News Karnataka Kannada
Saturday, May 04 2024
ಚಾಮರಾಜನಗರ

ದಿವಾಳಿ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಅಸಾಧ್ಯ : ಯಡಿಯೂರಪ್ಪ ಕಿಡಿ

ರಾಜ್ಯದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿರುವ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ, ಖಜಾನೆ ಖಾಲಿಯಾಗಿ ಅಭಿವೃದ್ಧಿ ಮರೀಚಿಕೆಯಾಗಿ ಹೋಗಿದೆ ರಾಜ್ಯದ ಉದ್ದಗಲಕ್ಕೂ ಎಲ್ಲಿ ನೋಡಿದರೂ ಸಹ ಒಂದು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
Photo Credit : NewsKarnataka

ಚಾಮರಾಜನಗರ: ರಾಜ್ಯದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿರುವ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷೆ ಹೇಗೆ ಸಾಧ್ಯ, ಖಜಾನೆ ಖಾಲಿಯಾಗಿ ಅಭಿವೃದ್ಧಿ ಮರೀಚಿಕೆಯಾಗಿ ಹೋಗಿದೆ ರಾಜ್ಯದ ಉದ್ದಗಲಕ್ಕೂ ಎಲ್ಲಿ ನೋಡಿದರೂ ಸಹ ಒಂದು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್.ಬಾಲರಾಜು ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರು ಬಾಲರಾಜು ಅವರನ್ನ ಆಯ್ಕೆ ಮಾಡುವ ಶಪಥ ಮಾಡಿದ್ದೀರಾ ಆ ವಿಶ್ವಾಸ ನನಗಿದೆ ಆದುದರಿಂದ ನಮ್ಮ ಕಾರ್ಯಕರ್ತರು ಮನೆಮನೆಗೆ ಹೋಗಿ ಮತದಾರರನ್ನ ಭೇಟಿ ಮಾಡಿ ಬಾಲರಾಜು ಅವರ ಬಗ್ಗೆ ಮನವರಿಕೆ ಮಾಡುವ ಮೂಲಕ ಅಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದವರು ಬಹಳ ಹಗುರವಾಗಿ ಮಾತನಾಡುತ್ತಾರೆ , ಹಣ ಹೆಂಡ ತೋಳ್ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ, ವೋಟ್ ಬ್ಯಾಂಕ್ ಗಾಗಿ ಗ್ಯಾರಂಟಿ ಸುಳ್ಳು ಭರವಸೆಗಳನ್ನ ಕೊಟ್ಟು ಜನರನ್ನ ಮರುಳು ಮಾಡಲೊರಟಿದ್ದಾರೆ ಇದು ಪಲಪ್ರದವಾಗುವುದಿಲ್ಲ. ಕೇಂದ್ರದ ಅಕ್ಕಿಯನ್ನ ಜನರಿಗೆ ವಿತರಿಸಿ ನಾವೇ ನೀಡುತ್ತಿರುವುದು ಎಂದು ಬೊಬ್ಬೆ ಹೊಡೆಯುವ ನಿಮಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿಯವರ ಅಭಿವೃದ್ಧಿ ಕೆಲಸಗಳು ಜನರ ಮುಂದಿವೆ, ಇಡೀ ಜಗತ್ತು ಕೊಂಡಾಡುವಂತ ವ್ಯಕ್ತಿ ನರೇಂದ್ರಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದರು. ಮೋದಿ ಆಡಳಿತದಲ್ಲಿ ದೇಶ ಸುಭಿಕ್ಷತೆಯಿಂದ ಕೂಡಿದೆ, ಇತ್ತೀಚಿಗೆ ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಕಾಂಗ್ರೇಸ್ ಪರೋಕ್ಷವಾಗಿ ಬೆಂಬಲ ಕೊಡುತ್ತಿದೆ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಕುರಿತು ಸಮರ್ಥನೆ ಮಾಡಿಕೊಳ್ಳುತ್ತಾರೆ, ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿಯ ಕೊಲೆ ವಿಚಾರದಲ್ಲಿ ದುಷ್ಕರ್ಮಿ ಪರ ಹೇಳಿಕೆ ನೀಡುವ ಕಾಂಗ್ರೆಸ್ ಆಡಳಿತದಲ್ಲಿ ದೇಶದ ಭದ್ರತೆ ಅಸಾಧ್ಯವಾದ ಮಾತು ಎಂದರು.

ಮಾಜಿ ಶಾಸಕ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮಾತನಾಡಿ ನರೇಂದ್ರಮೋದಿ ಅವರು ಪ್ರಧಾನಿಯಾಗಲು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು ಎನ್ನುವ ಸಂಕಲ್ಪವನ್ನ ಯಡಿಯೂರಪ್ಪ ಅವರು ಮಾಡಿದ್ದಾರೆ. ರಾಜ್ಯ ಸರ್ಕಾರ ಕೀಳು ಮಟ್ಟದ ಚೆಂಬು ಜಾಹಿರಾತು ಕೊಟ್ಟಿದ್ದಾರೆ ಆದರೆ ರಾಜ್ಯದಿಂದ ಚೊಂಬನ್ನ ಖಾಲಿ ಮಾಡಿ ಕೊಟ್ಟಿದ್ದು ಕಾಂಗ್ರೆಸ್ಸಿನವರು ಅದನ್ನ ನರೇಂದ್ರ ಮೋದಿಯವರು ಅಕ್ಷಯ ಪಾತ್ರೆ ಮಾಡಿಕೊಟ್ಟಿದ್ದಾರೆ. ಕರೋಣ ವೇಳೆ ಆರು ತಿಂಗಳಲ್ಲಿ ಔಷಧಿ ಕಂಡುಹಿಡಿದು 240 ಕೋಟಿ ಚುಚ್ಚುಮದ್ದು ಕೊಟ್ಟು ಜನರನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಕಿಶಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ರೈತ ವಿಧ್ಯಾನಿದಿ, ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವಂತ ವ್ಯವಸ್ಥೆ ಮಾಡಿದ್ದಾರೆ.

25 ಸಾವಿರ ಕೋಟಿ ಎಸ್ ಇ ಪಿ, ಟಿ ಎಸ್ಪಿ ಹಣವನ್ನ ಗ್ಯಾರಂಟಿಗೆ ಬಳಸಿ ದಲಿತರಿಗೆ ಚೊಂಬು ಕೊಟ್ಟಿದ್ದು ಸಿದ್ದರಾಮಯ್ಯ , ಬಿಜೆಪಿ ಜನಪರ ಯೋಜನೆಗಳನ್ನ ಜಾರಿಗೆ ತಂದು ಸಹಕಾರಿಯಾಗಿತ್ತು ಆದರೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳನ್ನ ಕೊಟ್ಟು ಬಲಗೈಯಲ್ಲಿ ಕೊಡುವ ಹಾಗೆ ಮಾಡಿ ಎಡಗೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದು ಲೇವಡಿ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು