News Karnataka Kannada
Saturday, April 27 2024
ಮಡಿಕೇರಿ

ವಿಶ್ವ ಹಿಂದೂ ಪರಿಷತ್ ವತಿಯಿಂದ ತಲಕಾವೇರಿಯಲ್ಲಿ ಮಳೆಗಾಗಿ ಪ್ರಾರ್ಥನೆ

ವಿಶ್ವ ಹಿಂದೂ ಪರಿಷತ್ ಕೊಡಗು ಮತ್ತು ಬೆಂಗಳೂರು ಮಹಾನಗರ, ಬನಶಂಕರಿ ಜಿಲ್ಲೆಯ ಕಾರ್ಯಕರ್ತರ ವತಿಯಿಂದ ಮಳೆ ಬಾರದೆ ರಾಜ್ಯದಾದ್ಯಂತ ಬರಗಾಲದ ಪರಿಸ್ಥಿತಿ ಎದುರಾಗಿರುವ ಕಾರಣ ಶ್ರೀ ಕ್ಷೇತ್ರಭಾಗಮಂಡಲದಲ್ಲಿ ವಿಶೇಷ ಪೂಜೆ ಮತ್ತು ಬೆಳ್ಳಿಯ ಹರಕೆಯನ್ನು ಸಮರ್ಪಿಸಲಾಯಿತು.
Photo Credit : NewsKarnataka

ಕೊಡಗು: ವಿಶ್ವ ಹಿಂದೂ ಪರಿಷತ್ ಕೊಡಗು ಮತ್ತು ಬೆಂಗಳೂರು ಮಹಾನಗರ, ಬನಶಂಕರಿ ಜಿಲ್ಲೆಯ ಕಾರ್ಯಕರ್ತರ ವತಿಯಿಂದ ಮಳೆ ಬಾರದೆ ರಾಜ್ಯದಾದ್ಯಂತ ಬರಗಾಲದ ಪರಿಸ್ಥಿತಿ ಎದುರಾಗಿರುವ ಕಾರಣ ಶ್ರೀ ಕ್ಷೇತ್ರಭಾಗಮಂಡಲದಲ್ಲಿ ವಿಶೇಷ ಪೂಜೆ ಮತ್ತು ಬೆಳ್ಳಿಯ ಹರಕೆಯನ್ನು ಸಮರ್ಪಿಸಲಾಯಿತು.

ಜೀವನದಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ವಿಶೇಷ ಬಾಗಿನ ಸಮರ್ಪಣೆ ನಡೆಸಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುವಂತೆ ತಾಯಿ ಕಾವೇರಿ ಕರುಣಿಸಿ ಹರಸಲಿ ಎಂದು ಪ್ರಾರ್ಥಿಸಲಾಯಿತು.

ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ಯ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಮಾತನಾಡಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಜನರು ಮಳೆಯಿಲ್ಲದೆ ನೀರಿಲ್ಲದೆ ಬರಗಾಲದ ಪರಿಸ್ಥಿತಿಯನ್ನು ಎದುರಿಸುವಂತಾಗಿದ್ದು,
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಕಾವೇರಿನದಿಯ ಉಗಮಸ್ಥಾನ ತಲಕಾವೇರಿಯಲ್ಲಿ ಮಳೆಯು ಸಕಾಲದಲ್ಲಿ ಬರಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಭಜರಂಗದಳ ಪ್ರಾಂತ್ಯ ಸಂಯೋಜಕ ಪ್ರಪಂಚನ್, ವಿ.ಹಿಂ.ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಸಹಕಾರ್ಯದರ್ಶಿ ಕೇತೀರ ಯತೀಶ್, ಭಜರಂಗದಳ ಜಿಲ್ಲಾ ಸಂಯೋಜಕ ಪ್ರವೀಣ್ ಸಿದ್ಧಾಪುರ, ಸಹಸಂಯೋಜಕ ನವೀನ್ ಪೂಜಾರಿ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ರಿಶ್ತ ಚಂಗಪ್ಪ, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಉಮಾವತಿ, ಜಿಲ್ಲಾ ಸಹಸಂಯೋಜಕಿ ಪೂರ್ಣಿಮಾ ಸುರೇಶ್, ಕೋಶಾಧ್ಯಕ್ಷ ಸಂಪತ್ ಸರಳಾಯ, ವಿ.ಹಿಂದೂ.ಪರಿಷತ್ತಿನ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯಂಡ ಹರೀಶ್, ಕಾರ್ಯದರ್ಶಿ ಅಮ್ಮತ್ತೀರ ಸುರೇಶ್ ಮತ್ತು ಕಾರ್ಯಕರ್ತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು