News Karnataka Kannada
Thursday, May 02 2024
ಹಾಸನ

ಮದ್ಯ ಸೇವಿಸಿ ರಸ್ತೆಯಲ್ಲಿ ನಂಗಾನಾಚ್: ವೀಡಿಯೊ ವೈರಲ್

video goes viral
Photo Credit : News Kannada

ಹಾಸನ: ಮದ್ಯವ್ಯಸನಿಯೊಬ್ಬ ನಡು ರಸ್ತೆಯಲ್ಲಿ ಬೆತ್ತಲೆಯಾಗಿ ನೃತ್ಯ ಮಾಡಿರುವವಿಡಿಯೋವೊಂದು ವೈರಲ್ ಆಗಿದೆ. ಹಾಸನದ ಅರಕಲಗೂಡು ಪಟ್ಟಣದ ಸಮೀಪ ಯುವಕರು ಹುಚ್ಚಾಟದ ವೀಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾರ್ ಒಂದರಲ್ಲಿ ಪಾನ ಮತ್ತರಾದ ಯುವಕರ ಗ್ಯಾಂಗ್ ಹೊರಗೆ ಬಂದವರೇ ಜತೆಗೆ ಇದ್ದವನನ್ನು ವಿವಸ್ತ್ರಗೊಳಿಸಿದ್ದಾರೆ. ಬಳಿಕ ಸ್ನೇಹಿತರು ಆತನನ್ನು ರಸ್ತೆಯಲ್ಲಿ ಅಟ್ಟಾಡಿಸಿದ್ದಾರೆ. ಕುಡಿತದ ಅಮಲಿನಲ್ಲಿ ಬೆತ್ತಲೆ ನೃತ್ಯ ಮಾಡಿ ಮಂಗಾಟ ಮಾಡಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜತೆಗೆ ಇದ್ದವನ ವಿವಸ್ತ್ರಗೊ ಳಿಸಿ ಕಾರಿನಲ್ಲಿ ಅಟ್ಟಾಡಿಸಿದ ಕಿಡಿಗೇಡಿ ಸ್ನೇಹಿತರು ರಾತ್ರಿ ಎಣ್ಣೆ ಪಾರ್ಟಿ ಮಾಡಿದ, ನಾಲ್ವರು ಯುವಕರಿಂದ ಈ ಹುಚ್ಚಾಟ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಯುವಕನನ್ನು ಬೆತ್ತಲುಗೊಳಿಸಿ ಕಾರನಲ್ಲಿ ಅಟ್ಟಾಡಿಸಿಕೊಂಡು ಕ್ರೌರ್ಯ ಮೆರೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಅರಕಲಗೂಡು ಪೊಲೀಸರು ಪ್ರಕರಣದ ವಿಚಾರಣೆಗಿಳಿದಿದ್ದಾರೆ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗದಿದ್ದರೂ ಪೊಲೀ ಸರೇ ಸ್ವಯಂಪ್ರೇರಿತವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು