News Karnataka Kannada
Saturday, April 27 2024
ಹಾಸನ

ಹಾಸನ: ಯುವತಿಯನ್ನು ಚುಡಾಯಿಸಿದ ಯುವಕನಿಗೆ ಥಳಿಸಿ ಬೆತ್ತಲೆ ಮೆರವಣಿಗೆ

Mangaluru: Restrictions extended for two more days in mangaluru
Photo Credit :

ಹಾಸನ : ಯುವತಿ ಚುಡಾಯಿಸಿದ್ದಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ ಘಟನೆ ಹಾಸನದ ಮಹಾರಾಜ ಪಾರ್ಕ್ ನಲ್ಲಿ ನಡೆದಿದೆ.

ಹಲವು ದಿನಗಳಿಂದ ಯುವತಿಯ ಹಿಂದೆ ಬಿದ್ದಿದ್ದ ಯುವಕ ಮಹಾರಾಜ ಪಾರ್ಕ್ ನಲ್ಲಿ ಯುವತಿ ನಡೆದುಕೊಂಡು ಬರುವಾಗ ಹಿಂದಿನಿಂದ ಬಂದು ಕೈ ಹಿಡಿದು ಎಳೆದಿದ್ದಾನೆ.

ಇದನ್ನು ನೋಡುತ್ತಿದ್ದ ಯುವಕರ ಗುಂಪು ಆತನನ್ನು ಹಿಡಿದು ಬೆತ್ತಲೆಗೊಳಿಸಿ ಥಳಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ತಡೆಯಲು ಬಂದವರಿಗೆ ಥಳಿಸುವುದಾಗಿ ಬೆದರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕಂಡು ಬಂದಂತೆ ಹಲ್ಲೆ ನಡೆಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು