News Karnataka Kannada
Thursday, May 09 2024
ಬೆಂಗಳೂರು

ತೋಟದಲ್ಲಿ ಹಾವು ಕಚ್ಚಿ 7 ವರ್ಷದ ಬಾಲಕಿ ಮೃತ್ಯು

ಹಾವು ಕಚ್ಚಿ 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ‌ಕೋಳೂರು ಗ್ರಾಮದಲ್ಲಿ ಘಟನೆ ನಡೆದಿದೆ.
Photo Credit : NewsKarnataka

ದೊಡ್ಡಬಳ್ಳಾಪುರ: ಹಾವು ಕಚ್ಚಿ 7 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ‌ಕೋಳೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಟಿ ಹೊಸಹಳ್ಳಿ ಗ್ರಾಮದ ರಾಮಾಂಜಿ ಎನ್ನುವವರ ಮಗಳು ಅನುಷಾ (7) ಮೃತ ದುರ್ದೈವಿ.

ವಿನೋದಮ್ಮ ಮತ್ತು ರಾಮಾಂಜಿನಪ್ಪ ದಂಪತಿ ಕೋಳೂರು ಗ್ರಾಮದ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ನಿನ್ನೆ ಸಂಜೆ ಅನುಷಾಳ ತಂದೆ-ತಾಯಿ‌ ತೋಟದ ಕೆಲಸದಲ್ಲಿ ನಿರಂತರಾಗಿದ್ದರು. ಈ ವೇಳೆ ಮನೆ ಹೊರಗೆ ಆಟ ಆಡುತ್ತಿದ್ದಾಗ ಬಾಲಕಿ ಅನುಷಾಗೆ ಹಾವು ಕಚ್ಚಿದೆ.

ಕೂಡಲೇ ಮಗಳು ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಪೋಷಕರು ದೊಡ್ಡಬಳ್ಳಾಪುರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನುಷಾ ಮೃತಪಟ್ಟಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು