News Karnataka Kannada
Saturday, April 27 2024
ಮೈಸೂರು

ಮೈಸೂರು: ಜೂಜಾಡುತ್ತಿದ್ದ ಎಂಟು ಮಂದಿಯ ಬಂಧನ

Mysuru: Eight persons arrested for gambling
Photo Credit : By Author

ಮೈಸೂರು: ಪ್ರತ್ಯೇಕ ಪ್ರಕರಣದಲ್ಲಿ ಜೂಜಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಜೂಜಾಟದಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿ, 12,50,660 ರೂ.ನಗದು, 6 ಮೊಬೈಲ್‌ಗಳು, ಕೌಟಿಂಗ್ ಮೆಷನ್ ಮತ್ತು ಇಸ್ವೀಟ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ನಗರದ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಮಾ.9ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿನಕಲ್, ಹುಣಸೂರು ಮುಖ್ಯರಸ್ತೆಯಲ್ಲಿರುವ ಸಿಟಿ ಸ್ವೋಟ್ಸ್ ಕಬ್ಲ್  23/ಡಿ ಮೇಲೆ ದಾಳಿ ಮಾಡಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ವೀಟ್ ಜೂಜಾಟದಲ್ಲಿ ತೊಡಗಿದ್ದ 3 ಜನರನ್ನು ಬಂಧಿಸಿ ಜೂಜಾಟಕ್ಕೆ ಪಣವಾಗಿಟ್ಟಿದ್ದ 12,50,660 ರೂ ನಗದು ಹಣ, 6 ಮೊಬೈಲ್‌ಗಳು, ಕೌಂಟಿAಗ್ ಮೆಷನ್, ಇಸ್ವೀಟ್ ಕಾರ್ಡ್ ಗಳು ಹಾಗೂ ಟೋಕನ್ ಕಾಯಿನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪತ್ತೆ ಕಾರ್ಯವನ್ನು  ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್‌ಕುಮಾರ್‌ರವರ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್  ಅನೂಪ್ ಮಾದಪ್ಪ, ಎಎಸ್‌ಐಗಳಾದ  ಟಿ.ಸತೀಶ್, ಆರ್.ರಾಜು, ಅಸ್ಗರ್ ಖಾನ್ ಹಾಗೂ ಸಿಬ್ಬಂದಿಗಳಾದ ಪುರುಷೋತ್ತಮ, ಜೋಸ್ ನೊರೋನ್ಹ, ಪುಟ್ಟಮ್ಮ, ಚಂದ್ರಶೇಖರ್, ಮಮತ ಮತ್ತು ಶ್ರೀನಿವಾಸ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಹಣಕ್ಕೆ ಸಮಾನವಾದ ಕಾಯಿನ್‌ಗಳನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟದಲ್ಲಿ ತೊಡಗಿದ್ದ 5 ಮಂದಿಯನ್ನು ಬಂಧನ. ಬಂಧಿತರಿಂದ 7.60 ಲಕ್ಷ ರೂ., ಮುಖ ಬೆಲೆಯ ವಿವಿಧ ಬಣ್ಣದ ಕಾಯಿನ್‌ಗಳು ಹಾಗೂ 4,105 ರೂ ನಗದು ಹಣ ವಶ ಪಡಿಸಿಕೊಳ್ಳಲಾಗಿದೆ.

ನಗರದ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಮಾ.9ರಂದು ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಜೆ.ಸಿ.ನಗರದ ನಂ 05 ರ ಕಟ್ಟಡದ ಮೇಲೆ ದಾಳಿ ಮಾಡಿ ಹಣಕ್ಕೆ ಸಮಾನವಾದ ಕಾಯಿನ್‌ಗಳನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಎಂಬ ಅದೃಷ್ಟದ ಜೂಜಾಟದಲ್ಲಿ ತೊಡಗಿದ್ದ 5 ಜನರನ್ನು ಬಂಧಿಸಿ ಸ್ಥಳದಲ್ಲಿ ವಿವಿಧ

ಮುಖಬೆಲೆಯ ವಿವಿಧ ಬಣ್ಣದ 7.60. ಲಕ್ಷ ರೂ., ಮುಖಬೆಲೆಯ ಕಾಯಿನ್‌ಗಳನ್ನು ಹಾಗೂ 4,105 ರೂ.,ಗಳನ್ನು ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪತ್ತೆ ಕಾರ್ಯವನ್ನು  ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್‌ಕುಮಾರ್‌ರವರ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಸಿ.ಕೃಷ್ಣಕುಮಾರ್, ಪಿಎಸ್‌ಐಗಳಾದ ಎಂ.ರAಗಸ್ವಾಮಿ.ಎA, ಮಾರುತಿ ಅಂತರಗಟ್ಟಿ, ಸಿಬ್ಬಂದಿಗಳಾದ ಸಲೀಂಪಾಷ, ಉಮಾಮಹೇಶ್, ರವಿಶಂಕರ್, ಲಕ್ಷ್ಮಿಕಾಂತ್ ಮೋಹನಾರಾಧ್ಯ, ನರಸಿಂಹರಾಜು,  ಮಹೇಶ್ ಮತ್ತು ಕೆ.ಎಸ್.ರವಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು