News Karnataka Kannada
Wednesday, May 08 2024
ಮೈಸೂರು

ಮೈಸೂರಿನ ವಿಶೇಷ ಕೈಮಗ್ಗ ಮೇಳದಲ್ಲಿ ಏನೇನಿದೆ?

New Project (1)
Photo Credit :

ಮೈಸೂರು: ನೇಕಾರರು ಮತ್ತು ನೇಕಾರರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಹಾಗೂ ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡುವ ಸಲುವಾಗಿ ನವದೆಹಲಿಯ ಕೈಮಗ್ಗ ಜವಳಿ ಮಂತ್ರಾಲಯ ಮತ್ತು ಬೆಂಗಳೂರಿನ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿಯು  ಮೈಸೂರಿನ ಜೆಎಸ್ ಎಸ್ ಅರ್ಬನ್ ಹಾತ್ ನಲ್ಲಿ ವಿಶೇಷ ಕೈಮಗ್ಗ ಮೇಳ ಸಂಸ್ಕೃತಿ-2021 ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಮಾರಾಟ ಮೇಳವು ಡಿ.18ರಿಂದ ಜ.2ರವರೆಗೆ ನಡೆಯಲಿದ್ದು, ಉತ್ತರ ಭಾರತದ ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಗುಲ್ಬರ್ಗ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರ ಸಹಕಾರಿ ಸಂಘಗಳು ಸೇರಿದಂತೆ ಸುಮಾರು 60 ಕ್ಕೂ ಹೆಚ್ಚು ನೇಕಾರರು, ನೇಕಾರರ ಸಹಕಾರ ಸಂಘಗಳು ಪಾಲ್ಗೊಳ್ಳುತ್ತಿವೆ.

ಮೇಳದಲ್ಲಿ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಅಲ್ಲದೆ ಮನಸೆಳೆಯುವ ರೇಷ್ಮೆ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಂಜಿವರಮ್ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡಿರಿ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ, ಒರ್ರಿಸ್ಸಾ ರಾಜ್ಯದ ಸಂಬಲ್‌ಪುರಿ ಸೀರೆ, ಇಕ್ಕತ್, ಬೊಂಕಾಯಿ ಸೀರೆ, ಕಾಶ್ಮೀರ ರಾಜ್ಯದ ಪಶ್ಮಿನಾ ಶಾಲ್, ಆಂದ್ರಪ್ರದೇಶದ ಗೊದ್‌ವಾಲ್ ರೇಷ್ಮೇ ಸೀರೆ, ಕಲ್ಮಕಾರಿ ಸೀರೆ, ಪೊಚಂಪಲ್ಲಿ ಸೀರೆಗಳು ಮತ್ತು ಮಧುರೈ ಟೈ ಅಂಡ್ ಡೈ, ಗುಜರಾತ್ ರಾಜ್ಯದ ಪಟೋಲ ರೇಷ್ಮೆ ಸೀರೆಗಳು ಇತರೆ ಎಲ್ಲಾ ರಾಜ್ಯದ ರೇಷ್ಮೇ ಹಾಗೂ ಕಾಟನ್ ಸೀರೆಗಳು, ಡ್ರೆಸ್ ಮೆಟೀರಿಯಲ್‌ಗಳು, ಕಸೂತಿ ವಸ್ತ್ರಗಳು, ಟವಲ್‌ಗಳು, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯಲಿದೆ.

ಮೇಳದ ಅವಧಿಯಲ್ಲಿ ಕೋವಿಡ್-19ನ ಸರ್ಕಾರದ ಹಾಗೂ ಆಡಳಿತ ಮಂಡಳಿಯ ನಿಯಮಗಳಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗುತ್ತಿರುವುದಾಗಿ ಆಯೋಜಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು