News Karnataka Kannada
Sunday, May 05 2024
ಮಡಿಕೇರಿ

ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ‌ ಮಹೋತ್ಸವ- ಜ.7 ರಂದು ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ

Kodagu Press Club Silver Jubilee - District-level painting competition on Jan. 7
Photo Credit : Facebook

ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ಸ್ಥಾಪನೆಯಾಗಿ 2023ರ ಸೆಪ್ಟಂಬರ್ ತಿಂಗಳಿಗೆ 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅದ್ದೂರಿ ಬೆಳ್ಳಿ ಮಹೋತ್ಸವ ಆಚರಣೆ ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ ಯಿಂದ ಸೆಪ್ಟಂಬರ್ ವರೆಗೆ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಬೆಳ್ಳಿ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಜನವರಿ 7 ರಂದು ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಲ್ಸ್ ವಿದ್ಯಾಸಂಸ್ಥೆ ಸಹಯೋಗದಲ್ಲಿ 5 ವಿಭಾಗಗಳಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬೆಳ್ಳಿಹಬ್ಬ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ (5 ರಿಂದ 7) ಚಿತ್ರಕಲಾ ಸ್ಪರ್ಧೆಗೆ ಪ್ರಕೃತಿ ಎಂಬ ವಿಷಯ ನೀಡಲಾಗಿದೆ. ಪೂರ್ವ ಪ್ರಾಥಮಿಕ ಸ್ಪರ್ಧಿಗಳಿಗೆ ಒಂದು ಗಂಟೆ ಸಮಯ ನಿಗದಿ ಪಡಿಸಲಾಗಿದೆ. A4 ಸೈಜ್ ನ ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ. ಉಳಿದ ವಿಭಾಗದವರಿಗೆ A3 ಸೈಜ್ ನ ಡ್ರಾಯಿಂಗ್ ಶೀಟ್ ನೀಡಲಾಗುತ್ತದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (8 ರಿಂದ 10) ವನ್ಯಜೀವಿ ಎಂಬ ವಿಷಯ ನೀಡಲಾಗಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಾವೇರಿ ನದಿಯ ಐತಿಹ್ಯ ವಿಷಯದ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ.

ಸಾರ್ವಜನಿಕರಿಗೂ ಚಿತ್ರಕಲಾ ಸ್ಪರ್ಧೆ ಇದ್ದು, ಕೊಡಗಿನ ಐತಿಹಾಸಿಕ ಸ್ಥಳಗಳು ವಿಷಯದ ಮೇಲೆ ಚಿತ್ರ ಬಿಡಸಬೇಕಾಗುತ್ತದೆ.
ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಪ್ರತ್ಯೇಕ ಸ್ಪರ್ಧೆ ಇದ್ದು, ಪತ್ರಕರ್ತ ಎಂಬ ವಿಷಯದ ಮೇಲೆ ಚಿತ್ರ ಬಿಡಿಸಬೇಕಾಗುತ್ತದೆ. ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳು ಚಿತ್ರಕಲೆಗೆ ಕ್ರೆಯಾನ್ಸ್, ಪೇಸ್ಟಲ್ಸ್, ಜಲ ವರ್ಣ ಮಾಧ್ಯಮಗಳನ್ನು ಬಳಸಬಹುದಾಗಿದೆ. ಉಳಿದ ವಿಭಾಗದ‌ ಸ್ಪರ್ಧಿಗಳು ವಾಟರ್ ಕಲರ್, ಅಕ್ರಿಲಿಕ್, ಪೋಸ್ಟರ್ ಮಾಧ್ಯಮಗಳನ್ಬು ಬಳಸಬಹುದಾಗಿದೆ.

ಪ್ರತಿ ವಿಭಾಗದಲ್ಲಿ 3 ಸಾವಿರ ರೂ ಪ್ರಥಮ, 2 ಸಾವಿರ ರೂ ದ್ವಿತೀಯ, 1 ಸಾವಿರ ರೂ ತೃತೀಯ ಬಹುಮಾನ‌ ಮತ್ತು ಹಲವು ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಸ್ಪರ್ಧೆಯ ನೀತಿ ನಿಯಮಗಳು
*ಒಂದು ಶಾಲೆ/ಕಾಲೇಜಿನಿಂದ‌ ಗರಿಷ್ಟ 4 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಳಬಹುದು.
*ಒಬ್ಬ ಸ್ಪರ್ಧಿ ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧಿಸಬಹುದು.
*ಸ್ಪರ್ಧೆಗೆ 1.30 ಗಂಟೆ ಸಮಯಾವಕಾಶ ನೀಡಲಾಗುತ್ತದೆ.
*ಹೆಸರು ನೋಂದಾವಣೆಗೆ ಜನವರಿ 3 ಕೊನೆಯ ದಿನ.
*ನಂತರ ಬರುವ ಹೆಸರುಗಳನ್ನು ಪರಿಗಣಿಸಲಾಗುವುದಿಲ್ಲ.
*ಸ್ಥಳದಲ್ಲೇ ಹೆಸರು ನೋಂದಾವಣೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ.
ಜ.7 ರಂದು ಗೋಣಿಕೊಪ್ಪ ಕಾಲ್ಸ್ ಶಾಲೆಯಲ್ಲಿ ಬೆಳಗ್ಗೆ 9.30 ಗಂಟೆಗೆ ಸ್ಪರ್ಧೆ ಆರಂಭವಾಗುತ್ತದೆ
*ಸ್ಪರ್ಧಿಗಳು 9 ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕು.
*ಸ್ಪರ್ಧಿಗಳಿಗೆ ಡ್ರಾಯಿಂಗ್ ಶೀಟ್ ಮಾತ್ರ ಸ್ಥಳದಲ್ಲಿ ನೀಡಲಾಗುತ್ತದೆ.
*ಉಳಿದ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು.
*ಚಿತ್ರಕಲೆಯಲ್ಲಿ ಸ್ಕೆಚ್ ಪೆನ್, ಬಾಲ್ ಪೆನ್, ಕಲರ್ ಪೆನ್ಸಿಲ್, ಮಾರ್ಕರ್ ಬಳಸಲು ಅವಕಾಶವಿಲ್ಲ.
*ಅದೇ ದಿನ ಮಧ್ಯಾಹ್ನ ಸ್ಪರ್ಧೆಯ ತೀರ್ಪುಗಾರಿಕೆ ಮತ್ತು ಬಹುಮಾನ ವಿತರಣೆಯಾಗುತ್ತದೆ.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಣ್ಣುವಂಡ ಕಿಶೋರ್ ನಾಚಪ್ಪ (+919945635502) ಅವರಿಗೆ ವಾಟ್ಸಾಪ್ ಮಾಡುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಪ್ರತಿಯೊಬ್ಬ ಸ್ಪರ್ಧಿಗಳಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು