News Karnataka Kannada
Friday, May 17 2024
ಮೈಸೂರು

ದಾಖಲೆ ಯೋಗಾಸನಗಳೊಂದಿಗೆ ಮೋದಿಗೆ ಉಡುಗೊರೆ

PM Modi to watch Chandrayaan-2 from South Africa
Photo Credit :

ಮೈಸೂರು: ವಿಶ್ವ ಯೋಗ ದಿನವನ್ನು ಮೈಸೂರಿನಲ್ಲಿ ಆಚರಿಸಲು ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ 15 ಯೋಗಪಟುಗಳು ವಿವಿಧ ಯೋಗಾಸನಗಳ ವಿಶ್ವದಾಖಲೆಯ ಉಡುಗೊರೆಯೊಂದಿಗೆ ಸ್ವಾಗತಿಸಲು ಮುಂದಾಗಿದ್ದಾರೆ.

 ಜೈನ ಬೇಗಂ ಒಂದು ನಿಮಿಷದಲ್ಲಿ ಅತಿ ಹೆಚ್ಚು ಗಂಡು ಭೇರುಂಡ ಮತ್ತು ಪೂರ್ಣ ಭುಜಂಗಾಸನದ ಚಕ್ರ, ಎ.ಎಂ.ದಿವ್ಯ ಒಂದುನ ನಿಮಿಷದಲ್ಲಿ ಅತಿ ಹೆಚ್ಚು ದ್ವಿಪಾದ ವಾಲಿಕಿಲ್ಯಾಸನ ಮತ್ತು ಉಗ್ರ ವಿಪರೀತ ಶಲಭಾಸನ ಚಕ್ರ, ಸಿತಾರ ಅತ್ಯಂತ ಕಡಿಮೆ ಅವಧಿಯಲ್ಲಿ 100 ವೈವಿಧ್ಯಮಯ ಸ್ಟಿಕ್ ಯೋಗಾಸನಗಳ ದಾಖಲೆಯ ಪ್ರಯತ್ನ.

ಅಂಕಿತಾ ಒಂದು ನಿಮಿಷದಲ್ಲಿ ಕ್ಲಿಷ್ಟಕರ ಗರಿಷ್ಠ ಆಸನಗಳ ದಾಖಲೆಯ ಪ್ರಯತ್ನ, ಪಾವನಿ ದೇಸಾಯಿ ಒಂದು ನಿಮಿಷದಲ್ಲಿ ಗರಿಷ್ಠ ಉಪವಿಷ್ಟಕೋನಾಸನ ತಿಕ್ಷಿಚುವಿಕೆಯ ದಾಖಲೆಯ ಪ್ರಯತ್ನ, ಹೇಮಂತ್ ಯೋಗ ಕುರ್ಚಿಯ ಮೇಲೆ ಶೀರ್ಷಬದ್ದಕೋನಾಸನದ ಅತಿ ದೀರ್ಘಕಾಲ ನಿಲ್ಲುವ ದಾಖಲೆಯ ಪ್ರಯತ್ನ, ಎಂ.ವರ್ಷ ಏಕಪಾದ ಶೀರ್ಷಾಸನದಲ್ಲಿ ಅತಿ ಹೆಚ್ಚು ಆಸನಗಳನ್ನು ಒಂದು ನಿಮಿಷದಲ್ಲಿ ಪೂರೈಕೆ, ಆರ್.ಅಶ್ವಿತ ಒಂದು ನಿಮಿಷದಲ್ಲಿ ಗರಿಷ್ಠ ಉಪವಿಷ್ಠ ಕೋನಾಸನ ಮತ್ತು ಗಂಡು ಭೇರುಂಡಾಸನ ಚಕ್ರದ ದಾಖಲೆ, ಎಂ.ಉಷಾ ಒಂದು ನಿಮಿಷದಲ್ಲಿ ಗರಿಷ್ಠ ಉಪವಿಷ್ಠ ಕೋನಾಸನ ಮತ್ತು ಗಂಡು ಭೇರುಂಡಸನ ಚಕ್ರದ ದಾಖಲೆ, ಟಿ.ಮಯೂರ್ ಯೋಗ ಕುರ್ಚಿಯ ಮೇಲೆ ಶೀರ್ಷ ಪದ್ಮಾಸನದಲ್ಲಿ ಅತಿ ದೀರ್ಘಕಾಲ ತಲೆಯ ಮೇಲೆ ನಿಲ್ಲುವ ದಾಖಲೆ.

ಆರ್.ರಾಜು ಭದ್ರಸಾನ ಬ್ಯಾಲೆನ್ಸ್ ಆನ್ ಯೋಗ ರಿಂಗ್ ಅಂಡ್ ಸ್ಟೂಲ್, ಸಿತಾರ ಒಂದು ನಿಮಿಷದಲ್ಲಿ ಅತಿ ಹೆಚ್ಚು ಸ್ಟಿಕ್ ಯೋಗಾಸನಗಳ ದಾಖಲೆ, ಡಿ.ಜಯಂತು ಯೋಗ ಮತ್ತು ಕುರ್ಚಿಯ ಮೇಲೆ ಅತಿ ದೀರ್ಘ ಸಮಯದ ಪ್ರಸರಿತ ಶೀರ್ಷಾಸನದ ದಾಖಲೆ, ಸೌರಭ ಮತ್ತು ಸುರಭಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಕ್ಲಿಷ್ಟಕರ ಜೋಡಿ ಯೋಗಾಸನಗಳ ದಾಖಲೆ ಪ್ರಯತ್ನ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು