News Karnataka Kannada
Wednesday, May 01 2024
ಮೈಸೂರು

98.56 ಕೋಟಿ ರೂ. ಮೌಲ್ಯದ ಬಿಯರ್, ಕಚ್ಚಾ ವಸ್ತು ಖಾಕಿ ವಶ

ಜಿಲ್ಲೆಯ ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ 98.56 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತುಗಳನ್ನು ಖಾಕಿ ವಶಕ್ಕೆ ಪಡೆದಿದೆ.
Photo Credit : NewsKarnataka

ಮೈಸೂರು: ಜಿಲ್ಲೆಯ ಚಾಮರಾಜನಗರದಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂಜನಗೂಡಿನ ಯುಬಿ ತಯಾರಿಕಾ ಘಟಕದಲ್ಲಿ 98.56 ಕೋಟಿ ರೂ. ಮೌಲ್ಯದ ಬಿಯರ್ ಹಾಗೂ ಕಚ್ಚಾ ವಸ್ತುಗಳನ್ನು ಖಾಕಿ ವಶಕ್ಕೆ ಪಡೆದಿದೆ.

ಅಬಕಾರಿ ಅಧಿಕಾರಿಗಳ ಯಶಸ್ವಿ ಕಾರ್ಯಚರಣೆಯಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಕೋಟಿ ಕೋಟಿ ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ. 6.03 ಲಕ್ಷ ರೂ. ಬಿಯರ್ ಪೆಟ್ಟಿಗೆ, ಟ್ಯಾಂಕ್‌ನಲ್ಲಿದ್ದ 66.16 ಲಕ್ಷ ಲೀಟರ್ ಬಿಯರ್, 6.5 ಲಕ್ಷ ಕೆ.ಜಿ ಕಚ್ಚಾ ವಸ್ತು ಸೇರಿದಂತೆ 98.52 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.

ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ 7000 ಬಿಯರ್‌ ಪಟ್ಟಿಗೆಗಳನ್ನು ಪತ್ತೆ ಮಾಡಲಾಗಿದ್ದು ಹೆಚ್ಚುವರಿ ಬಿಯರ್ ತಯಾರಿಸಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಸದ್ಯ 17 ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿ ಅಬಕಾರಿ ಪೊಲೀಸರಿಂದ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು