ಕೊಡಗು : ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 13 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರು ಸಾವಿಗೀಡಾಗಿದ್ದಾರೆ.
ಫ್ಯುಮಿಗೇಷನ್ ಹಿನ್ನಲೆಯಲ್ಲಿ ಭಾನುವಾರ ಆರ್.ಟಿ.ಪಿಸಿಆರ್ ಪ್ರಯೋಗಾಲಯ ಮುಚ್ಚಿದ್ದರಿಂದ ರ್ಯಾಪಿಡ ಆಂಟಿಜೆನ್ ಪರೀಕ್ಷೆ ಮೂಲಕ ಸೋಮವಾರಪೇಟೆ ತಾಲೂಕಿನಲ್ಲಿ 4 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 9 ಪ್ರಕರಣಗಳು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿನ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 33,209ರಷ್ಟಾಗಿದ್ದು, ಕಳೆದ 24ಗಂಟೆಗಳಲ್ಲಿ 69 ಮಂದಿ ಗುಣಮುಖರಾಗಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕು ಮುಕ್ತರಾದವರ ಸಂಖ್ಯೆ 32,313ರಷ್ಟಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ 488 ಸಕ್ರಿಯ ಪ್ರಕರಣಗಳಿದ್ದು, 86 ಕಂಟೈನ್ ಮೆಂಟ್ ವಲಯಗಳಿದ್ದು, ಪಾಸಿಟಿವಿಟಿ ದರ ಶೇ. 2.77ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಬ್ಬರು ಸೋಂಕಿಗೆ ಬಲಿಯಾಗುವುದರೊಂದಿಗೆ ಇದುವರೆಗೆ 408 ಮಂದಿ ಸಾವಿಗೀಡಾಗಿದ್ದಾರೆ.