News Karnataka Kannada
Thursday, May 09 2024
ದೆಹಲಿ

ರೋಬೋ ನಡೆಸಿದ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿ

ಮೂತ್ರಪಿಂಡ ಬಳಸಿ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದಜಂಗ್‌ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಯನ್ನು ನಡಿಸಿದ್ದಾರೆ.
Photo Credit : NewsKarnataka

ನವದೆಹಲಿ: ಮೂತ್ರಪಿಂಡ ಬಳಸಿ ವೈಫಲ್ಯದಿಂದ ಬಳಲುತ್ತಿದ್ದ 39 ವರ್ಷದ ರೋಗಿಯೊಬ್ಬರಿಗೆ ದೆಹಲಿಯ ಸಫ್ದಜಂಗ್‌ ಆಸ್ಪತ್ರೆಯಲ್ಲಿ ರೊಬೊ ಬಳಸಿ ಯಶಸ್ವಿಯಾಗಿ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಯನ್ನು ನಡಿಸಿದ್ದಾರೆ.

ದಾನಿಗಳ ನಿರೀಕ್ಷೆಯಲ್ಲಿದ್ದ ಉತ್ತರ ಪ್ರದೇಶದ ಫರೂಕಾಬಾದ್‌ ಗ್ರಾಮದ ವ್ಯಕ್ತಿಗೆ ಅವರ ಪತ್ನಿ ಮೂತ್ರಪಿಂಡ ದಾನ ಮಾಡಿದ್ದಾರೆ. ಡಯಾಲಿಸಿಸ್‌ನಲ್ಲಿ ಈ ವ್ಯಕ್ತಿಗೆ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಯನ್ನು ಡಾ. ಅನೂಪ್‌ ಕುಮಾರ್‌ ನೇತೃತ್ವ ಸಫದರ್‌ಜಂಗ್‌ ಆಸ್ಪತ್ರೆ ಮತ್ತು ವಿಎಂಎಂಸಿ ವೈದ್ಯರ ತಂಡ ನಡೆಸಿದೆ. ಇದರಲ್ಲಿ ರೊಬೊಟಿಕ್ಸ್‌ ಹಾಗೂ ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸಕ ತಜ್ಞರು ಇದ್ದರು.

ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡುವ ಸರ್ಕಾರಿ ಆಸ್ಪತ್ರೆಯಲ್ಲಿ ರೊಬೊ ಬಳಿಸಿ ನಡೆಸಿದ 2ನೇ ಶಸ್ತ್ರಚಿಕಿತ್ಸೆ ಇದು ಎಂದು ಅಲ್ಲಿನ ವೈದ್ಯರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ʻಮೂತ್ರಪಿಂಡ ಚಿಕಿತ್ಸಾ ವಿಭಾಗದ ಡಾ. ಹಿಮಾಂಶು ವರ್ಮಾ, ಅರಿವಳಿಕೆ ತಜ್ಞ ಡಾ. ಮಧು ದಯಾಳ್‌ , ವಿಎಂಎಂಸಿ ಪ್ರಾಧ್ಯಾಪಕ ಡಾ. ಬಿ.ಎಲ್‌. ಶೆರ್ವಾಲ್‌ ಅವರು ಇದರಲ್ಲಿ ಪಾಲ್ಗೊಂಡಿದ್ದರುʼ ಎಂದು ಡಾ. ಅನೂಪ್‌ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು