News Karnataka Kannada
Saturday, May 04 2024
ಮಡಿಕೇರಿ

ಲೋಕಸಭಾ ಸಾರ್ವತ್ರಿಕ ಚುನಾವಣೆ: ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ಬಸ್ ಮಾರ್ಗದ ವಿವರ

ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಏಪ್ರಿಲ್, 25 ರಂದು ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಈ ಮಸ್ಟರಿಂಗ್ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಮತ್ತು ಚುನಾವಣಾ ಸಿಬ್ಬಂದಿಗಳನ್ನು ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳ ಮುಖಾಂತರ ಕರೆತರಲು ವ್ಯವಸ್ಥೆ ಮಾಡಲಾಗಿದೆ.
Photo Credit : NewsKarnataka

ಮಡಿಕೇರಿ : ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಸಂಬಂಧ ಏಪ್ರಿಲ್, 25 ರಂದು ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಈ ಮಸ್ಟರಿಂಗ್ ಕೇಂದ್ರಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಮತ್ತು ಚುನಾವಣಾ ಸಿಬ್ಬಂದಿಗಳನ್ನು ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ಕೆಎಸ್‍ಆರ್‍ಟಿಸಿ ಬಸ್ಸುಗಳ ಮುಖಾಂತರ ಕರೆತರಲು ವ್ಯವಸ್ಥೆ ಮಾಡಲಾಗಿದೆ.

ಈ ಸಂಬಂಧ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳನ್ನು ತಮ್ಮ ತಮ್ಮ ಕೇಂದ್ರ ಸ್ಥಾನದಿಂದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ನಿಯೋಜಿಸಲಾಗಿದ್ದು, ಹೊರಡುವ ಮಾರ್ಗದ ವಿವರ ಈ ರೀತಿ ಇರುತ್ತದೆ.

ಏಪ್ರಿಲ್ 25 ರಂದು ಬೆಳಗ್ಗೆ 7 ಗಂಟೆಗೆ ನಗರದ ಗಾಂಧಿ ಮೈದಾನದಿಂದ ಬಸ್ ಹೊರಟು ಮೂರ್ನಾಡು ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ ಮಸ್ಟರಿಂಗ್ ಕೇಂದ್ರಕ್ಕೆ ತಲುಪಲಿದೆ. ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಬೆಟ್ಟಗೇರಿ-ನಾಪೋಕ್ಲು-ಕಕ್ಕಬೆ-ಪಾರಾಣೆ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ.

ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಹಾಕತ್ತೂರು-ಮರಗೋಡು-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ಸಂಚರಿಸಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಕರಿಕೆ ಗ್ರಾಮ ಪಂಚಾಯಿತಿ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಭಾಗಮಂಡಲ-ಅಯ್ಯಂಗೇರಿ-ನೆಲಜಿ-ಬಲ್ಲಮಾವಟಿ-ಕಕ್ಕಬೆ-ಚೆಯ್ಯಂಡಾಣೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ.

ನಗರದ ಗಾಂಧಿ ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಕತ್ತಲೆಕಾಡು-ಕಡಗದಾಳು-ಚೆಟ್ಟಳ್ಳಿ-ಸಿದ್ದಾಪುರ-ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಸಂಪಾಜೆ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ ಹೊರಟು ಮದೆನಾಡು-ಕಾಟಕೇರಿ-ಮಡಿಕೇರಿ-ಮೂರ್ನಾಡು ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ.

ಪೆರಾಜೆಯಿಂದ ಬೆಳಗ್ಗೆ 6 ಗಂಟೆಗೆ ಬಸ್ ಹೊರಟು ಮದೆನಾಡು-ಕಾಟಕೇರಿ-ಮಡಿಕೇರಿ-ಮೂರ್ನಾಡು ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಭಾಗಮಂಡಲ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಚೇರಂಬಾಣೆ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ನಾಪೋಕ್ಲು ನಾಡ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಬೆಟ್ಟಗೇರಿ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಸಂಪಾಜೆ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಮದೆನಾಡು-ಕಾಟಕೇರಿ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಮಡಿಕೇರಿ ತಾಲ್ಲೂಕಿನ ಪೆರಾಜೆ ಯಿಂದ ಬೆಳಗ್ಗೆ 6 ಗಂಟೆಗೆ ಬಸ್ಸು ಹೊರಟು ಸಂಪಾಜೆ-ಮದೆನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಬಸ್ಸು ಹೊರಟು ಶನಿವಾರಸಂತೆ-ಸೋಮವಾರಪೇಟೆ-ಮಾದಾಪುರ-ಸುಂಟಿಕೊಪ್ಪ-ಚೆಟ್ಟಳ್ಳಿ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ಬಸ್ ತಲುಪಲಿದೆ.

ಕುಶಾಲನಗರ ತಾಲ್ಲೂಕಿನ ಕುಶಾಲನಗರ ನಾಡಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು, ಸಿದ್ದಾಪುರ (ಗುಡ್ಡೆಹೊಸೂರು, ಅಭ್ಯತ್ ಮಂಗಲ)ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಸೋಮವಾರಪೇಟೆ ತಾಲ್ಲೂಕು ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಮಾದಲಾಪುರ-ಕೂಡಿಗೆ-ಕುಶಾಲನಗರ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಶನಿವಾರಸಂತೆ ನಾಡಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಅಂಕನಳ್ಳಿ-ಆಲೂರು-ಸಿದ್ದಾಪುರ-ಕುಶಾಲನಗರ-ಸಿದ್ದಾಪುರ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ.

ಕುಶಾಲನಗರ ನಾಡಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಗುಡ್ಡೆಹೊಸೂರು-ನಂಜರಾಯಪಟ್ಟಣ-ನೆಲ್ಲಿಹುದಿಕೇರಿ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಶಿರಂಗಾಲದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಹೆಬ್ಬಾಲೆ-ಕುಶಾಲನಗರ-ಗುಡ್ಡೆಹೊಸೂರು-ನೆಲ್ಲಿಹುದಿಕೇರಿ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ ತಲುಪಲಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಶಿರಂಗಾಲದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಹೆಬ್ಬಾಲೆ-ಕುಶಾಲನಗರ-ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ್ ಕಾನ್ವೆಂಟ್ ತಲುಪಲಿದೆ. ಕುಶಾಲನಗರ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಕೊಡ್ಲಿಪೇಟೆ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಸೋಮವಾರಪೇಟೆ-ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಸೋಮವಾರಪೇಟೆ ತಾಲ್ಲೂಕು ಕಚೇರಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಮಾದಾಪುರ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ವಿರಾಜಪೇಟೆ ತಾಲ್ಲೂಕು ಮೈದಾನ(ರೋಟರಿ)ದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಪೊನ್ನಂಪೇಟೆ ತಾಲ್ಲೂಕು ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಹುದಿಕೇರಿ-ಗೋಣಿಕೊಪ್ಪ-ವಿರಾಜಪೇಟೆ-ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಕುಟ್ಟ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಶ್ರೀಮಂಗಲ-ವಿರಾಜಪೇಟೆ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಶಾಲೆ ತಲುಪುವುದು. ಪೊನ್ನಂಪೇಟೆಯ ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿ ಬಳಿಯಿಂದ ಬೆಳಗ್ಗೆ 6 ಗಂಟೆಗೆ ಬಸ್ಸು ಹೊರಟು ಬಾಳೆಲೆ-ಪೊನ್ನಪ್ಪಸಂತೆ-ಮಾಯಾಮುಡಿ-ಗೋಣಿಕೊಪ್ಪ-ಪಾಲಿಬೆಟ್ಟ-ಸಿದ್ದಾಪುರ-ಚೆಟ್ಟಳ್ಳಿ ಮಾರ್ಗವಾಗಿ ಸಂಚರಿಸಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು. ಪೊನ್ನಂಪೇಟೆ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಗೋಣಿಕೊಪ್ಪ-ಅಮ್ಮತ್ತಿ-ಸಿದ್ದಾಪುರ-ಮರಗೋಡು-ಹಾಕತ್ತೂರು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪುವುದು.

ಪೊನ್ನಂಪೇಟೆ ತಾ. ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ವಿರಾಜಪೇಟೆ-ಮೂರ್ನಾಡು ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ. ಪೊನ್ನಂಪೇಟೆ ತಿತಿಮತಿ ಜಂಕ್ಷನ್‍ನಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪಲು-ಅಮ್ಮತ್ತಿ-ಸಿದ್ದಾಪುರ-ನೆಲ್ಲಿಹುದಿಕೇರಿ-ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿ ಸಂತ ಜೋಸೆಫರ ಕಾನ್ವೆಂಟ್ ತಲುಪಲಿದೆ.

ಪೊನ್ನಂಪೇಟೆ ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಹುದಿಕೇರಿ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ. ಪೊನ್ನಂಪೇಟೆಯ ಕುಟ್ಟ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಕುಟ್ಟ-ಕಾನೂರು-ಪೊನ್ನಂಪೇಟೆ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ.

ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿ ಬಳಿಯಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಬಾಳೆಲೆ-ಪೊನ್ನಪ್ಪಸಂತೆ-ಮಾಯಾಮುಡಿ-ಗೋಣಿಕೊಪ್ಪ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪುವುದು. ಪೊನ್ನಂಪೇಟೆ ನಾಡ ಕಚೇರಿ ಬಳಿಯಿಂದ ಬೆಳಗ್ಗೆ 7 ಗಂಟೆಗೆ ಬಸ್ ಹೊರಟು ಗೋಣಿಕೊಪ್ಪ-ಪಾಲಿಬೆಟ್ಟ-ಅಮ್ಮತ್ತಿ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆ ತಲುಪುವುದು.

ಪೊನ್ನಂಪೇಟೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಬಸ್ಸು ಹೊರಟು ಗೋಣಿಕೊಪ್ಪ-ಪಾಲಿಬೆಟ್ಟ-ಅಮ್ಮತ್ತಿ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪುವುದು. ಪೊನ್ನಂಪೇಟೆ ತಿತಿಮತಿ ಜಂಕ್ಷನ್‍ನಿಂದ ಬೆಳಗ್ಗೆ 6.30 ಗಂಟೆಗೆ ಬಸ್ಸು ಹೊರಟು ಗೋಣಿಕೊಪ್ಪಲು-ಬಿಟ್ಟಂಗಾಲ-ವಿರಾಜಪೇಟೆ ಮಾರ್ಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಗೆ ತಲುಪಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು