News Karnataka Kannada
Sunday, April 28 2024
ಚಾಮರಾಜನಗರ

ಹುತಾತ್ಮ ಡಿಸಿಎಫ್‌ ಶ್ರೀನಿವಾಸನ್‌ ಕಟ್ಟಿಸಿದ್ದ ದೇವಾಲಯಕ್ಕೆ ನಿತ್ಯ ಪೂಜೆ

Mariyamma Temple 26 6 21 (1)
Photo Credit :

ಚಾಮರಾಜನಗರ : ಸಮಾಜಕ್ಕೆ ಹೀರೋ ಆದವರೊಬ್ಬರು ಹಾಗೂ ಕಾಡಿಗೆ ಕಂಟಕನಾಗಿದ್ದ ವ್ಯಕ್ತಿಯೊಬ್ಬರು. ಇವರಿಬ್ಬರೂ ಒಂದೇ ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದು, ಒಂದರಲ್ಲಿ ನಿತ್ಯ ಪೂಜೆಯಾಗುತ್ತಿದ್ದರೇ ಇನ್ನೊಂದು ದೇವಾಸ್ಥಾನ ಭೂತ ಬಂಗಲೆಯಂತಾಗಿದೆ. ಚಾಮರಾಜನಗರ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಸ್ಥಾನದಲ್ಲಿ ನಿತ್ಯ ಪೂಜೆ-ಪುನಸ್ಕಾರ ನಡೆಯುವ ಜೊತೆಗೆ ಶ್ರೀನಿವಾಸನ್ ಅವರ ಭಾವಚಿತ್ರಕ್ಕೆ ಪ್ರಥಮ ಪೂಜೆ ನಡೆಯುತ್ತಿದೆ. ಆದರೆ, ಕಾಡುಗಳ್ಳ ವೀರಪ್ಪನ್ ನಿಂದ ಜೀರ್ಣೋದ್ಧಾರಗೊಂಡ ಪೆರುಮಾಳ್ ದೇವಾಲಯಕ್ಕೆ ಯಾರೂ ಹೋಗದೇ ಭಣಭಣ ಎನ್ನುತ್ತಿದ್ದು‌, ಈಗಲೂ ವೀರಪ್ಪನ್ ಬಗ್ಗೆ ಒಂದು ನಿರ್ಲಕ್ಷ್ಯ ಈ ಊರಿನಲ್ಲಿ ಎದ್ದು ಕಾಣುತ್ತದೆ. ಬೇಟೆ ಮಾಡಿದ ಬಳಿಕ ಹಣ ಹಂಚಿಕೊಳ್ಳುವಾಗ ವೀರಪ್ಪನ್ ಗೆ ಎರಡು ಪಾಲು, ಉಳಿದವರಿಗೆ ಒಂದು ಪಾಲಿನ ಜೊತೆಗೆ ದೇವರಿಗೂ ಒಂದು ಪಾಲೆಂದು ಹಣ ಎತ್ತಿಡಲಾಗುತ್ತಿತ್ತು.‌ ದೇವರಿಗೆ ಎತ್ತಿಡುತ್ತಿದ್ದ ಹಣದಿಂದಲೇ ಪುದೂರು ಸಮೀಪದಲ್ಲಿ ಪೆರುಮಾಳ್ ದೇವಸ್ಥಾನವನ್ನು ವೀರಪ್ಪನ್ ಕಟ್ಟಿಸಿದ್ದ, ಪ್ರತಿ ವರ್ಷ ಜಾತ್ರೆ ಮಾಡಿ, ರಾತ್ರಿ ವೇಳೆ ನಾಟಕವನ್ನು ಆಡಿಸುತ್ತಿದ್ದ.‌ ಅದಾದ ಬಳಿಕ, ಪೊಲೀಸರು‌ ಅವನ ಮೇಲೆ ಹದ್ದಿನ ಕಣ್ಣಿಟ್ಟ ಬಳಿಕ ಜನರು‌‌ ದೇವಾಲಯಕ್ಕೆ ಹೋಗುವುದು ಕಡಿಮೆಯಾಯಿತು. ವೀರಪ್ಪನ್ ಸತ್ತ ಮೇಲೂ ಕೆಲವು ವರ್ಷ ಹಬ್ಬ ನಡೆದಿದೆಯಾದರೂ ಅಷ್ಟೇನೂ ಜನರು ಹೋಗುವುದಿಲ್ಲ ಎನ್ನುತ್ತಾರೆ ಗೋಪಿನಾಥಂ ಗ್ರಾಮಸ್ಥರು. ವೀರಪ್ಪನ್ ಪತ್ನಿ ಇಲ್ಲವೇ ಆತನ ಸಂಬಂಧಿಕರು ಆಗೊಮ್ಮೆ-ಈಗೊಮ್ಮೆ ತೆರಳಿ ಪೂಜೆ ಮಾಡಿ ಬರುತ್ತಾರೆ. ಉಳಿದ ಜನರಂತೂ ಯಾರೂ ಪೆರುಮಾಳ್ ದೇವಸ್ಥಾನಕ್ಕೆ ಹೋಗುವುದಿಲ್ಲ. ಅರಣ್ಯಾಧಿಕಾರಿ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಲಯದಲ್ಲಿ ನಿತ್ಯ ಪೂಜೆ ಪುರಸ್ಕಾರ ನಡೆಯುತ್ತಿದೆ, ಈಗಲೂ ನಮಗವರೂ ಸಾಹೇಬರೇ, ಅವರಿಗೆ ಪ್ರಥಮ ಪೂಜೆ ಎನ್ನುತ್ತಾರೆ ಗ್ರಾಮಸ್ಥರು. ಒಟ್ಟಿನಲ್ಲಿ ಒಳ್ಳೇತನಕ್ಕಷ್ಟೇ ಬೆಲೆ ಎಂಬುದಕ್ಕೆ ಈ ಇಬ್ಬರು ವ್ಯಕ್ತಿಗಳು ಕಟ್ಟಿಸಿದ ದೇವಾಲಯಗಳೇ ಸಾಕ್ಷಿಯಾಗಿದ್ದು ಜನರು ಎಷ್ಟೇ ಮುಂದುವರೆದರೂ ಕೊನೆತನಕ ಇರುವುದು ಸಮಾಜಮುಖಿ ಕೆಲಸಗಳಷ್ಟೇ ಎಂಬುದು ನಿಜವಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು