News Karnataka Kannada
Saturday, April 27 2024
ಹಾಸನ

ಹಾಸನ: ೩ನೇ ದಿನಕ್ಕೆ ಅರಣ್ಯ ವಲಯದ ದಿನಗೂಲಿ-ಹೊರಗುತ್ತಿಗೆ ನೌಕರರ ಧರಣಿ

Hassan: Strike by daily wage-outsourced workers in the forest sector
Photo Credit : News Kannada

ಹಾಸನ: ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ/ ಪಿ.ಸಿ.ಪಿ., ಪ್ರಸ್ತುತ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆ ಹಾಗೂ ಶೋಷಣೆ ವಿರುದ್ಧ ನಗರದ ಬಿ.ಎಂ. ರಸ್ತೆ ಬಳಿ ಇರುವ ಅರಣ್ಯ ಭವನದ ಮುಂದೆ ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯ ಅರಣ್ಯ ಇಲಾಖೆ ಸರಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ಸದಸ್ಯರು ೩ನೇ ದಿನವು ಕೂಡ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದರೂ ಇಷ್ಟು ದಿವಸ ಸ್ಪಂದಿಸಿರುವುದಿಲ್ಲ. ಹಾಸನ ವೃತ್ತದ ತುಮಕೂರು ಮತ್ತು ಹಾಸನ ಪ್ರಾದೇಶಿಕ/ ಸಾಮಾಜಿಕ ವಿಭಾಗಗಳ ವ್ಯಾಪ್ತಿ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ೧೫-೨೦ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ಇಲಾಖೆಯಿಂದ ಸಿಗುವ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಕೆಲವು ತಿಂಗಳು ಸಂಬಂಳ ನೀಡಿದರೆ ಮತ್ತೆ ಕೆಲವು ತಿಂಗಳು ಸಂಬಳವನ್ನೇ ಕೊಡುವುದಿಲ್ಲ. ಈಗಾಗಲೇ ಐದು ತಿಂಗಳಿಂದ ಸಂಬಳವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದೇವೆ. ಕೊಡುವ ಸಂಬಳದಲ್ಲೂ ಕಡಿಮೆ ಕೊಡುತ್ತಿದ್ದಾರೆ.

ಅಧಿಕಾರಿಗಳಿಂದ ನಮ್ಮ ಮೇಲೆ ಶೋಷಣೆ ನಡೆಯುತ್ತಿದೆ ಎಂದು ದೂರಿದರು. ಬೇಡಿಕೆ ಈಡೇರಿಕೆಗೆ ಈ ಹಿಂದೆಯೂ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದವು. ಆದರೆ ಕೆಲವೊಂದು ಲೋಪ ದೋಷಗಳಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ನಡುತೋಪು ಕಾಯಲು ನಾವು ಬೇಕು. ಬೆಂಕಿ ನಂದಿಸಲು ನಮ್ಮನ್ನು ಬಳಸಿಕೊಳ್ಳುತ್ತಾರೆ. ಚಿರತೆಗೆ ಬೋನು ಅಳವಡಿಸಲು, ವನ್ಯಜೀವಿ ಸಂರಕ್ಷಣೆ ಮಾಡಲು, ರಾತ್ರಿ-ಹಗಲು ಕಾವಲು ಕಾಯಲು, ಕಾಡಾನೆ ಓಡಿಸಲು ಹೀಗೆ ಪ್ರತಿಯೊಂದು ಅರಣ್ಯ ಇಲಾಖೆ ಕೆಲಸ ಕಾರ್ಯಗಳಿಗೆ ನಮ್ಮನ್ನು ಬಳಸಿಕೊಳ್ಳುತ್ತಾರೆ ಆದರೆ ಇದವರೆಗೂ ನಮ್ಮನ್ನುಇಲಾಖೆಯ ನೌಕರರೆಂದು ಪರಿಗಣಿಸಿರುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಕುಟುಂಬಕ್ಕೆ ೧-೪-೧೯೮೯ರಿಂದ ಮಾಸಿಕ ವೇತನ ನೀಡಬೇಕು. ಇವರು ಕೆಲಸ ಮಾಡಿರುವ ಬಗ್ಗೆ ಇಲಾಖೆಗೆ ದಾಖಲೆ ನೀಡಿ ಕೋರ್ಟ್ ಹೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹತ್ತು ವರ್ಷ ಪೂರೈಸಿರುವ ನೌಕರರನ್ನು ಖಾಯಂಗೊಳಿಸಿ ಅವರಿಗೆ ಪಿಂಚಣಿ, ಗ್ರಾಚುಟಿ, ಅನುಕಂಪದ ಕೆಲಸ ಇತ್ಯಾದಿ ಸೌಲಭ್ಯ ನೀಡಬೇಕು. ತಿಪಟೂರು ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೀರಲಿಂಗಯ್ಯ ಎಲ್.ಹೆಚ್., ಶಂಕರ ಅವರನ್ನು ಕೆಲಸದಲ್ಲಿ ಮುಂದುವರೆಸಿ ಅವರಿಗೆ ಬಾಕಿ ಇರುವ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಬುಕ್ಕಾ ಪಟ್ಟಣ/ಶಿರಾ ಪ್ರಾದೇಶಿಕ ಅರಣ್ಯ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಹೆಚ್. ರಂಗನಾಥ್, ಹೇಮ್ಮನಾಯ್ಕ, ನಾಗರಾಜಯ, ಈರಣ್ಯ, ಧನಂಜಯ, ಎಸ್.ಆರ್ ಮೂರ್ತಿ, ಇವರನ್ನು ಕೆಲಸದಲ್ಲಿ ಮುಂದುವರೆ ಇಲಾಖಾ ದರಪಟ್ಟಿಯಂತೆ ವೇತನ ನೀಡಬೇಕು.ಈಗಾಗಲೇ ಅರ್ಧಂಬರ್ಧ ನೀಡಿರುವ ವೇತನದ ಬಗ್ಗೆ ಪರಿಶೀಲಿಸಿ ಪೂರ್ಣಪ್ರಮಾಣದಲ್ಲಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಸಕಲೇಶಪುರ ವಲಯದಲ್ಲಿ ಕಾಡಾನೆ ನಿಯಂತ್ರಣ ಕ್ಯಾಂಪ್‌ಗಳಿಗೆ ನೇಮಕಗೊಂಡ ಅರಣ್ಯ ವೀಕ್ಷಕರುಗಳನ್ನು ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಬಳಸಿಕೊಳ್ಳದೆ ಅರಣ್ಯ ವೀಕ್ಷಕರುಗಳನ್ನು ಅಧಿಕಾರಿಗಳ ಮನೆ ಕೆಲಸ ಹಾಗೂ ವಾಹನ ಚಾಲನೆ ಬಳಸಿಕೊಳ್ಳುತ್ತಿದ್ದು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು ಸರ್ಕಾರ ಕೂಡಲೇ ಮುತುವರ್ಜಿ ವಹಿಸಿ ನಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಕಳೆದ ಮೂರು ದಿನಗಳಿಂದಲೂ ಧರಣಿ ಮಾಡಲಾಗುತ್ತಿದ್ದರೂ ಇದುವರೆಗೂ ಯಾವ ಅಧಿಕಾರಿಗಳು ಕೂಡ ಬಂದು ನಮ್ಮ ಬೇಡಿಕೆ ಬಗ್ಗೆ ಸ್ಫಂದಿಸಿರುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಧರಣಿಯಲ್ಲಿ ರಾಜ್ಯ ಅರಣ್ಯ ಇಲಾಖೆ ಸರಕಾರಿ ದಿನಗೂಲಿ ಪಿಸಿಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ ನೌಕರರ ಸಂಘದ ರಾಜ್ಯಾಧ್ಯಕ್ಷೆ ಹೆಚ್.ಜಿ. ಹೇಮಲತ, ಎಲ್.ಹೆಚ್. ಬೀರಲಿಂಗಯ್ಯ, ಶಿವಣ್ಣ, ಶಂಕರ್, ಶಿವಕುಮಾರ್, ಬೀರಪ್ಪ, ಸಣ್ಣಸ್ವಾಮಿ, ರಂಗನಾಥ್, ಬೀರಲಿಂಗಯ್ಯ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು