News Karnataka Kannada
Thursday, May 02 2024
ಮೈಸೂರು

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಅಗತ್ಯ- ಎಸ್.ಎ.ರಾಮದಾಸ್

Mysuru: Honesty is essential in the co-operative sector, says S.A. Ramdas
Photo Credit : By Author

ಮೈಸೂರು: ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಕೈಗಳ ಕೊರತೆಯಿಂದ ಕೆಲವು ಸಮಸ್ಯೆಗಳು ಕಾಣುತ್ತಿವೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನ ಭಾರತಿ ಸಂಗೀತ ಸಭಾದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮತ್ತು ಸಂಗೀತ ,ನೃತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ

ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಹಾಗೂ ಸಂಘದ ಹಿರಿಯ ನಾಗರಿಕರಿಗೆ ಹಾಗೂ ವೈದ್ಯರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಸಂಘದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ನೀವು ಎತ್ತರಕ್ಕೆ ಬೆಳೆಯಬಹುದು. ಆ ಮೂಲಕ ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡಬೇಕು. ಸಹಕಾರಿ ಬಂಧುಗಳು ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಜನಸಾಮಾನ್ಯರ ಕಾಮಧೇನು ಸಹಕಾರ ಕ್ಷೇತ್ರವಾಗಿದೆ. ಕೋವಿಡ್ ಸಂದರ್ಭದಲ್ಲಿ ದೇಶ ಆರ್ಥಿಕ ಸಮತೋಲನ ಹೊಂದಲು ಸಹಕಾರ ಕ್ಷೇತ್ರ ಕಾರಣವಾಗಿದೆ. ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು

ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಸಿ.ವಿ.ಪಾರ್ಥಸಾರಥಿ ಕಳೆದ ವರ್ಷವೂ ಸಹ ವೀರ ಯೋಧರಿಗೆ ಗೌರವ ಸಲ್ಲಿಸಿದ್ದೇವೆ ಅದೇ ರೀತಿ ಈ ವರ್ಷ ಸಹ ನಮ್ಮ ಸಂಘದ ಹಿರಿಯ ವೈದ್ಯರು ಹಾಗೂ ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಮೂಲಕ ಸಹಕಾರ ಸಪ್ತಹ ಮತ್ತು ಕನ್ನಡ ರಾಜ್ಯೋತ್ಸವ ವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದರು.

ಇದೇ ವೇಳೆ ವಿಕ್ರಮ್ ಅಯ್ಯಂಗಾರ್ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ), ಆನಂದ್ (ಉತ್ತಮ ಶಿಕ್ಷಕ) ವೇ.ಬ್ರ.ಶಶಿ ಶೇಖರ ಧೀಕ್ಷಿತ್(ಧಾರ್ಮಿಕ ಕ್ಷೇತ್ರ), ಆರ್.ಅನಂತರಾಮನ್(ಸಹಕಾರ ಕ್ಷೇತ್ರ) ಹೆಚ್.ವಿ.ಎಲ್.ಎನ್. ಅಯ್ಯಂಗಾರ್ ಅಧ್ಯಕ್ಷರು, ಶ್ರೀ ರಾಮಾನುಜ ಅಭ್ಯಯದ ಸ.ಸಂ.(ಸಹಕಾರಿಗಳು), ಸುದರ್ಶನ್ ಎಸ್, ನಿರ್ದೇಶಕರು, ಶ್ರೀ. ವಾಗ್ದೇವಿ ಸೌಹಾರ್ದ ಸ.ಸಂ.(ಸಹಕಾರಿಗಳು) ಅವರನ್ನು ಸನ್ಮಾನಿಸಲಾಯಿತು.

ಮೂಡಾ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ, ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಹೆಚ್.ಎಸ್.ಪ್ರಶಾಂತ್ ತಾತಾಚಾರ್, ಖಜಾಂಚಿ ಎಂ.ಡಿ.ಗೋಪಿನಾಥ್, ಕೆ.ನಾಗರಾಜ್, ಎಂ.ಆರ್.ಪ್ರೀತಮ್, ಎನ್.ಫಣಿರಾಜ್, ಎಸ್.ಎನ್.ನಾಗಶಂಕರ, ಎಂ.ಆರ್.ಬಾಲಕೃಷ್ಣ, ಕೆ.ಎನ್.ಅರುಣ್, ನಾಗೇಂದ್ರ ಯಾದವ್, ಎನ್.ಎಸ್.ರಂಗನಾಥ್, ರೇಖಾ, ಎಂ.ಎನ್,ಸೌಮ್ಯ, ಎಸ್. ರಾಜಮ್ಮ(ಕೋ-ಆಪ್ಟ್)ಮತ್ತು ಜಿ.ಎನ್.ಸತೀಶ (ಕೋ-ಆಪ್ಟ್). ಪ್ರಭಾರ ಕಾರ್ಯದರ್ಶಿ ವೀಣಾನಾಗಸುಂದರ್ ಹಾಗೂ ಸಿಬ್ಬಂದಿ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು