News Karnataka Kannada
Wednesday, May 08 2024
ಮೈಸೂರು

ಮೈಸೂರು: ದಸರಾ ಆರಂಭಕ್ಕೂ ಮುನ್ನವೇ ಮೈಸೂರಿನಲ್ಲಿ ಮತ್ತೆ ಶುರುವಾಯ್ತು ಸರಗಳ್ಳರ ಹಾವಳಿ

Robbery
Photo Credit : News Kannada

ಮೈಸೂರು: ದಸರಾ ಆರಂಭಕ್ಕೂ ಮುನ್ನವೇ ಮೈಸೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ  ಸರಣಿ ಸರಗಳ್ಳತನವಾಗಿದ್ದು ಸರಗಳ್ಳರ ಕೃತ್ಯದಿಂದ ಮೈಸೂರು ನಗರದ ಜನತೆ ಭಯಪಡುವಂತಾಗಿದೆ.

ಕೇವಲ ಎರಡುವರೆ ಗಂಟೆ  ಅವಧಿಯಲ್ಲಿ  ಮೂರು ಕಡೆ ಸರಗಳ್ಳತನ ನಡೆಸಿ, ಒಂದು ಕಡೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದ್ದು, ಹೀಗಾದರೆ ಹೇಗಪ್ಪಾ ಎಂಬ ಚಿಂತೆ ಜನತೆಯನ್ನು ಆವರಿಸಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಸರಗಳ್ಳರನ್ನು ಬಂಧಿಸಿದ್ದರೂ ಹೊಸ ಕಳ್ಳರು ಹುಟ್ಟಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದೀಗ ರಾತ್ರಿ ಸಮಯದಲ್ಲಿ ಸರಗಳ್ಳರು ತಮ್ಮ ಕೈಚಳಕ ಆರಂಭಿಸಿದ್ದಾರೆ.

ಸ್ಕೂಟರ್ ನಲ್ಲಿ ಬಂದ ಇಬ್ಬರು ಖದೀಮರು ನಾಯ್ಡು ನಗರದ ಮುಖ್ಯ ರಸ್ತೆಯ ಫುಡ್ ಸ್ಟ್ರೀಟ್ ವೃದ್ದೆ ಗಿರಿಜಮ್ಮ(72) ಅವರು ಸಂಜೆ 7 ಗಂಟೆ ಸಮಯದಲ್ಲಿ   ಗೋಬಿ ತಿನ್ನುವಾಗ 30 ಗ್ರಾಂ ಚಿನ್ನ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಸ್ಕೂಟರ್  ಹಿಂಬದಿ ಸವಾರ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಎನ್. ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಿ ಮೊಹಲ್ಲಾದ 8 ನೇ ಕ್ರಾಸ್ ನಲ್ಲಿ ಗೋಕುಲಂ ನಿವಾಸಿ ಸುಜಾತ (55)  ಎಂಬವರ ಸರ ಕಸಿದು ಪರಾರಿಯಾಗಿದ್ದಾರೆ. ರಾತ್ರಿ 9 ಗಂಟೆ ಸಮಯದಲ್ಲಿ ಅಂಗಡಿಯಿಂದ ಸಾಮಾನುಗಳನ್ನು ಕೊಂಡು ಹಿಂತಿರುಗುವಾಗ ಬೈಕಿನಲ್ಲಿ ಬಂದ ಖದೀಮರು ಇವರ 20 ಗ್ರಾಂ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್‌ನಲ್ಲಿ ಬಂದ ಸರಗಳ್ಳರು ಮಹಿಳೆಯ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಸರಸ್ವತಿಪುರಂ ಮೂರನೇ ಮೇನ್ ನಿವಾಸಿ ಮಾಲತಿ (38) ಸರ ಕಳೆದುಕೊಂಡವರು. ಸರಸ್ವತಿಪುರಂನಲ್ಲಿ ರಾತ್ರಿ 9.30 ರ ಸಮಯದಲ್ಲಿ ಈ ಘಟನೆ ನಡೆದಿದೆ. ಮೊಪೆಡ್‌ನಲ್ಲಿ ಬಂದ ಖದೀಮರು ಮಾಲತಿ ಅವರ 35 ಗ್ರಾಂ ತೂಕದ ಚಿನ್ನದ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದೆಲ್ಲದರ ನಡುವೆ ವಿಜಯನಗರದ ಎರಡನೇ ಹಂತದಲ್ಲಿ ರಾತ್ರಿ 8.30ರ ಸಮಯದಲ್ಲಿ ವನಮಾಲ ಎಂಬವರ ಸರಗಳವಿಗೆ ಬೈಕಿನಲ್ಲಿ ಬಂದ ಸರಗಳ್ಳರು ವಿಫಲ ಯತ್ನ ನಡೆಸಿದ್ದಾರೆ.

ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಹಾಯಕ್ಕೆ ಕೂಗಿದಾಗ ಗಾಬರಿಕೊಂಡ ಖದೀಮರು ಪರಾರಿಯಾಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ದಸರಾ ಬರುತ್ತಿದ್ದಂತೆಯೇ ಸರಗಳ್ಳರು ಮೈಸೂರಿನತ್ತ ಮುಖ ಮಾಡಿರುವುದರಿಂದ ಚಿನ್ನಾಭರಣ ಧರಿಸಿ ಓಡಾಡುವ ಮಹಿಳೆಯರು ಎಚ್ಚರವಾಗಿರುವುದು ಒಳಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು