News Karnataka Kannada
Saturday, May 11 2024
ಚಾಮರಾಜನಗರ

ಹನೂರು: ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ

Steps to be taken to issue cultivation cards to farmers
Photo Credit : By Author

ಹನೂರು: ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿರುವ ಕಡತಗಳನ್ನು ಶೀಘ್ರವೇ ವಿಲೇವಾರಿ ಮಾಡಿ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಆರ್ ನರೇಂದ್ರ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಕರೆಯಲಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಅಕ್ರಮ ಸಕ್ರಮದಡಿಯಲ್ಲಿ ಇದುವರೆಗೆ 3998 ಅರ್ಜಿಗಳು ಸಲ್ಲಿಕೆಯಾಗಿದ್ದು, 311ಅರ್ಜಿಗಳು ತಿರಸ್ಕಾರಗೊಂಡಿದೆ. ಉಳಿಕೆ 3687 ಅರ್ಜಿಗಳನ್ನು ಸರ್ವೆ ಮಾಡಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರದಲ್ಲಿ ವಿಲೇವಾರಿ ಮಾಡಿ ಅರ್ಹ ಫಲಾನುಭವಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ತಿಳಿಸಿದರು.

ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಣ್ಣ ನಗರ ಗ್ರಾಮದಲ್ಲಿ ರೈತರಿಗೆ ನೀಡಲಾಗಿದ್ದ ಸರ್ವೆ ನಂಬರ್ ಬದಲಾಗಿ ಇತರೆ ಸರ್ವೇ ನಂಬರ್ ನಲ್ಲಿ ಅನುಭವ ಇರುವುದರಿಂದ ತೊಂದರೆಯಾಗಿತ್ತು.ಇದಲ್ಲದೆ ಹೂಗ್ಯಂ ಗ್ರಾಮದಲ್ಲಿನ 2 ಸಾವಿರ ಎಕರೆ ಪೈಕಿ ಇನ್ 211 ಎಕರೆಯನ್ನು ರೈತರಿಗೆ ಮಂಜೂರು ಮಾಡಲಾಗಿದೆ. ಇಲ್ಲಿಯೂ ಸಹ ಮುಂಜೂರಾಗಿರುವ ನಿವೇಶನ ಬದಲು ಇತರೆ ಸರ್ವೇ ನಂಬರ್ ನಲ್ಲಿ ಅನುಭವ ಇರುವುದರಿಂದ ಇದೂ ಸಹ ತಿದ್ದುಪಡಿ ಮಾಡಿ ಅನುಭವದಲ್ಲಿರುವವರೆಗೆ ಆರ್ ಟಿಸಿ ನೀಡುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನ ನಾಗಣ್ಣನಗರ, ಕೆಂಪಯ್ಯನಟ್ಟಿ, ಭೈರನತ್ತ,ನಾಗನತ್ತ ದೊಡ್ಡಮಾಲಾಪುರ, ಚೆನ್ನೂರು,ಮಂಚಾಪುರ, ವಡ್ಡರದೊಡ್ಡಿ, ಹೊಸಳ್ಳಿ, ಕೆ ಗುಂಡಾಪುರ, ಮಂಚಾಪುರ, ಬಿ ಗುಂಡಾಪುರ, ವಡ್ಡರದೊಡ್ಡಿ, ನಾಲ್ ರೋಡ್, ಮಲ್ಲಯನಪುರ ಚಂಗದಾರಹಳ್ಳಿ ಅಂಡೆ ಕುರುಬರದೊಡ್ಡಿ, ಬೋರೆದೊಡ್ಡಿ, ಕೂಡ್ಲೂರು, ನೆಲ್ಲೂರು, ಮಾರಳ್ಳಿ ಗ್ರಾಮಗಳನ್ನು ಹೊಸ ಕಂದಾಯ ಗ್ರಾಮವನ್ನಾಗಿ ಮಾಡಲು ಈಗಾಗಲೇ ಸೂಚನೆ ಹೊರಡಿಸಲಾಗಿದೆ ಎಂದು ತಹಸೀಲ್ದಾರ್ ಆನಂದಯ್ಯ ತಿಳಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಾದ ಆರ್ ಎಸ್ ದೊಡ್ಡಿ, ದೊಡ್ಡಾಣೆ, ಕೊಕ್ಕಬರೆ, ತೋಕೆರೆ, ವಡ್ಡರದೊಡ್ಡಿ, ಹುತ್ತೂರು, ಅಂಬಿಕಾಪುರ, ನಾಗಣ್ಣನಗರ,, ಪುದುರಾಮಾಪುರ, ದೊಮ್ಮನಗದ್ದೆ, ಸತ್ತಿಮಂಗಲ, ಅರ್ಜುನ ದೊಡ್ಡಿ, ಗೊಲ್ಲರದಿಂಬ, ಕೆ ಗುಂಡಾಪುರ ಮಾರಳ್ಳಿ, ಮಂಚಾಪುರ, ಪಚ್ಚೆದೊಡ್ಡಿ, ಬಿ ಜಿ ದೊಡ್ಡಿ ವಿಎಸ್ ದೊಡ್ಡಿ, ಮಾವತ್ತೂರು, ಉದ್ದಟ್ಟಿ, ಜೀರಿಗೆಗದ್ದೆ ಗ್ರಾಮಗಳಲ್ಲಿ ಸ್ಮಶಾನ ಇಲ್ಲದಿರುವ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ವರದಿ ಪಡೆಯಲಾಗಿದ್ದು ಸರ್ಕಾರಿ ಜಮೀನು ಇರುವ ಕಡೆ ನಿವೇಶನ ಗುರುತಿಸಲಾಗಿದೆ.ತಕ್ಷಣ ಸ್ಮಶಾನ ಇಲ್ಲದಿರುವ ಗ್ರಾಮಗಳಿಗೆ ಸ್ಮಶಾನ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ 4ವರ್ಷಗಳಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ,ಮೋಟಾರ್ ದುರಸ್ತಿಗೊಂಡರೆ ತಕ್ಷಣವೇ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದು ಇಒ ಶ್ರೀನಿವಾಸ್ ರವರಿಗೆ ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಆನಂದಯ್ಯ, ಗ್ರೇಡ್-2 ತಹಸೀಲ್ದಾರ್ ಧನಂಜಯ, ಉಪ ತಹಸೀಲ್ದಾರ್ ಗಳಾದ ಉಮಾ, ಸುರೇಖಾ, ಕಂದಾಯ ನಿರೀಕ್ಷಕರುಗಳಾದ ಮಹದೇವಸ್ವಾಮಿ, ಬಿ.ಪಿ.ಮಾದೇಶ್, ಶಿವಕುಮಾರ್ ಗ್ರಾಮ ಲೆಕ್ಕಿಗರುಗಳಾದ ಶೇಷಣ್ಣ, ರಾಜು, ವಿನೋದ್, ಮಹದೇವ್ ಪ್ರಸಾದ್,ಕಾರ್ತಿಕ್,ಪುನೀತ್,ಮಾರುತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು