್ಲಿ ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು ಹಾಡಿಗೆ ಬಾಲ ನಟಿಯಾಗಿ ಅಭಿನಯಿಸಿದ್ದ ಮೈಸೂರು ಆಕಾಶವಾಣಿಯ ಹಿರಿಯ ಕಲಾವಿದೆ ವಿದುಷಿ ರಾಜಲಕ್ಷ್ಮಿಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ನಂತರ ಕಾರ್ಯಕ್ರಮ ನಿರೂಪಣೆ ಮಾಡಿದ ಗಾಯಕ ಆರ್.ಸುಧೀಂದ್ರ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿ, ಪುಟ್ಟಣ್ಣನವರು ತಮ್ಮ ಪ್ರಬುದ್ಧ ನಿರ್ದೇಶನದ ಮೂಲಕ ಪ್ರೇಕ್ಷಕರ ಜೀವನದಲ್ಲಿ ಉತ್ತಮ ಪರಿಣಾಮಗಳನ್ನು ಬೀರುವ ಸಂದೇಶಗಳನ್ನು ರವಾನೆ ಮಾಡುತ್ತಿದ್ದರು. ಇದು ನಿಮ್ಮ ಕಾರ್ಯಕ್ರಮ., ಕಲೆ ನಿರಂತರವಾಗಿ, ಶಾಶ್ವತವಾಗಿ ಇರಬೇಕೆಂಬ ಉದ್ದೇಶದಿಂದ ಯಾರಿಂದಲೂ, ಏನನ್ನೂ ಅಪೇಕ್ಷಿಸದೇ ನಮ್ಮ ಸಂಸ್ಥೆಯ ಪದಾಧಿಕಾರಿಗಳ ನೆರವಿನಿಂದ ಈ ಕಾರ್ಯiಕ್ರಮವನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು