News Karnataka Kannada
Sunday, April 28 2024
ಮೈಸೂರು

ಮೈಸೂರು: ಅರಮನೆ ಪುರೋಹಿತ ವಿ.ಪ್ರಹ್ಲಾದ್ ರಾವ್ ಗೆ ಅಭಿನಂದನೆ ಸಲ್ಲಿಕೆ

Mysore/Mysuru: Palace Priest V. Prahlad Rao has been felicitated.
Photo Credit : By Author

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ದಲ್ಲಿ ಭಾಗವಹಿಸುವ ಆನೆಗಳ ಹಾಗೂ ಅಂಬಾರಿಯಲ್ಲಿ ಪ್ರತಿಷ್ಠಾಪಿಸುವ ಚಾಮುಂಡೇಶ್ವರಿಗೆ ಸತತವಾಗಿ 25ವರ್ಷಗಳಿಂದ ಪೂಜಾ ಕೈಂಕರ್ಯಗಳನ್ನು ಸಲ್ಲಿಸುತ್ತಿರುವ ಅರಮನೆ ಪುರೋಹಿತ ವಿದ್ವಾನ್ ಪ್ರಹ್ಲಾದ್ ರಾವ್ ಅವರನ್ನು ಮೈಸೂರು ರಕ್ಷಣಾ ವೇದಿಕೆ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಇನ್ನಿತರ ಸಂಘಟನೆ ವತಿಯಿಂದ ಅಭಿನಂದಿಸಲಾಯಿತು.

ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ರವರು ಕಳೆದ 25ವರ್ಷಗಳಿಂದ ನಾಡಹಬ್ಬ ದಸರಾ ಸಂದರ್ಭದಲ್ಲಿ ಗಜಪಡೆಯನ್ನು ವೇದಬ್ರಹ್ಮ ಅರಮನೆ ಪುರೋಹಿತ ಪ್ರಹಲ್ಲಾದ್ ರವರು ಮೈಸೂರಿಗೆ ಬರಮಾಡಿಕೊಂಡು ನಾಡಿನ ಜನತೆಗೆ ಸುಖ ಶಾಂತಿ ಸಮೃದ್ಧಿ ಸಿಗಲೆಂದು ನಾಡದೇವತೆಯಲ್ಲಿ ಪ್ರಾರ್ಥನೆ ಸಂಕಲ್ಪಿಸಿ ಪ್ರತಿದಿನ ನವರಾತ್ರಿಯಲ್ಲಿ ಆನೆಗೆ ಪೂಜೆ ನೈವೇದ್ಯ ಪ್ರಸಾದ ಕೊಟ್ಟು, ಜಂಬೂಸವಾರಿ ಹೊರಡುವ ಸಂದರ್ಭದಲ್ಲಿ ಅಂಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಧಾರ್ಮಿಕ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ಮೈಸೂರು ಜಿಲ್ಲಾಡಳಿತ ಪುರೋಹಿತ ಪ್ರಹಲ್ಲಾದ್ ರವರ ಸೇವೆಯನ್ನ ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸ ಬೇಕು ಎಂದು ಒತ್ತಾಯಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಅರಮನೆ ಪುರೋಹಿತರಾದ ಪ್ರಹಲ್ಲಾದ್ ರವರು ಮಾತನಾಡಿ ಕಾಡಿನ ಪ್ರದೇಶವಾದ ಎನ್. ಬೇಗೂರು ಗ್ರಾಮದಲ್ಲಿ ನಮ್ಮ ತಂದೆಯವರಾದ ವಾಸುದೇವರಾವ್ ರವರು ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಕುಟುಂಬದವರೆಲ್ಲರೂ ಆನೆಯ ಒಡನಾಟದಲ್ಲಿಯೇ ಬೆಳೆದೆವು. ಪ್ರತಿದಿನ ಆನೆಗಳ ಭಾಷೆಗಳನ್ನ ಅರಿತು ಬಾಂಧವ್ಯ ಬೆಳೆಯಿತು, ಆನೆಗಳು ನಮ್ಮನ್ನ ಕಂಡರೆ ಸಾಕು ಪ್ರೀತಿ ಮಮತೆ ತೋರಿಸುತ್ತವೆ. ಪೂಜಾಕೈಂಕರ್ಯ ಸಲ್ಲಿಸುವಾಗ ಮಂತ್ರಗಳನ್ನು ಹೇಳುವ ಸಂಧರ್ಭದಲ್ಲಿ ಆನೆಯ ಭಾಷೆಗಳ ಮೂಲಕ ಮಾತನಾಡಿಸಿದಾಗ ಗಜಪಡೆ ಬಹಳ ಶಾಂತಿಯಿಂದ ಭಕ್ತಿಪೂರ್ವಕವಾಗಿ ಭಾಗವಹಿಸುತ್ತವೆ ಎಂದರು.

ಇದೇ ಸಂದರ್ಭದಲ್ಲಿ ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಮೈಸೂರು ರಕ್ಷಣಾ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಅಜಯ್ ಶಾಸ್ತ್ರಿ, ಎಸ್ ಎನ್ ರಾಜೇಶ್, ರಾಕೇಶ್ ಕುಂಚಿಟಿಗ, ಸತೀಶ್, ಶರತ್, ಲಿಂಗರಾಜು ಹಾಗೂ ಇನ್ನಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು