News Karnataka Kannada
Monday, May 13 2024
ಹಾಸನ

ಬೇಲೂರು: ವೃದ್ದೆಯ ಮೇಲೆ ಮಂಗ ದಾಳಿ, ಗಂಭೀರ ಗಾಯ

Belur: Monkey attacks elderly woman
Photo Credit : News Kannada

ಬೇಲೂರು: ಇತ್ತಿಚೆಗೆ ಮಂಗಗಳ ಹಾವಳಿ ಹೆಚ್ಚುತ್ತಿದ್ದು, ಮನುಷ್ಯರ ಮೇಲೂ ದಾಳಿ ನಡೆಸುತ್ತಿರುವ ಪ್ರಕರಣ ವರದಿಯಾಗುತ್ತಿದೆ. ಮನೆಯ ಮುಂದೆ ಕೆಲಸ ಮಾಡುತ್ತಿದ್ದ ವೃದ್ದೆಯ ಮೇಲೆ ಮಂಗ ದಾಳಿ ನಡೆಸಿದ ಪರಿಣಾಮ ವೃದ್ಧೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಕೋಗಿಲಮನೆ ಗ್ರಾ. ಪಂ. ವ್ಯಾಪ್ತಿಯ ಮಾಳಗರೆ ಗ್ರಾಮದ ಪಾರ್ವತಮ್ಮ ಎಂಬ ವೃದ್ಧೆ ಎಂದಿ ನಂತೆ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಮಂಗ ಏಕಾಏಕಿ ದಾಳಿ ನಡೆಸಿದ ಪರಿಣಾಮ ವೃದ್ದೆ ಪಾರ್ವತಮ್ಮನ ತಲೆ ಮತ್ತು ಕೈಗಳಿಗೆ ಪೆಟ್ಟಾಗಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಳಗೆರೆ ತಾರಾನಾಥ್ ಮಾತನಾಡಿ, ಮಾಳಗೆರೆ ಗ್ರಾಮದಲ್ಲಿ ಒಂಟಿ ಮಂಗನ ಉಪಟಳದಿಂದ, ನಾಗರಿಕರು ಹೈರಾಣಾಗಿದ್ದು, ಆತಂಕದಿಂದ ಕಾಲ ಕಳೆಯುವಂತಾಗಿದೆ. ಕಳೆದ ಒಂದು ವಾರದಿಂದ ಈ ಒಂಟಿ ಮಂಗನ ಉಪಟಳ ಹೆಚ್ಚಾಗಿದೆ, ಇನ್ನೂ ನಾವುಗಳು ಮಂಗನ ಮೇಲೆ ಹಲ್ಲೆ ಮಾಡಿದರೆ ಪ್ರಕರಣ ದಾಖಲಿ ಸುವ ಅಧಿಕಾರಿಗಳು ಮಾತ್ರ ಮಂಗನ ಹಿಡಿಯಲು ಮುಂದಾಗುತ್ತಿಲ್ಲ, ಈ ಕೂಡಲೇ ಈ ಒಂಟಿ ಮಂಗನನ್ನು ಹಿಡಿಯ ಬೇಕೆಂದು ಆಗ್ರಹಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು