News Karnataka Kannada
Tuesday, April 30 2024
ಕೇರಳ

ಕೊರೋನಾ, ಒಮಿಕ್ರಾನ್ ಹೆಚ್ಚಳ: ಜನವರಿ 21 ರಿಂದ ಕೇರಳದಲ್ಲಿ ಶಾಲೆ ಬಂದ್

School
Photo Credit :

ಕಾಸರಗೋಡು : ಕೊರೋನಾ  , ಒಮಿಕ್ರಾನ್  ಹೆಚ್ಚಳದ ಹಿನ್ನಲೆಯಲ್ಲಿ ಕೇರಳದಲ್ಲಿ  ಜನವರಿ 21 ರಿಂದ ಕೇರಳದಲ್ಲಿ  ಒಂದರಿಂದ ಒಂಭತ್ತನೇ  ತನಕದ ಶಾಲೆಗಳು ಮತ್ತೆ  ಮುಚ್ಚಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಅವಲೋಕನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

21 ರಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ನಡೆಯಲಿದೆ . ಎರಡು ಫೆಬ್ರವರಿ ಎರಡನೇ ವಾರದ ತನಕ  ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದ್ದು , ಬಳಿಕ ಕೋವಿಡ್  ಸ್ಥಿತಿಗತಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ  ನಿರ್ಧಾರ ತೆಗೆದುಕೊಳ್ಳಲಿದೆ.

ಆದರೆ 10 ರಿಂದ 12 ನೇ ತರಗತಿ ತನಕ ಎಂದಿನಂತೆ ತರಗತಿ ನಡೆಯಲಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ನಿಯಂತ್ರಣ ಸದ್ಯಕ್ಕೆ ಅಗತ್ಯ ಇಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ . ಕೋವಿಡ್ ಹೆಚ್ಚಳದ ಹಿನ್ನಲೆಯಲ್ಲಿ ಕ್ಲಸ್ಟರ್ ಗಳನ್ನು  ಗುರುತಿಸಿ  ನಿಯಂತ್ರಣ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಆದೇಶ ನೀಡಿದರು ಸರಕಾರಿ  ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಗರ್ಭಿಣಿಯರಿಗೆ ವರ್ಕ್  ಪ್ರಂ ಹೋಂ  ವ್ಯವಸ್ಥೆ ಜಾರಿಗೊಳಿಸಲಾಗಿದೆ.

ಸರಕಾರಿ , ಸಾರ್ವಜನಿಕ ವಲಯ , ಸಹಕಾರಿ  ಸಂಸ್ಥೆಗಳಲ್ಲಿ  ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಆನ್  ಲೈನ್ ಆಗಿ ನಡೆಸಲು ನಿರ್ದೇಶನ ನೀಡಲಾಗಿದೆ. ಟೆಸ್ಟ್ ಪಾಸಿಟಿವಿಟಿ 20 ಕ್ಕಿಂತ ಮೇಲಿನ ಜಿಲ್ಲೆಗಳಲ್ಲಿ ಸಾಮಾಜಿಕ , ಸಾಂಸ್ಕೃತಿಕ , ಧಾರ್ಮಿಕ  ಕಾರ್ಯಕ್ರಮ ಅಲ್ಲದೆ ವಿವಾಹ , ಮರಣಾನಂತರ  ಕಾರ್ಯಕ್ರಮಗ ಳಿಗೆ 50 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ .

ಇದಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳುವು ದಾದರೆ  ಅನುಮತಿ ಪಡೆಯಬೇಕು.  ಟೆಸ್ಟ್ ಪಾಸಿಟಿವಿಟಿ 30 ದಾಟಿದ್ದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ . ಎಲ್ಲಾ ವ್ಯಾಪಾರ ಮಳಿಗೆಗಳಲ್ಲಿ ಆನ್ ಲೈನ್ ಮಾರಾಟ  ಹಾಗೂ ಬುಕ್ಕಿಂಗ್  ಗೆ ಆದ್ಯತೆ ನೀಡಬೇಕು. ಮಾಲ್ ಗಳಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು  ಜನರಿಗೆ ಪ್ರವೇಶ ನೀಡಬೇಕು ಎಂದು ತಿಳಿಸಲಾಯಿತು.

10,11, 12 ನೇ ತರಗತಿ ಯ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ತೆರಳಿ ವ್ಯಾಕ್ಸಿನ್ ನೀಡಲು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಮುಂದಾಗುವಂತೆ ಮುಖ್ಯಮಂತ್ರಿ ಸಲಹೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು