News Karnataka Kannada
Friday, May 03 2024
ಹಾಸನ

ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡಿದರೆ ಪೋಷಕರಿಗೆ 20 ಸಾವಿರ ರೂ.ದಂಡ

Untitled 1
Photo Credit :

ಹಾಸನ: ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡುವ ಪೋಷಕರಿಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದುಉ, ವಾಹನ ಚಾಲನೆ ಮಾಡಿದ ಬಾಲಕನ ಪೋಷಕರಿಗೆ ಜೆಎಂಎಫ್‌ಸಿ ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.

ಅಪ್ರಾಪ್ತ ಬಾಲಕ ವಾಹನ ಚಲಾಯಿಸುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ 2021 ಹಳೇಬೀಡು ವ್ಯಾಪ್ತಿಯಲ್ಲಿ ನಡೆದಿತ್ತು.

ಈ ಹಿನ್ನೆಲೆ 2022ರ ಮೇ 26 ರಂದು ನ್ಯಾಯಾಲಯದಲ್ಲಿ ಸಿವಿಲ್ ಜೆಎಂಎಫ್‍ಸಿ ನ್ಯಾಯಾಧೀಶ ರಾದ ಸಿ.ಪ್ರಸನ್ನ ಕುಮಾರ್ ವಿಚಾರಣೆ ನಡೆಸಿದರು. ಈ ವೇಳೆ ನ್ಯಾಯಾಧೀಶರು, ಅಪ್ರಾಪ್ತ ಬಾಲಕ ನಿಯಮ ಉಲ್ಲಂಘಿಸಿದ ಹಿನ್ನೆಲೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ.184 ಅಡಿಯಲ್ಲಿ ಕೇಸ್ ದಾಖಲಿಸಿ ಚಾಲನೆ ಮಾಡುತ್ತಿದ್ದ ಬಾಲಕ ಅಜಾಗರೂಕತೆ, ಹೆಲ್ಮೆಟ್ ಇಲ್ಲದೆ ಚಾಲನೆ, ಲೈಸೆನ್ಸ್ ಇಲ್ಲದೆ ಚಾಲನೆ ಮಾಡಿದ್ದರಿಂದ ತಲಾ ಒಂದೊಂದು ಸಾವಿರದಂತೆ ನಾಲ್ಕು ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತ ಬಾಲಕನಿಗೆ ವಾಹನ ನೀಡಿದ ಮಾಲೀಕನಿಗೆ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು