News Karnataka Kannada
Friday, May 03 2024
ಮಡಿಕೇರಿ

ಗೋಣಿಕೊಪ್ಪ: ಎಂಟಿಎಫ್ ಯೋಜನೆ ಮಾ.31ರವರೆಗೆ ಮುಂದೂಡಿಕೆ

State govt agrees to frame rules for coffee plantation encroachment revenue land lease
Photo Credit : Freepik

ಗೋಣಿಕೊಪ್ಪ: ಏಪ್ರಿಲ್ 1 ರಿಂದ ಸೆಪ್ಟಂಬರ್ 30, 2022 ರವರೆಗಿನ ಎಂಟಿಎಫ್ ಯೋಜನೆಯನ್ನು ಮಾರ್ಚ್ 31, 2023 ರವರೆಗೆ ಮುಂದುವರೆಸಲು ಅನುಮೋದನೆ ದೊರೆತಿದ್ದು, 25 ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ಕೆಳಕಂಡ ಕೆಲಸಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2023 ರ ಫೆಬ್ರವರಿ, 15 ಕೊನೆಯ ದಿನವಾಗಿದೆ. ಆದ್ದರಿಂದ ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ, ಗೋಣಿಕೊಪ್ಪಲ್ ತಿಳಿಸಿದ್ದಾರೆ.

ರಿಪ್ಲಾಂಟೇಶನ್ – 25 ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ 15 ವರ್ಷ ಮೀರಿದ ಕುಬ್ಜ ಅರೇಬಿಕಾ ತಳಿಗಳು ಹಾಗೂ 40 ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ), ಕೆರೆ, ನೀರಾವರಿ ವ್ಯವಸ್ಥೆ.

ಸಹಾಯಧನವು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

25 ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು, ರಿಪ್ಲಾಂಟೇಶನ್ ಹಾಗೂ ಯಾಂತ್ರೀಕರಣ ಹೊರತುಪಡಿಸಿ, ಕಳೆದ ಹತ್ತು ವರ್ಷಗಳಲ್ಲಿ 2012-13 ರಿಂದ ಕಾಫಿ ಮಂಡಳಿಯಿಂದ ಯಾವುದೇ ಸಹಾಯಧನ ಪಡೆದಿರಬಾರದು, ಸಾಮಾನ್ಯ ವರ್ಗದ ಬೆಳೆಗಾರರಿಗೆ ಸಹಾಯಧನ ಶೇ. 40. ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ಸಹಾಯಧನ ಶೇ. 50., ಮೇಲಿನ ಯಾವುದೇ ಒಂದು ಕೆಲಸಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

ಅಗತ್ಯವಿರುವ ದಾಖಲೆಗಳು

ಅರ್ಜಿ (ಕಾಫಿ ಮಂಡಳಿಯ ಕಛೇರಿಯಲ್ಲಿ ಲಭ್ಯ) ಅಥವಾ www.indiacoffee.org ವೆಬ್ ಸೈಟ್ ನೋಡಬಹುದು, ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೊ, ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (RTC), ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ, ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ, ಕೆಲಸಗಳಿಗೆ ತಗಲುವ ಅಂದಾಜು ವೆಚ್ಛ ಹಾಗೂ ಪ್ಲಾನ್, ಸ್ಪ್ರಿಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್, ಎಲ್ಲಾ ದಾಖಲಾತಿಗಳ ಮೂಲ ಪ್ರತಿ, ಸ್ಕ್ಯಾನ್ ಮಾಡಿದ ದಾಖಲಾತಿಗಳು, ಮೊದಲು ಬಂದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಛೇರಿಯನ್ನು ಸಂಪರ್ಕಿಸುವುದು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು