News Karnataka Kannada
Wednesday, May 01 2024
ಚಿಕಮಗಳೂರು

ಚಿಕ್ಕಮಗಳೂರು: ನೇಕಾರ ಜನಾಂಗದ ಅಭಿವೃದ್ಧಿಗೆ ಬಿಜೆಪಿಯಿಂದ ನಾನಾ ಕೊಡುಗೆ

Bjp's various contributions to the development of weavers
Photo Credit : News Kannada

ಚಿಕ್ಕಮಗಳೂರು: ನೇಕಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಅವರು ನಗರದಲಿ ಬಿಜೆಪಿ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳೊಂದಿಗೆ ನೇಕಾರ ಬೀದಿಯ ನೇಕಾರ ಸಮುದಾಯದವರ ಮನೆ ಮನೆಗೆ ತೆರಳಿ ಶಾಸಕ ಸಿ.ಟಿ.ರವಿ ಪರಮತ ಯಾಚನೆ ಮಾಡಿದರು.

ಈ ವೇಳೆ ನೇಕಾರ ಸಮುದಾಯದವರೊಂದಿಗೆ ಮಾತುಕತೆ ನಡೆಸಿದ ಸೋಮಶೇಖರ್, ರಾಜ್ಯ ಬಿಜೆಪಿ ಸರ್ಕಾರನೇಕಾರ ಸಮುದಾಯದ ಏಳಿಗೆಗೆ ರೂಪಿಸಿರುವ ಯೋಜನೆಗಳನ್ನು ಮತ್ತು ಜನಾಂಗದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು.

ಇದುವರೆಗೆ ಯಾವುದೇ ಸರ್ಕಾರಗಳು ಮಾಡದಷ್ಟು ಅಭಿವೃದ್ದಿ ಕೆಲಸಗಳನ್ನು ರಾಜ್ಯ ಬಿಜೆಪಿ ಸರ್ಕಾರಮಾಡಿದೆ, ಎಲ್ಲಾ ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯ ಕ್ಕೊಳಗಾಗಿದ್ದ ನೇಕಾರ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಸರ್ಕಾರ ನೇಕಾರರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದೆ. ೨ಲಕ್ಷ ಶೂನ್ಯ ಬಡ್ಡಿದರದಲ್ಲಿ ನೇಕಾರರಿಗೆ ಸಾಲ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೇಕಾರರಿಗೆ ಸಹಾಯ ಧನ ನೀಡುವುದು ಸೇರಿದಂತೆ ಅವರ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ ಎಂದು ಹೇಳಿದರು. ರಾಜ್ಯದಲ್ಲಿ ೬೦ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ನೇಕಾರ ಸಮುದಾಯ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಭರವಸೆ ನೀಡಿದರು.

ಜಿಲ್ಲಾ ನೇಕಾರರ ಒಕ್ಕೂಟದ ಕಾರ್ಯಾಧ್ಯಕ್ಷ ಎಚ್.ಎಂ.ನಾರಾಯಣ ಮಾತನಾಡಿ, ಶಾಸಕ ಸಿ.ಟಿ.ರವಿಯವರು ನೇಕಾರ ಸಮುದಾಯದ ಏಳಿಗೆಗೆ ೨೦ಲಕ್ಷರೂ. ಅನುದಾನ ನೀಡಿದ್ದಾರೆ. ಮೆಡಿಕಲ್‌ಕಾಲೇಜು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದು ತಿಳಿಸಿದರು.

ನೇಕಾರ ಅಭಿವೃದ್ದಿ ನಿಗಮದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ರಾಜೇಂದ್ರ, ಖಜಾಂಚಿ ನವೀನ್ ಬಿಲ್ಲಾಳ್, ಕಾರ್ಯದರ್ಶಿ ದಯಾನಂದ್‌ಶೆಟ್ಟಿಗಾರ್, ಜಿಲ್ಲಾಸಹ ಕಾರ್ಯದರ್ಶಿ ಬಿ.ಎಂ.ಕುಮಾರ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು