News Karnataka Kannada
Saturday, May 04 2024
ಮೈಸೂರು

ಮೈಸೂರು: ಜನರಿಗೆ ಸೈಬರ್ ಅಪರಾಧದ ಅರಿವು ಅಗತ್ಯ- ಡಾ.ಚಂದ್ರಗುಪ್ತ

Mysore/Mysuru: People need to be aware of cyber crime: Dr. Chandragupta
Photo Credit : By Author

ಮೈಸೂರು: ಜನರು ಜಾಗ್ರತೆವಹಿಸಿದರೆ ಸೈಬರ್ ಅಪರಾಧಗಳು ಕಡಿಮೆಯಾಗುತ್ತದೆ. ಸಾರ್ವಜನಿಕರಿಗೆ ಮಳಿಗೆಗೆ ಭೇಟಿ ನೀಡಿದೆ ವಂಚನೆ ಒಳಗಾಗದಂತೆ ಎಚ್ಚರಿಕೆ ವಹಿಸಬಹುದು ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಚಂದ್ರಗುಪ್ತ, ನಗರ ಪೊಲೀಸ್ ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಸಿಐಡಿ, ನಗರ ಪೊಲೀಸ್ ಸಹಯೋಗದಲ್ಲಿ ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಸೈಬರ್ ಅಪರಾಧದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಳಿಗೆಯಲ್ಲಿ ಆನ್‌ಲೈನ್ ಮೂಲಕ ಹ್ಯಾಕಿಂಗ್, ನೆಟ್ ಬ್ಯಾಕಿಂಗ್ ವಂಚನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ, ಅಪರಿಚಿತರ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಅನುಸರಿಸಬೇಕಾದ ಕ್ರಮಗಳೇನು, ಹಣ ಹೂಡಿಕೆ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು ಮತ್ತು ಸಾರ್ವಜನಿಕರು ಅಪರಾಧ ದಾಖಲೆಗಳನ್ನು ಪಡೆಯುವ ಸುಲಭ ಮಾದರಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯಕ್ರಮಗಳ ಮಾಹಿತಿ ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಇಲ್ಲಿ ಸಾರ್ವಜನಿಕರಿಗೆ ಅಪರಾಧಗಳ ಬಗ್ಗೆ ಜಾಗ್ರತೆ ವಹಿಸಲು ಉಪಯುಕ್ತ ಮಾಹಿತಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಜತೆಗೆ ಮಳಿಗೆಯಲ್ಲಿ ಸೈಬರ್ ಅಪರಾಧ ತಡೆ ಸುರಕ್ಷಾ ಸಲಹೆಗಳನ್ನು ನೀಡಲಾಗಿದೆ. ಬ್ಯಾಂಕಿಂಗ್ ಮಾಹಿತಿಗಳಾದ ಕಾರ್ಡ್ ನಂಬರ್, ಮುಕ್ತಾಯದ ಅವಧಿ, ಸಿವಿವಿ, ಒಟಿಪಿ, ಪಿನ್, ಯುಪಿಐ ಎಂಪಿಎನ್ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ಅಪರಿಚಿತ ಮೂಲದ ಸಂದೇಶ, ಇಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಸರ್ಚ್ ಇಂಜಿನ್‌ನಲ್ಲಿ ಕಂಡು ಬರುವ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ನೈಜತೆ ತಿಳಿಯಬೇಕು ಎಂದು ಹೇಳಿದರು.

ಸಿಐಡಿ, ಸೈಬರ್ ಕ್ರೈಂ ಎಸ್ಪಿ ಅನುಚೇತ್ ಮಾತನಾಡಿ, ಸರ್ವರ್ ಹ್ಯಾಕ್, ಬ್ಲ್ಯಾಕ್ ಮೇಲ್, ಉದ್ಯೋಗ ಕೊಡಿಸುವುದಾಗಿ ಹಣ ಪಡೆಯುವುದು ಸೇರಿ ಅಂತರ್ಜಾಲ ಬಳಸಿಕೊಂಡು ವಂಚನೆ ಮಾಡಲಾಗುತ್ತಿದೆ. ಅಂತರ್ಜಾಲದ ಮೂಲಕ ವಂಚನೆ ಮಾಡುವವರಿಗೆ ಕನಿಷ್ಠ 3 ವರ್ಷದಿಂದ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ ಎಂದರು.

ಇನ್ನು ಮಳಿಗೆಯಲ್ಲಿ ಆನ್‌ಲೈನ್ ಮೂಲಕ ಸಾಲ ನೀಡುವ ಅನಧಿಕೃತ ಆಪ್‌ಗಳನ್ನು ಬಳಸಬಾರದು. ಉದ್ಯೋಗ ಕೊಡಿಸುವ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ನೀಡಬಾರದು. ಮಕ್ಕಳ ಅಶ್ಲೀಲ ಚಿತ್ರ, ದೃಶ್ಯಾವಳಿ ಇತ್ಯಾದಿಗಳನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಅಪರಾಧ ಎಂದು ತಿಳಿದಿರುವಂತೆ ತಿಳಿಸಲಾಗಿದೆ.

ಹಣ ಹೂಡಿಕೆ ಜಾಗರೂಕತೆ: ಖಚಿತವಲ್ಲದ ಸಂಸ್ಥೆಗೆ ಹಣ ಹೂಡಿಕೆ ಮಾಡಬಾರದು. ವೆಬ್‌ಸೈಟ್, ಕಂಪನಿ, ವ್ಯಕ್ತಿಯನ್ನು ನಿರ್ಣಯಿಸಿ ಹೂಡಿಕೆ ಅಪಾಯಕಾರಿ. ಅಪೇಕ್ಷಿಸಿದ ಇಮೇಲ್ ನಲ್ಲಿನ ಸಂಗತಿ ಆಧರಿಸಿ ಕಂಪನಿಗಳಲ್ಲಿ ಹಣ ಹೂಡದಂತೆ ಅರಿವು ಮೂಡಿಸಲಾಗಿದೆ. ಇ ಲಾಸ್ಟ್ ಮೊಬೈಲ್ ಅಪ್ಲಿಕೇಷನ್ ಮೂಲಕ ಮೊಬೈಲ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸಿಮ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಮುಂತಾದ ವಸ್ತುಗಳು ಕಳೆದು ಹೋದರೆ ದೂರು ನೀಡುವ ಬಗ್ಗೆ ಮಾಹಿತಿ ಪಡೆಯಬಹುದು. ನಾಗರಿಕ ಕೇಂದ್ರಿತ ಮೋರ್ಟಲ್ ಸೇವೆಗಳ ಪಟ್ಟಿಯಲ್ಲಿ ಹಿರಿಯ ನಾಗರಿಕರ ನೋಂದಣಿ, ಬೀಗ ಹಾಕಿದ ಮನೆಯ ನೋಂದಣಿ ಮಾಡಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು