News Karnataka Kannada
Thursday, May 09 2024
ಮೈಸೂರು

ಮೈಸೂರಿನಲ್ಲಿ ಕೊರೊನಾ ಆರ್ಭಟಕ್ಕೆ ಇಬ್ಬರು ಬಲಿ   

Kokkada: Woman dies after tree falls on her head
Photo Credit :

ಮೈಸೂರು: ಮೈಸೂರಿನಲ್ಲಿ ಸಾಂಕ್ರಾಮಿಕ ಮಹಾಮಾರಿ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದ್ದು, ಶುಕ್ರವಾರ 803 ಮಂದಿಗೆ ಸೋಂಕು ತಗುಲಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹರಡುವಿಕೆ ತೀವ್ರವಾಗುತ್ತಿದ್ದು, ಪ್ರತಿನಿತ್ಯ ನೂರಕ್ಕೂ ಹೆಚ್ಚು ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ರಾಜ್ಯದಲ್ಲಿ ಬೆಂಗಳೂರಿನ ನಂತರ ಮೈಸೂರಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಶುಕ್ರವಾರ ಜಿಲ್ಲೆಯಲ್ಲಿ 11063 ಪರೀಕ್ಷೆ ಮಾಡಿದ್ದು, 75 ಮಕ್ಕಳು ಸೇರಿದಂತೆ 803 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.7.26ರಷ್ಟಿದೆ.

160 ಮಂದಿ ಗುಣಮುಖ: ಈವರೆಗೆ ಜಿಲ್ಲೆಯಲ್ಲಿ 184223 ಮಂದಿಗೆ ಸೋಂಕು ಹರಡಿದ್ದು, ಶುಕ್ರವಾರ 160 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಇದರಿಂದ ಗುಣಮುಖರಾದವರ  ಸಂಖ್ಯೆ 178328ಕ್ಕೆ ಏರಿಕೆಯಾಗಿದೆ. ಸಧ್ಯಕ್ಕೆ ಜಿಲ್ಲೆಯಲ್ಲಿ 3462 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 2433ಕ್ಕೆ ಹೆಚ್ಚಿದೆ.

ತಾಲೂಕುವಾರು ಮಾಹಿತಿ: ಮೈಸೂರು ನಗರದಲ್ಲಿ 642, ಕೆ.ಆರ್.ನಗರ 16, ಮೈಸೂರು ತಾಲೂಕು 32, ನಂಜನಗೂಡು 16, ಪಿರಿಯಾಪಟ್ಟಣ 8, ತಿ.ನರಸೀಪುರದಲ್ಲಿ 51, ಹುಣಸೂರು 17, ಎಚ್.ಡಿ.ಕೋಟೆಯಲ್ಲಿ 14, ಸಾಲಿಗ್ರಾಮದಲ್ಲಿ 5 ಪ್ರಕರಣ ದಾಖಲಾಗಿದ್ದರೆ ಸರಗೂರು ತಾಲೂಕಿನಲ್ಲಿ 2 ಪ್ರಕರಣ ವರದಿಯಾಗಿದೆ. 5 ವರ್ಷ ಒಳಪಟ್ಟ 2 ಮಕ್ಕಳಲ್ಲಿ, 6ರಿಂದ 10 ವರ್ಷದ ಒಳಗಿನ 09 ಮತ್ತು 10ರಿಂದ 17 ವರ್ಷದೊಳಗಿನ 64 ಮಕ್ಕಳು ಸೇರಿದಂತೆ ಒಟ್ಟು 75 ಮಕ್ಕಳಿಗೆ ಸೋಂಕು ಹರಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು