News Karnataka Kannada
Thursday, May 02 2024
ಮೈಸೂರು

ಮೈಸೂರು: 9200 ಗರ್ಭಿಣಿಯರಿಗೆ ಮಡಿಲು ಯೋಜನೆ

Mysuru: 9,200 pregnant women to get madilu scheme
Photo Credit : By Author

ಮೈಸೂರು: ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಪ್ರತಿ ಹಂತದಲ್ಲಿಯೂ ಮಾದರಿ ನಡೆ ಅನುಸರಿಸಿದ್ದು, ಈವರೆಗೆ 9200 ಗರ್ಭಿಣಿಯರಿಗೆ ಮಡಿಲು ಯೋಜನೆ ತಲುಪಿಸಲಾಗಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 64ರಲ್ಲಿ ಯೋಗಕ್ಷೇಮ ಯಾತ್ರೆ ಪ್ರಯುಕ್ತ ವಿವೇಕಾನಂದನಗರ ಬಡಾವಣೆಯ ಗಣಪತಿ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕ್ಷೇತ್ರದ ಗರ್ಭಿಣಿಯರ ಅಣ್ಣನಾಗಿ ಸೇವೆ ಮಾಡಲು ಇಂದು ಸದವಕಾಶ ನನ್ನ ಪಾಲಿಗೆ ಲಭಿಸಿರುವುದು ಹೆಮ್ಮೆಯ ವಿಷಯ. ಈವರೆಗೆ ಕ್ಷೇತ್ರದಲ್ಲಿ 8800 ಗರ್ಭಿಣಿಯರಿಗೆ ಮಡಿಲು ತುಂಬಲಾಗಿದೆ. ಮಾ.18ರಂದು ಇನ್ನೂ 400 ಗರ್ಭಿಣಿ ಹೆಣ್ಣುಮಕ್ಕಳಿಗೆ ಮಡಿಲು ತುಂಬಲಾಗುತ್ತಿದೆ. ಪ್ರತಿ ಆರು ತಿಂಗಳಿಗೊಮ್ಮೆ ಈ ಕಾರ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.

ಇಡೀ ಕ್ಷೇತ್ರ ಮಾದರಿ ಎಂಬುದಕ್ಕೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳೇ ಕ್ಷೇತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದೇ ಸಾಕ್ಷಿಯಾಗಿದೆ. ಮನುಷ್ಯರಿಗೆ ಮಾತ್ರವಲ್ಲ, ಬೀದಿ ನಾಯಿಗಳು ಹಾಗೂ ಕೋತಿಗಳು ಕೂಡ ಗೌರವಯುತ ಬದುಕು ಸಾಗಿಸಬೇಕೆನ್ನುವ ಆಶಯದಿಂದ ಅವುಗಳಿಗಾಗಿ ಸುಸಜ್ಜಿತ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಇದೇ ತಿಂಗಳ 25ರಂದು ನಾಯಿಗಳ ಪುನರ್ವಸತಿ ಕೇಂದ್ರ ಲೋಕಾರ್ಪಣೆ ಆಗಲಿದೆ ಎಂದು ಹೇಳಿದರು.

ಕ್ಷೇತ್ರದಲ್ಲಿರುವ ತುಳಸೀದಾಸ್ ದಾಸಪ್ಪ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆ ಇಂದು ಯಾವುದೇ ಖಾಸಗಿ ಆಸ್ಪತ್ರೆಗೆ ಸರಿಸಾಟಿಯಾಗಿ ನಿರ್ಮಿಸಲಾಗಿದೆ. ನಿರೀಕ್ಷೆ ಮೀರಿದ ಸೇವೆ ದೊರೆಯುತ್ತಿದೆ. ಪರಿಣಾಮ, ಜಯನಗರ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ೩೬ ಲಕ್ಷ ರೂ ಬಹುಮಾನ ಬಂದಿದೆ. ಅದು ಒಂದು ದಾಖಲೆಯಾಗಿದೆ ಎಂದು ತಿಳಿಸಿದರು.

ಅಂದುಕೊಂಡಂತೆ ಕಳೆದ ಐದು ವರ್ಷಗಳಲ್ಲಿ ಗರಿಷ್ಠ ಪ್ರಮಾಣದ ಕಾರ್ಯಯೋಜನೆ ರೂಪಿಸಿ ಅನುಷ್ಠಾನ ಮಾಡುವ ಮೂಲಕ ರಾಜ್ಯದಲ್ಲಿಯೇ ನಂಬರ್ ಒನ್ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಮ್ಮೆಲ್ಲರ ವಿಶ್ವಾಸ, ಪ್ರೀತಿ, ಸಹಕಾರವೇ ಕಾರಣವಾಗಿದೆ. ಇಡೀ ಕ್ಷೇತ್ರವನ್ನು ಬೋರ್ವೆಲ್ ಮುಕ್ತ ಮಾಡಲಾಗಿದೆ. 482 ಕಿಮೀ ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲಾಗಿದೆ. ರಾಜಕಾಲುವೆ, ಯುಜಿಡಿ, ಮಳೆ ನೀರಿನ ವ್ಯವಸ್ಥೆ ಸರಿಪಡಿಸಲಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು