ಹಾಸನ: ಆರ್ಎಸ್ಎಸ್ ಕುರಿತಾದ ತಮ್ಮ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಇಂದು ಮತ್ತೊಂದು ರಾಜಕೀಯ ಬಾಂಬ್ ಸ್ಫೋಟಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಆರ್ ಎಸ್ ಎಸ್ ಕಾರಣ. ಆರ್ ಎಸ್ ಎಸ್ ಬಗ್ಗೆ ನನ್ನ ಹೇಳಿಕೆ ಹಿಟ್ ಆ್ಯಂಡ್ ರನ್ ಅಲ್ಲ. ನಾನು ಸೂಕ್ತ ಮಾಹಿತಿ ಇಟ್ಟುಕೊಂಡೇ ಮಾತನಾಡಿದ್ದೇನೆ. ನಿಜ ಏನೆಂದು ರಾಜ್ಯದ ಜನರೇ ಚರ್ಚೆ ಮಾಡಲಿ ಎಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆರ್ ಎಸ್ ಎಸ್ ಹೇಳಿಕೆ ಬಗ್ಗೆ ಹೆಚ್ಡಿಕೆ ಜೊತೆ ಮಾತನಾಡುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಈ ಪ್ರತಿಕ್ರಿಯೆ ನೀಡಿದ್ದಾರೆ.
ಬಿಎಸ್ವೈ ಅವರ ಅಧಿಕಾರ ಹೋಗಲು ಆರ್ಎಸ್ಎಸ್ ನವರೇ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆ ವಿಚಾರದ ಬಗ್ಗೆ ಪಾಪ ಅವರು ಮಾತನಾಡ್ತರಂತಾ. ಆರ್ ಎಸ್ ಎಸ್ ಬಗ್ಗೆ ನಾನೇನು ಪ್ರಾರಂಭ ಮಾಡಿದ್ದೀನಿ ಅದು ಹಿಟ್ ಅಂಡ್ ರನ್ ಅಲ್ಲಾ. ಈ ಬಗ್ಗೆ ಸೂಕ್ತ ಮಾಹಿತಿ ಜೊತೆಗೆ ಮಾತಾಡಿದ್ದೀನಿ ಎಂದು ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ ನೀಡಿದರು.