News Karnataka Kannada
Saturday, May 04 2024
ಸಾಂಡಲ್ ವುಡ್

ಮೈಸೂರು: ಮರಣದ ನಂತರವೂ ಜೀವಿಸಿರುವ ಪುನೀತ್‌ ರಾಜ್‌ಕುಮಾರ್- ಮಿರ್ಲೆ ಶ್ರೀನಿವಾಸ್ ಗೌಡ

Mysuru: Puneeth Rajkumar and Mirle Srinivas Gowda are still alive even after death.
Photo Credit : By Author

ಮೈಸೂರು: ಕರುನಾಡು ರತ್ನ ಡಾ.ಪುನೀತ್ ರಾಜ್‌ಕುಮಾರ್ ರವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ 200 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ಇದೇ ವೇಳೆ 50ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಮತ್ತು 100 ಕೆಜಿ ಬಾತು ಮತ್ತು 25ಕಜಿ ಕೇಸರಿಬಾತ್ ಸಾರ್ವಜನಿಕರಿಗೆ ವಿತರಿಸಲಾಯಿತು. ಅಲ್ಲದೆ ಲೋಹಿತ್ ಸಂಗೀತ ವಾದ್ಯ ಸಂಸ್ಥೆ ವತಿಯಿಂದ ಪುನೀತ್ ರಾಜ್ ಕುಮಾರ್ ರವರ ಅಪ್ಪು ಗಾಯನ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಗೂ ಆ ದೇವರ ಹಾಡಿದು ಸೇರಿದಂತೆ 25ಕ್ಕೂ ಹೆಚ್ಚು ಪುನೀತ್ ರಾಜ್ ಕುಮಾರ್ ನಟಿಸಿದ ಚಿತ್ರಗಳ ಹಾಡನ್ನು ಆಡುವ ಮೂಲಕ ಪುನೀತ್ ನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ ಅವರು, ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್‌ ರಾಜ್‌ಕುಮಾರ್‌ ಅವರದ್ದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ನರೇಂದ್ರ ಮೋದಿ ಸೇವಾಟ್ರಸ್ಟ್, ಸಮಾಜ ಸೇವಾ ಟ್ರಸ್ಟ್ ,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ,ಸೇವಾ ಭಾರತಿ ,ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ಸಿದ್ಧಾರ್ಥ ನಗರದಲ್ಲಿರುವ ಡಾ ಪಿ ಎಚ್ ರಾಘವೇಂದ್ರ ಶೆಟ್ಟಿ ನಾಗಮಣಿ ಸಭಾಂಗಣ ದಲ್ಲಿ 50 ಕ್ಕೂ ಹೆಚ್ಚು ದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಸಮಾಜ ಸೇವಕರಾದ ಮಹೇಂದ್ರ ಸಿಂಗ್ ಕಾಳಪ್ಪ , ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಸವಿತಾ ಘಾಟ್ಕೆ, ಕೇಬಲ್ ವಿಜಿ , ಆಟೋ ಸದಾಶಿವ, ಚಂದ್ರು, ವಿದ್ಯಾ, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ, ಆನಂದ್ ಮಂಡೂತ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಹಿಂದ ನಟರಾಜ್ ಇನ್ನಿತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು