News Karnataka Kannada
Wednesday, May 01 2024
ಹಾಸನ

ಬೇಲೂರು: ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿ- ರಾಜಶೇಖರ್‌ಗೆ ಕಾರ್ಯಕರ್ತರ ಒತ್ತಾಯ

Belur: Activists urge Rajasekhar to stand as rebel candidate
Photo Credit : News Kannada

ಬೇಲೂರು: ನಾನು ನಾಯಕನಾಗಲು ಬಂದಿಲ್ಲ ಸೇವಕನಾಗಲು ಬಂದಿದ್ದೇನೆ. ಮುಂದಿನ ಸಭೆಯಲ್ಲಿ ನೀವುಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಗ್ರಾನೈಟ್ ರಾಜಶೇಖರ್ ಹೇಳಿದರು.

ಪಟ್ಟಣದ ಬಿಕ್ಕೋಡು ರಸ್ತೆಯ ಕಾಂಗ್ರೆಸ್ ಜನಸ್ಪಂದನ ಕಚೇರಿಯಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾನೈಟ್ ರಾಜಶೇಖರ್ ಅಭಿಮಾನಗಳ ಸಭೆಯಲ್ಲಿ ಮಾತನಾಡಿದ ಅವರು, ಸತ್ತಂತೆ ಇದ್ದ ಕಾಂಗ್ರೆಸ್ ಪಕ್ಷವನ್ನು ನಾನು, ವೈ.ಎನ್.ಕೃಷ್ಣೇಗೌಡ, ಇ.ಎಚ್.ಲಕ್ಷ್ಮಣ್ ಒಂದೂಗೂಡಿ ಪಕ್ಷದಲ್ಲಿ ಕಡೆಗಣಿಸಿದ್ದ ಕಾರ್ಯಕರ್ತರನ್ನು ಮಾತನಾಡಿಸಿ, ಕಾರ್ಯಕರ್ತರಿಗೆ ಹುರುಪು ತುಂಬಿ ಪಕ್ಷವನ್ನು ಬಲಪಡಿಸಿದ್ದೇವು, ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದ ೪ ಜನರನ್ನು ಕುಳಿತು ಮಾತನಾಡಿಸದೆ ಏಕಾಏಕಿ ಬಿ.ಶಿವರಾಂ ಅವರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ ನಲ್ಲಿ ಸಮಾಜಿಕ ನ್ಯಾಯ ದೊರೆಯುಂತೆ ಎಂದು ನಾನು ಅಂದುಕೊಂಡಿದ್ದೆ ಆದರೆ ಅದು ದೊರೆತ್ತಿಲ್ಲ, ಪಕ್ಷದ ನಾಯಕರುಗಳು ನಮ್ಮನ್ನು ಕರೆದು ಸರಿಯಾದ ಭರವಸೆ ನೀಡುತ್ತಾರೊ, ಇಲ್ಲವೂ ನೋಡಿ ಅದರ ಮೇಲೆ ತೀರ್ಮಾನ ತೆಗೆದುಕೊಳ್ಳೋಣ ಎಂದರು.

ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಗ್ರಾನೈಟ್ ರಾಜಶೇಖರ್ ಅವರಿಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಪಕ್ಷದ ಕೆಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಮಲ್ಲೇಶ್ ಮಾತನಾಡಿ, ತಾಲ್ಲೂಕಿನ ಕಾಂಗ್ರೆಸ್ ನಲ್ಲಿ ಸರ್ವಧಿಕಾರ ನಡೆಯುತ್ತಿದೆ, ಇನ್ನ ಎರಡು ವರ್ಷದಲ್ಲಿ ಕ್ಷೇತ್ರದಲ್ಲಿ ಕಾಂಗ್ರಸ್ ನ ಸ್ಥಳೀಯ ನಾಯಕರು ಇಲ್ಲದಂತಾಗುತ್ತಾರೆ. ಈ ಭಾರಿ ರಾಜಶೇಖರ್ ಅವರಿಗೆ ಟಿಕೆಟ್ ವಂಚಿತವಾಗಿರುವುದು ಅನ್ಯಾಯವಾಗಿದೆ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.

ಪುರಸಭಾ ಮಾಜಿ ಸದಸ್ಯ ಕುಮಾರಸ್ವಾಮಿ( ಅರುಣ್) ಮಾತನಾಡಿ, ಮೂಲ ಕಾಂಗ್ರೆಸ್ ಕಾರ್ಯಕರ್ತರ ಆಶಯಗಳಿಗೆ ಬೆಲೆ ಕೊಡದೇ ಒಲಸೆ ಬಂದವರ ಗುಂಪಿಗೆ ಪ್ರಾಧಾನ್ಯತೆ ಕೊಡಲಾಗಿದೆ, ಜಿಲ್ಲೆಯಲ್ಲಿ ನಾಲ್ಕುಲಕ್ಷ ಜನಸಂಖ್ಯೆ ಇರುವ ವೀರಶೈವ,ಲಿಂಗಾಯತ ಸಮಾಜಕ್ಕೆ ಅನ್ಯಾಯವಾಗಿದೆ, ಸಮಾಜಿಕ ನ್ಯಾಯ ಎನ್ನುವ ಕಾಂಗ್ರೆಸ್ ಪಕ್ಷದಲ್ಲಿ ಸಮಾಜಿಕ ನ್ಯಾಯ ಇಲ್ಲದೆ ಅನ್ಯಾಯವಾಗಿದೆ. ಗ್ರಾನೈಟ್ ರಾಜಶೇಖರ್ ಬಂಡಾಯ ಅಭ್ಯರ್ಥಿಯಾಗಿ ಸ್ಪಂದಿಸಬೇಕು, ನಾವೆಲ್ಲ ದುಡಿಯಲು ಸಿದ್ಧರಿದ್ದೇವೆ ಎಂದರು.

ಚಿಕ್ಕಬ್ಯಾಡಿಗೆರೆ ಮಂಜುನಾಥ್ ಮಾತನಾಡಿ,ಬಿ.ಶಿವರಾಂ ಬಣದವರು ಮೊದಲಿನಿಂದಲೂ ನಮ್ಮಗೆ ಅವಮಾನಿಸುತ್ತಿದ್ದಾರೆ.ಅವರು ನಮ್ಮ ಶಕ್ತಿಯನ್ನು ಕುಂದಿಸಲು ಅಮಿಷಗಳನ್ನು ಒಡ್ಡಿ ಪ್ರಯತ್ನಿಸುತ್ತಾರೆ ಆದರೆ ನಾವುಗಳು ಒಗ್ಗಾಟ್ಟಾಗಿ ಇರೋಣ ಎಂದರು.

ಗೋಣಿಸೋಮನಹಳ್ಳಿ ಗಂಗಾಧರ್ ಮಾತನಾಡಿ, ಬಿ.ಶಿವರಾಂ ಅಳಿಯ ಡಿ.ಕೆ.ಶಿವಕುಮಾರ್ ಅವರ ಇ.ಡಿ.ಕೇಸ್ ನಲ್ಲಿ ಸಾಕ್ಷಿಯಲ್ಲಿ ಎ೨ ಅಗಿದ್ದಾರೆ,ಅವರು ಉಲ್ಟಾ ವಡೆದರೆ ನಾನು ಒಳಕ್ಕೆ ಹೋಗುತ್ತೇನೆಂದು ಇಷ್ಟವಿಲ್ಲದಿದ್ದರೂ ಟಿಕೆಟ್ ನೀಡಿದ್ದಾರೆ. ಸಿದ್ಧರಾಮಯ್ಯನವರು ನನ್ನ ಎದುರಿಗೆ ಬಿ.ಶಿವರಾಂ ಅವರಿಗೆ ನೀನು ಗೆಲ್ಲಲ್ಲ ನಿನಗೆ ಟಿಕೆಟ್ ಕೊಡಲ್ಲ ಎಂದು ಹತ್ತು ಭಾರಿ ಹೇಳಿದ್ದಾರೆ ಎಂದರು.

ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜಶೇಖರ್ ಜನರ ಪ್ರೀತಿಗಳಿಸಿದ್ದು ಅವರಿಗೆ ಟಿಕೆಟ್ ನೀಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ.ರಾಜಶೇಖರ್ ಬಂಡಾಯವಾಗಿ ಸ್ವರ್ಧಿಸಿದ್ದಾರೆ ಸಹಕಾರ ನೀಡುವುದಾಗಿ ತಿಳಿಸಿದರು.

ಬಿಕ್ಕೋಡು ಅಸಿಪ್ ಮಾತನಾಡಿ, ನಾನು ಬಿ.ಶಿವರಾಂ ಜೊತೆ ಇದ್ದವನು, ಅವರು ಪಕ್ಷದಲ್ಲಿ ಒಡೆದು ಅಳುವ ನೀತಿಯನ್ನು ಅನುಸರಿಸುತ್ತಾರೆ, ಅವರು ಗೆದ್ದರೆ ಪಕ್ಷದ ಕಾರ್ಯಕರ್ತರಿಗೆ ಉಳಿಗಾಲವಿಲ್ಲ, ನಾನು ಯಾವುದೇ ಕಾರಣಕ್ಕೂ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋವಿನಹಳ್ಳಿ ರವಿ ಮಾತನಾಡಿ, ಬಿ.ಶಿವರಾಂ ಬೆಂಬಲಿಗರು ಇಂದು ನನಗೆ ಕರೆ ಮಾಡಿ ಅಣ್ಣನ ಜೊತೆ ಬಂದರೆ ಶಾಸಕರಾದ ನಂತರ ನಿನ್ನಗೆ ಮರಳು ಒಡೆಯಲು ಅವಕಾಶ ಕೊಡಿಸುತ್ತೇವೆ ಎಂದು ಅಮಿಷ ಒಡ್ಡಿದ್ದಾರೆ ಎಂದರು.

ವೈ.ಎನ್.ಕೃಷ್ಣೇಗೌಡ ಮಾತನಾಡಿ,ಪಕ್ಷದಿಂದ ಎಲ್ಲಾ ಹುದ್ದೆಯನ್ನು ಅನುಭವಿಸಿದ್ದ ಬಿ.ಶಿವರಾಂ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣರಾದರು ಎಂದು ನೋವು ತೊಡಿಕೊಂಡರು. ಮುಖಂಡರಾದ ಬಿ.ಎಲ್.ಧರ್ಮೆಗೌಡ, ಬಿ.ಎನ್.ದೇವರಾಜು, ಹಳೇಬೀಡು ವಿರೂಪಾಕ್ಷ, ವಿಜಯ್ ಕುಮಾರ್, ಚೇತನ್, ಭರತ್, ಶರತ್, ಮಂಜುನಾಥ್ ಇತರರು ಇದ್ದರು.
ಬೇಲೂರಿನ ಕಾಂಗ್ರೆಸ್ ಜನಸ್ಪಂದನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾನೈಟ್ ರಾಜಶೇಖರ್ ಅಭಿಮಾನಗಳ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು