News Karnataka Kannada
Friday, May 03 2024
ಹಾಸನ

ಅಭಿವೃದ್ದಿ ರಾಜಕಾರಣ ನೋಡಿ ಮತದಾರರು ಮತ ನೀಡಿ: ಬೆಳ್ಳಿಪ್ರಕಾಶ್

Voters should vote for development politics: Belliprakash
Photo Credit : News Kannada

ಬೀರೂರು: ಕಳೆದ ೫ವರ್ಷಗಳಲ್ಲಿ ಬೀರೂರು ಪಟ್ಟಣಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ೧೭ಕೋಟಿರೂ ನೀಡುವ ಮೂಲಕ ಪ್ರತಿ ೨೩ವಾರ್ಡಗಳಿಗೂ ಯಾವುದೇ ತಾರತಮ್ಯ ಮಾಡದೆ ಸರಿಸಮನಾಗಿ ಹಂಚುವ ಮೂಲಕ ಅಭಿವೃದ್ದಿ ಕಾಮಗಾರಿಗಳನ್ನು ನಡೆಸಲಾಗಿದೆ. ಆ ಅಭಿವೃದ್ದಿ ಕಾಮಗಾರಿಗಳನ್ನು ನೋಡಿ ನನಗೆ ಮತ ನೀಡುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್ ಕೋರಿದರು.

ಅವರು ಪಟ್ಟಣದ ಕೆ.ಎಲ್.ಕೆ.ಕಾಲೇಜು ಮೈದಾನದ ಮುಂಭಾಗದಿಂದ ತಮ್ಮ ಪ್ರಚಾರದ ವಾಹನವನ್ನೇರಿ ಸಾರ್ವಜನಿಕರ ಮುಂದೆ ಮತಯಾಚನೆ ನಡೆಸಿ ಮಾತನಾಡಿದರು.

ಬೆಳ್ಳಿಪ್ರಕಾಶ್ ಕೊಟ್ಟ ಮಾತನ್ನು ಯಾವತ್ತು ತಪ್ಪಿಲ್ಲ. ನಿಮ್ಮ ಸೇವೆ ಮತ್ತು ನನ್ನ ಕನಸಿನ ಕಡೂರು ಅಭಿವೃದ್ದಿಗಾಗಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನವನ್ನು ತರಲು ಹಗಲಿರುಳು ಶ್ರಮಿಸಿದ್ದೇನೆ. ಕ್ಷೇತ್ರದಲ್ಲಿ ರಸ್ತೆಗಳಿಗೆ, ನೀರಾವರಿಗೆ, ಕೈಗಾರಿಕೆಗಾಗಿ, ಆಸ್ಪತ್ರೆ ಅಭಿವೃದ್ದಿ, ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ, ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭಾಗವತ್ ನಗರಕ್ಕೆ ಜಮೀನು ಮಾಲಿಕರನ್ನು ಕರೆಸಿ ಸಮಸ್ಯೆ ಬಗೆಹರಿಸಿದ ಪರಿಣಾಮ ಇಂದು ಆ ಬಡಾವಣೆಗೆ ಉತ್ತಮ ಕೆಲಸವಾಗಿದೆ. ಮತ್ತೊಂದೆಡೆ ಮುಸ್ಲಿಂ ಸಮುದಾಯದವರಿಗೆ ಕಂಠಕಪ್ರಾಯವಗಿದ್ದ ಈದ್ಗಾ ಮೈದಾನವನ್ನು ಅವರ ಹೆಸರಿಗೆ ಖಾತೆ ಮಾಡಿಸಿಕೊಡಲಾಗಿರುವ ಪರಿಣಾಮ ಆ ಪ್ರೀತಿಗೆ ಬೆಲೆ ಕೊಟ್ಟು ಅನೇಕು ಮುಸ್ಲಿಂ ಬಾಂದವರು ಇಂದು ಪಕ್ಷ ಸೇರ್ಪಡೆಯಾಗಿ ನನಗೆ ಶಕ್ತಿ ತುಂಬಿದ್ದಾರೆ ಎಂದರು.

ಕಡೂರು ಕ್ಷೇತ್ರದ ರಸ್ತೆ ಅಭಿವೃದ್ದಿಗಾಗಿ ೪೦೦ಕೋಟಿ ಅನುದಾನವನ್ನು ತಂದಿದ್ದೇನೆ. ಟೀಕಿಸುವವರ ವಿರೋಧಿಗಳಿಗೆ ನನ್ನ ಅಭಿವೃದ್ದಿ ಕಾಮಗಾರಿಗಳನ್ನು ನೀವು ನೋಡಿ ಉತ್ತರಕೊಡಿ. ಶಾಸಕನ ಅನುಮತಿ ಇಲ್ಲದೆ ಕ್ಷೇತ್ರಕ್ಕೆ ಯಾವುದೇ ಅನುದಾನ ಬರುದಿಲ್ಲ ಎಂಬುದನ್ನು ವಿರೋದಿಗಳು ತಿಳಿಯಬೇಕು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಕೊರೋನಾದಂತಹ ಸಂಕಷ್ಟದ ಸಮಯದಲ್ಲಿ ಆರ್ಥಿಕ ಪರಿಸ್ಥಿತಿ ವಿಕೋಪದಲ್ಲಿ ಇದ್ದರು ಕೂಡ ಕಡೂರು ಕ್ಷೇತ್ರದ ರೈತರ ಅನುಕೂಲಕ್ಕಾಗಿ ನೀರಾವರಿಗಾಗಿ ಒತ್ತು ಕೊಟ್ಟು೧೨೮೧ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಭದ್ರಾ ಉಪಕಣಿವೆ ಯೋಜನೆಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಕೆರೆಗಳು ತುಂಬಿ ಬರದ ನಾಡಿನ ಹಣೆಪಟ್ಟಿ ಕಳಚಿ ಹಸಿರ ಕ್ಷೇತ್ರವಾಗುತ್ತದೆ ಎಂದರು.

ಇಂದು ಅಕ್ಕ-ಪಕ್ಕದ ದೇಶಗಳಲ್ಲಿನ ಪರಿಸ್ಥಿತಿಯನ್ನು ನೋಡಬಹುದು .ಆಹಾರಕ್ಕಾಗಿ ಪರಿತಪಿಸುತ್ತಿವೆ. ಇದನ್ನು ಮನಗಂಡು ಕೇಂದ್ರ ಮತ್ತು ರಾಜ್ಯದಲ್ಲಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ನಮ್ಮೆಲ್ಲರ ಭವಿಷ್ಯದ ಬಗ್ಗೆ ಯೋಚಿಸುತ್ತಿದೆ. ಇಂದು ನಾವೆಲ್ಲ ನೆಮ್ಮದಿಯಾಗಿರುವುದಕ್ಕೆ ಕಾರಣ ಪ್ರಧಾನಿ ಮೋದಿಜೀಯವರು.

ಕಳೆದ ೫ವರ್ಷಗಳ ನನ್ನ ಅವಧಿಯದಲ್ಲಿ ಕ್ಷೇತ್ರದಲ್ಲಿ ಯಾವುದೇ ಒಂದೇ ಒಂದುಜಾತಿ ಕಲಹ ಆಗಲು ಬಿಟ್ಟಿಲ್ಲ. ನಾವೆಲ್ಲ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ಜಾತಿ ರಾಜಕಾರಣವನ್ನು ನಾನು ಎಂದು ಮಾಡಿಲ್ಲ, ಮಾಡೋದು ಇಲ್ಲ. ನಾನು ಮಾಡಿರುವುದು ಸ್ನೇಹನರಾಜಕಾರಣ. ಮನುಷ್ಯನನ್ನ ಗುರತಿಸಿರುವೆ ಹೊರತು ಜಾತಿ ಗುರುತಿಸಿಲ್ಲ.

ಎಲ್ಲಾ ಪಕ್ಷದ ಜನರು ನಮ್ಮ ಬಳಿ ಬಂದು ಕೆಲಸ ಪಡೆದಿದ್ದಾರೆ. ಆದರೆ ಚುನಾವಣಾ ಸಮಯದಲ್ಲಿ ನನ್ನನ್ನು ವಿರೋಧ ಮಾಡುತಿದ್ದಾರೆ. ದೇವರು ಅಂತವರನ್ನುಚೆನ್ನಾಗಿ ಇಟ್ಟಿರಲಿ. ಅಂತವರಿಗೆ ನನು ಏನು ಉತ್ತರಕೊಡುವುದಿಲ್ಲ. ಅದಕ್ಕೆ ನನ್ನ ಪ್ರೀತಿಸುವ ಅಭಿಮಾನಿಗಳು, ಕಾರ್ಯಕರ್ತರು ಬರುವಂತಹ ಮೇ೧೩ರಂದು ವಿರೋದಿಗಳ ಟೀಕೆಗೆ ಉತ್ತರ ನೀಡಲಿದ್ದಾರೆ.

ಬಿಜೆಪಿ ಚುನಾವಣಾ ಪ್ರಚಾರ ಪಟ್ಟಣದರಾಜ್ಯ ಹೆದ್ದಾರಿ ಮೂಲಕ ಸಾಗುತ್ತಾ ಬರುವಾಗ ಪ್ರೀತಿಕ್ಯಾಂಟೀನ್ ಮುಂಭಾಗ ಮುಸ್ಲಿಂ ಭಾಂದವರು ಕೆಂಪು ಗುಲಾಭಿ ಹಾರವನ್ನು ಮೆರವಣಿಗೆಯ ಪ್ರಚಾರ ವಾಹನದಲ್ಲಿದ್ದ ಬೆಳ್ಳಿಪ್ರಕಾಶ್ ಗೆ ಹಾಕಿ, ಮತ್ತೊಮ್ಮೆ ಬೆಳ್ಳಿ ಎನ್ನುವಜಯಘೋಷವನ್ನುಕೂಗುತ್ತಿದ್ದರೆ, ಮತ್ತೊಂದೆಡೆ ಬೆಳ್ಳಿ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆ ಸುರಿಗೈದರು.
ಮೆರವಣಿಗೆಯಲ್ಲಿ ಬಿಜೆಪಿ ಮುಖಂಡ ರುಗಳು, ಸಾವಿರಾರುಕಾರ್ಯಕರ್ತರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು