News Karnataka Kannada
Wednesday, May 08 2024
ಮೈಸೂರು

ಮೈಸೂರಿನಲ್ಲಿ ಗಮನಸೆಳೆಯುತ್ತಿರುವ ಗೃಹಶೋಭೆ ವಸ್ತುಪ್ರದರ್ಶನ

Mysore
Photo Credit : By Author

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಹತ್ತು ದಿನಗಳ ಕಾಲ ಆಯೋಜಿಸಿರುವ ಗೃಹಶೋಭೆ ಲಿವಿಂಗ್ ಸ್ಟೈಲ್ ವಸ್ತುಪ್ರದರ್ಶನ ಮತ್ತು ಕೇಕ್ ಪ್ರದರ್ಶನಕ್ಕೆ ಗ್ರಾಹಕರ ಸೆಳೆಯುತ್ತಿದ್ದು, ಆಕರ್ಷಕ ಪ್ರದರ್ಶನಕ್ಕೆ ಮೇಯರ್ ಶಿವಕುಮಾರ್ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಚಾಲನೆ ನೀಡಿದ್ದಾರೆ.

ಗೃಹಶೋಭೆಯಲ್ಲಿ ಡಾಲ್ಫಿನ್ ಬೇಕರ್ಸ್‌ ನಿಂದ ಆಯೋಜಿಸಿರುವ ಕೇಕ್ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದು, ಗ್ರಾಹಕರು ಅತ್ತ ಹೆಜ್ಜೆ ಹಾಕುವಂತೆ ಮಾಡಿದೆ. ವಿಶೇಷವಾಗಿ ನೂತನ ಸಂಸತ್ ಭವನ ಮತ್ತು ರಾಷ್ಟ್ರೀಯ ಲಾಂಛನವನ್ನು ಕೇಕ್‌ನಲ್ಲೇ ನಿರ್ಮಿಸಲಾಗಿದೆ. ಇವುಗಳನ್ನು ವಿಶೇಷವಾಗಿ ಥರ್ಮಾಕೋಲ್, ಫಾಂಡೆಂಟ್ ಐಸ್‌ಕ್ರೀಮ್ ಮತ್ತು ಆಹಾರ ಬಣ್ಣಗಳಿಂದ ನಿರ್ಮಾಣ ಮಾಡಲಾಗಿದೆ. ಆರು ಕಾರ್ಮಿಕರ ಸಹಾಯದಿಂದ ಈ ಕಲಾಕೃತಿಯನ್ನು 35 ದಿನಗಳಲ್ಲಿ ತಯಾರಿಸಿರುವುದು ಗಮನಾರ್ಹವಾಗಿದೆ.

12 ಅಡಿ ಉದ್ದ ಮತ್ತು 4 ಅಡಿ ಅಗಲವಿರುವ ಸಂಸತ್ ಭವನ ಕಲಾಕೃತಿಯ ಕೇಕ್ ಅಂದಾಜು 560 ಕೆಜಿ ತೂಕವಿದೆ. ಇದರ ಜತೆಗೆ 500 ಕೆಜಿ ತೂಕದ ರಾಷ್ಟ್ರೀಯ ಲಾಂಛನ ಕಲಾಕೃತಿಯ ಕೇಕ್, 6 ಅಡಿ ಅಗಲ ಮತ್ತು 10 ಅಡಿ ಎತ್ತರವಿದೆ. ಇದಲ್ಲದೆ ಟೈಟಾನಿಕ್, ಸ್ಪೋರ್ಟ್ಸ್ ಕಾರ್, ಫಿಫಾ ವರ್ಲ್ಡ್‌ಕಪ್ ಮತ್ತು ಜರ್ಸಿ, ಜಂಗಲ್ ಥೀಮ್, ಟ್ರೀಹೌಸ್, ವೆಡ್ಡಿಂಗ್ ಸ್ಟೆಪ್ ಇನ್ನಿತರ ಕಲಾಕೃತಿಗಳನ್ನು ಕೇಕ್‌ನಲ್ಲಿ ತಯಾರಿಸಿ ಪ್ರದರ್ಶನ ಮಾಡಲಾಗಿದೆ.

ಇನ್ನು ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿದ್ದು, ಕಡಿಮೆ ದರದಲ್ಲಿ ಗುಣಮಟ್ಟದ ಹಾಗೂ ಆಕರ್ಷಕ ವಿನ್ಯಾಸದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಆಟೋಮೊಬೈಲ್‌ಗಳು, ಪೇಂಟಿಂಗ್‌ಗಳು, ಕಾರ್ಪೆಟ್‌ಗಳು, ಮಾಡ್ಯುಲರ್ ಕಿಚನ್‌ಗಳಂತಹ ಬ್ರ್ಯಾಂಡೆಡ್ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ದೊಡ್ಡ ರಿಯಾಯಿತಿ ಮತ್ತು ಆಶ್ಚರ್ಯಕರ ಉಡುಗೊರೆಗಳ ಜತೆಗೆ ವಿವಿಧ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳು ಇವೆ.

ಪ್ರತ್ಯೇಕ ಆಹಾರ ಮಳಿಗೆಗಳೂ ಇದ್ದು, ಆಹಾರ ಪ್ರಿಯರು ವೈವಿಧ್ಯಮಯ ಆಹಾರ ಸೇವಿಸಬಹುದಾಗಿದೆ. ಮಕ್ಕಳನ್ನು ರಂಜಿಸುವ ಉದ್ದೇಶದಿಂದ ಸಾಕಷ್ಟು ಮನೋರಂಜನೆಗೆ ಆಟಿಗಳು ಇವೆ. ಸಣ್ಣ ಕಂಪನಿ ಉತ್ಪನ್ನಗಳಿಂದ ಆರಂಭವಾಗಿ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯ ಇದೆ. ಪ್ರದರ್ಶನ ಡಿ.25ರವರೆಗೆ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು