News Karnataka Kannada
Tuesday, April 30 2024
ಚಾಮರಾಜನಗರ

ಚಾಮರಾಜನಗರ : ಸೆಲ್ಫಿ ಕ್ಲಿಕ್ಕಿಸುವಾಗ ಜಲಪಾತಕ್ಕೆ ಬಿದ್ದು ಯುವಕ ಬಲಿ

ವೈದ್ಯನೋರ್ವ ಕಾಂಗ್ರೆಸ್ ಮುಖಂಡನ ಹೆಸರನ್ನ ಡೆತ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ.
Photo Credit : IANS

ಚಾಮರಾಜನಗರ : ಸೆಲ್ಫಿ ಹುಚ್ಚಿನಿಂದಾಗಿ ಸಾಕಷ್ಟು ಅವಾಂತರಗಳು ನಡೆದರೂ ಯುವ ಪೀಳಿಗೆಗೆ ಮಾತ್ರ ಇಂದಿಗೂ ಬುದ್ಧಿ ಬರುತ್ತಿಲ್ಲ. ಹೀಗೆ ಹೊಗೆನಕಲ್ ಜಲಪಾತದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೈಸೂರು ಮೂಲದ ಸಂಗಮೇಶ್ ಎಂಬುವರ ಮಗ ಉಮಾಶಂಕರ್(19) ಎಂಬ ನರ್ಸಿಂಗ್ ವಿದ್ಯಾರ್ಥಿ, ಸ್ನೇಹಿತರೊಂದಿಗೆ ರಜೆಯ ಹಿನ್ನೆಲೆಯಲ್ಲಿ ಹೊಗೆನಕಲ್ ಗೆ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗು ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಉಮಾಶಂಕರ್ ನೊಂದಿಗೆ ರವಿಕುಮಾರ್, ಶಿವಪ್ರಸಾದ್ ಎಂಬವರೊಟ್ಟಿವೆ ರಜೆಯ ಮಜಾ ಅನುಭವಿಸಲು ತೆರಳಿದ್ದಾಗ ಈ ಅವಘಡ ಸಂಭವಿಸಿದೆ.

ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್, ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿ ತನ್ನ ಸ್ನೇಹಿತರನ್ನು ಫೋಟೋ ತೆಗೆಯುವಂತೆ ಹೇಳಿದ್ದಾನೆ‌. ಸ್ನೇಹಿತರು ಪೋಟೋಗಳನ್ನು ತೆಗೆದ ನಂತರ, ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ ಎನ್ನಲಾಗಿದೆ.

80 ಅಡಿಗಳಿಗಿಂತಲೂ ಆಳವಾದ ಜಾಗದಲ್ಲಿ ಉಮಾಶಂಕರ್ ಜಾರಿ ಬಿದ್ದಿದ್ದು, ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ತೆರಳಿ ಗೋಪಿನಾಥಂನ ನುರಿತ ಈಜುಗಾರರಿಂದ ಶವ ಹುಡುಕಾಟದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು